ಕರ್ನಾಟಕ

karnataka

ETV Bharat / sports

ಭಾರತ ಟೆಸ್ಟ್​ ತಂಡದ ನಂಬರ್​ 1 ನಾಯಕ ಕೊಹ್ಲಿಯ ದಾಖಲೆಗಳ ವಿವರ..

ವಿರಾಟ್​ ಕೊಹ್ಲಿ ನಾಯಕನಾಗಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್​ ಮತ್ತು ಆಸ್ಟ್ರೇಲಿಯಾದಲ್ಲಿ ಹೆಚ್ಚು ಟೆಸ್ಟ್​ ಪಂದ್ಯ ಗೆದ್ದ ಏಷ್ಯಾದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ನಾಲ್ಕು ರಾಷ್ಟ್ರಗಳಲ್ಲಿ ಕೊಹ್ಲಿ 23 ಟೆಸ್ಟ್​ ಪಂದ್ಯಗಳಲ್ಲಿ ಮುನ್ನಡೆಸಿ 7 ಗೆಲುವು ಮತ್ತು 13 ಸೋಲು ಹಾಗೂ 3 ಡ್ರಾ ಸಾಧಿಸಿದ್ದಾರೆ..

Virat kohli's captaincy records in test Cricket
ವಿರಾಟ್​ ಕೊಹ್ಲಿ ದಾಖಲೆಗಳು

By

Published : Jan 16, 2022, 4:18 PM IST

ಹೈದರಾಬಾದ್​(ಡೆಸ್ಕ್​) :ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​ ಸರಣಿ ಸೋಲಿನ ಬಳಿಕ ವಿರಾಟ್​ ಕೊಹ್ಲಿ ತಮ್ಮ ಟೆಸ್ಟ್​ ತಂಡದ ನಾಯಕತ್ವವನ್ನು ತ್ಯಜಿಸಿದ್ದಾರೆ. ಈ ನಿರ್ಧಾರ ಅಭಿಮಾನಿಗಳಿಗಷ್ಟೇ ಅಲ್ಲ, ಕ್ರಿಕೆಟ್ ವಲಯಕ್ಕೂ ಆಘಾತ ತಂದಿದೆ. ಭಾರತ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ್ದ ಕೊಹ್ಲಿ ಹಲವಾರು ದಾಖಲೆಗಳೊಂದಿಗೆ ತಮ್ಮ ನಾಯಕತ್ವದ ದಿನಗಳನ್ನು ಕೊನೆಗಾಣಿಸಿದ್ದಾರೆ.

ಹೆಚ್ಚು ಟೆಸ್ಟ್​ ಪಂದ್ಯ ಗೆದ್ದ ವಿಶ್ವದ 4ನೇ ನಾಯಕ

  • ಗ್ರೇಮ್​ ಸ್ಮಿತ್​ 109 ಪಂದ್ಯ​ - 53 ಗೆಲುವು-29 ಸೋಲು
  • ರಿಕಿ ಪಾಂಟಿಂಗ್​- 77 ಪಂದ್ಯ​-48 ಗೆಲುವು-16 ಸೋಲು
  • ಸ್ಟೀವ್​ ವಾ- 57 ಪಂದ್ಯ​-41 ಗೆಲುವು-9 ಸೋಲು
  • ವಿರಾಟ್​ ಕೊಹ್ಲಿ- 68 ಪಂದ್ಯ​- 40 ಗೆಲುವು-17 ಸೋಲು
  • ಕ್ಲೈವ್​ ಲಾಯ್ಡ್​- 93 ಪಂದ್ಯ​-32 ಗೆಲುವು-12 ಸೋಲು
  • ಅಲೆನ್ ಬಾರ್ಡರ್​-93ಪಂದ್ಯ​-32 ಗೆಲುವು-22 ಸೋಲು

ಭಾರತೀಯ ನಾಯಕರ ಟೆಸ್ಟ್​ ದಾಖಲೆ

  • ವಿರಾಟ್​ ಕೊಹ್ಲಿ- 68 ಪಂದ್ಯ​- 40 ಗೆಲುವು-17 ಸೋಲು
  • ಎಂಎಸ್ ಧೋನಿ- 60 ಪಂದ್ಯ​- 27 ಗೆಲುವು-18 ಸೋಲು
  • ಸೌರವ್​ ಗಂಗೂಲಿ-49 ಪಂದ್ಯ​-21 ಗೆಲುವು-13 ಸೋಲು
  • ಮೊಹಮ್ಮದ್ ಅಜರುದ್ದೀನ್​-47ಪಂದ್ಯ​-14 ಗೆಲುವು-14 ಸೋಲು
  • ಸುನಿಲ್ ಗವಾಸ್ಕರ್​-47 ಪಂದ್ಯ-9 ಗೆಲುವು-8 ಸೋಲು

ನಾಯಕನಾಗಿ ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ದ್ವಿಶತಕ

  • ವಿರಾಟ್ ಕೊಹ್ಲಿ- 32 ಪಂದ್ಯ-6 ದ್ವಿಶತಕ
  • ಬ್ರಿಯಾನ್​ ಲಾರಾ-47 ಪಂದ್ಯ- 5 ದ್ವಿಶತಕ
  • ಡಾನ್ ಬ್ರಾಡ್ಮನ್​-24 ಪಂದ್ಯ-4 ದ್ವಿಶತಕ
  • ಗ್ರೇಮ್ ಸ್ಮಿತ್​-109 ಪಂದ್ಯ-4 ದ್ವಿಶತಕ
  • ಮೈಕಲ್ ಕ್ಲಾರ್ಕ್​- 47 ಪಂದ್ಯ-4 ದ್ವಿಶತಕ

ನಾಯಕನಾಗಿ ಹೆಚ್ಚು ಶತಕ

  • ಗ್ರೇಮ್​ ಸ್ಮಿತ್​- 109 ಪಂದ್ಯ-25 ಶತಕ
  • ವಿರಾಟ್ ಕೊಹ್ಲಿ-68 ಪಂದ್ಯ-20 ಶತಕ
  • ರಿಕಿ ಪಾಂಟಿಂಗ್-77 ಪಂದ್ಯ​-19 ಶತಕ
  • ಸ್ಟೀವ್​ ವಾ-57 ಪಂದ್ಯ -15 ಶತಕ
  • ಅಲೆನ್ ಬಾರ್ಡರ್​-93 ಪಂದ್ಯ-15 ಶತಕ
  • ಸ್ಟೀವ್​ ಸ್ಮಿತ್​-34 ಪಂದ್ಯ-15 ಶತಕ

ಕೆಲವು ವಿಶೇಷ ದಾಖಲೆಗಳು

  • ವಿರಾಟ್​ ಕೊಹ್ಲಿ ನಾಯಕನಾಗಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್​ ಮತ್ತು ಆಸ್ಟ್ರೇಲಿಯಾದಲ್ಲಿ ಹೆಚ್ಚು ಟೆಸ್ಟ್​ ಪಂದ್ಯ ಗೆದ್ದ ಏಷ್ಯಾದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ನಾಲ್ಕು ರಾಷ್ಟ್ರಗಳಲ್ಲಿ ಕೊಹ್ಲಿ 23 ಟೆಸ್ಟ್​ ಪಂದ್ಯಗಳಲ್ಲಿ ಮುನ್ನಡೆಸಿ 7 ಗೆಲುವು ಮತ್ತು 13 ಸೋಲು ಹಾಗೂ 3 ಡ್ರಾ ಸಾಧಿಸಿದ್ದಾರೆ. ಒಟ್ಟಾರೆ ವಿದೇಶದಲ್ಲಿ 36 ಟೆಸ್ಟ್​ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿ 16 ಜಯ ಸಾಧಿಸಿದ್ದಾರೆ.
  • ಸೆಂಚುರಿಯನ್​ನಲ್ಲಿ ಟೆಸ್ಟ್​ ಪಂದ್ಯವನ್ನು ಗೆದ್ದ ವಿಶ್ವದ 3ನೇ ನಾಯಕ. ಈ ಹಿಂದೆ ಇಂಗ್ಲೆಂಡ್​ ನಾಸಿರ್ ಹುಸೇನ್ 2000ದಲ್ಲಿ ಮತ್ತು ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್​ 2014ರಲ್ಲಿ ಗೆಲುವು ಸಾಧಿಸಿದ್ದರು.
  • ವಿರಾಟ್ ಕೊಹ್ಲಿ ಎರಡು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಗೆದ್ದ ಏಷ್ಯಾದ ಮೊದಲ ನಾಯಕನಾಗಿದ್ದಾರೆ. 2018ರಲ್ಲಿ ಆಸ್ಟ್ರೇಲಿಯಾದಲ್ಲಿ ಮತ್ತು 2021ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಈ ಸಾಧನೆ ಮಾಡಿದ್ದಾರೆ.
  • ದಕ್ಷಿಣ ಆಫ್ರಿಕಾದಲ್ಲಿ 2 ಟೆಸ್ಟ್​ ಪಂದ್ಯಗಳನ್ನು ಗೆದ್ದ ಭಾರತದ ಏಕೈಕ ನಾಯಕನಾಗಿದ್ದಾರೆ. ಇದಕ್ಕೂ ಮುನ್ನ ಧೋನಿ 2010ರಲ್ಲಿ ಮತ್ತು 2006ಲ್ಲಿ ದ್ರಾವಿಡ್​ ನಾಯಕತ್ವದಲ್ಲಿ ತಲಾ ಒಂದು ಟೆಸ್ಟ್ ಪಂದ್ಯವನ್ನು ಭಾರತ ಗೆದ್ದಿತ್ತು.

ಇದನ್ನೂ ಓದಿ:ವಿರಾಟ್​​ನಂತಹ ಕ್ರಿಕೆಟಿಗರು ಪೀಳಿಗೆಗೆ ಒಮ್ಮೆ ಬರುತ್ತಾರೆ.. ಕಿಂಗ್ ಕೊಹ್ಲಿ ಶ್ಲಾಘಿಸಿದ ಬಿಸಿಸಿಐ..

ABOUT THE AUTHOR

...view details