ಕೇಪ್ಟೌನ್:ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 79 ರನ್ಗಳಿಸಿದ ವಿರಾಟ್ ಕೊಹ್ಲಿ ಹರಿಣಗಳ ತವರಲ್ಲಿ ಗರಿಷ್ಠ ರನ್ಗಳಿಸಿದ ಪಟ್ಟಿಯಲ್ಲಿ ಪ್ರಸ್ತುತ ಟೀಮ್ ಇಂಡಿಯಾ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದರು.
ವಿರಾಟ್ ಕೊಹ್ಲಿ 201 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್‌ಸಹಿತ 79 ರನ್ಗಳಿಸಿ ಔಟಾದರು. ಅವರು 14 ರನ್ಗಳಿಸಿದ್ದ ವೇಳೆ ರಾಹುಲ್ ದ್ರಾವಿಡ್ರನ್ನು ಹಿಂದಿಕ್ಕಿ ದ.ಆಫ್ರಿಕಾ ನೆಲದಲ್ಲಿ ಹೆಚ್ಚು ರನ್ಗಳಿಸಿದ ಭಾರತೀಯ ಬ್ಯಾಟರ್ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರು.