ಕೇಪ್ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಹರಿಣಗಳ ದಾಳಿಗೆ ತತ್ತರಿಸಿ ವಿಕೆಟ್ ಕಳೆದುಕೊಳ್ಳುತ್ತಿದ್ದರೆ, ಇತ್ತ ನಾಯಕ ಕೊಹ್ಲಿ ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತಿದ್ದು 50 ರನ್ ಪೂರೈಸಿದ್ದಾರೆ. ಸ್ಥಿರತೆಯನ್ನು ಕಳೆದುಕೊಂಡಿರುವ ಒತ್ತಡ ಒಂದು ಕಡೆಯಾದರೆ, ನಾಯಕನಾಗಿ ಕುಸಿತವನ್ನು ತಡೆಯುವ ಒತ್ತಡದಲ್ಲಿಯೇ ಬ್ಯಾಟಿಂಗ್ ಮಾಡಿದ ಕೊಹ್ಲಿ ತಮ್ಮ ನೈಸರ್ಗಿಕ ಆಟಕ್ಕೆ ವಿರುದ್ಧವಾಗಿ ಬ್ಯಾಟಿಂಗ್ ಮಾಡಿ ತಂಡದ ನೆರವಿಗೆ ನಿಂತಿದ್ದಾರೆ.
ವಿರಾಟ್ ಕೊಹ್ಲಿ ಕ್ರೀಸ್ನಲ್ಲಿ ಸೆಟ್ ಆದರೆ ಯಾವುದೇ ಮಾದರಿಯ ಕ್ರಿಕೆಟ್ ಆದರೂ ರನ್ಗಳ ಮಳೆಯನ್ನೇ ಸುರಿಸುತ್ತಿದ್ದರೆ. ಇದಕ್ಕಾಗಿಯೇ ಇವರನ್ನು ರನ್ ಮಷಿನ್ ಎಂದೂ ಕರೆಯಲಾಗುತ್ತಿತ್ತು. ಆದರೆ ಕಳೆದ ಕೆಲವು ಟೆಸ್ಟ್ ಇನ್ನಿಂಗ್ಸ್ಗಳಲ್ಲಿ ರನ್ಗಳಿಸಲು ಕೊಹ್ಲಿ ಪರದಾಡುತ್ತಿದ್ದರು. ಆದರೆ ಇಂದು ತಾವು ರನ್ಗಳಿಸುವುದರ ಜೊತೆಗೆ ತಂಡದ ಪತನವನ್ನು ತಡೆಯುತ್ತಿದ್ದಾರೆ.
4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿರುವ ಕೊಹ್ಲಿ ಅರ್ಧಶತಕ ಪೂರ್ಣಗೊಳಿಸಿದ್ದಾರೆ. ಆದರೆ ಇದಕ್ಕಾಗಿ ಅವರು ಬರೋಬ್ಬರಿ 158 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅರ್ಧಶತಕಕ್ಕಾಗಿ ಇಷ್ಟು ಎಸೆತಗಳನ್ನು ಎದುರಿಸುವುದು ದೊಡ್ಡ ವಿಷಯವಲ್ಲ, ಆದರೆ ವಿರಾಟ್ ಕೊಹ್ಲಿ ಇಷ್ಟು ಎಸೆತವನ್ನು ತೆಗೆದುಕೊಂಡಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಸ್ವತಃ ಭಾರತದ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಕೂಡ ಕಾಮೆಂಟರಿ ಮಾಡುವಾಗ ತಾವು ಕಳೆದ ಐದಾರು ವರ್ಷಗಳಲ್ಲಿ ಕಂಡಂತಹ ಕೊಹ್ಲಿಯ ಕಷ್ಟದ ರನ್ಗಳಿವು ಎಂದಿದ್ದರು.
ಈ ಹಿಂದೆ ಭಾರತ ತಂಡದ ವಿದೇಶಿ ಪಿಚ್ಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಇದೇ ರೀತಿಯ ಆಟವನ್ನು ಸಾಕಷ್ಟು ಬಾರಿ ಆಡಿ ತಂಡಕ್ಕೆ ಅದೆಷ್ಟೋ ಸೋಲುಗಳನ್ನು ತಪ್ಪಿಸಿದ್ದಾರೆ. ಇದೀಗ ನಾಯಕನಾಗಿ ಕೊಹ್ಲಿ ಕೂಡ ಕೋಚ್ ದಾರಿಯಲ್ಲೇ ಸಾಗುತ್ತಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಿರುವ ಕೊಹ್ಲಿ 188 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 74 ರನ್ಗಳಿಸಿದ್ದಾರೆ.
ಕೊಹ್ಲಿಯ ನಿಧಾನಗತಿ ಅರ್ಧಶತಕಗಳು