ಡೊಮಿನಿಕಾ (ವೆಸ್ಟ್ ಇಂಡೀಸ್):ಮೊದಲ ಟೆಸ್ಟ್ಗೆ ಸಿದ್ಧತೆಯಲ್ಲಿ ಭಾರತ ಕ್ರಿಕೆಟ್ ತಂಡ ಇದೆ. ಈ ವೇಳೆ ವಿರಾಟ್ ಕೊಹ್ಲಿ 12 ವರ್ಷಗಳ ಹಿಂದೆ ಡೊಮಿನಿಕಾದ ರೋಸೋದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಆಡಿದ ಕೊನೆಯ ಟೆಸ್ಟ್ ಪಂದ್ಯವನ್ನು ನೆನಪಿಸಿಕೊಂಡಿದ್ದಾರೆ. 2011 ರಲ್ಲಿ ಭಾರತ ಆಡುವಾಗ ತಂಡದಲ್ಲಿದ್ದ ಇಬ್ಬರು ಒಟ್ಟಿಗೆ ನಿಂತಿರುವ ಫೋಟೋವನ್ನು ಹಂಚಿಕೊಂಡ ಕೊಹ್ಲಿ ಮೈದಾನದ ಹಳೆಯ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.
ವಿಂಡ್ಸರ್ ಪಾರ್ಕ್‌ನಲ್ಲಿ ಜುಲೈ 12 ರಿಂದ 16 ರವರೆಗೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. 2017 ರ ನಂತರ ಡೊಮಿನಿಕಾ ಮೈದಾನದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದೆ. ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಈವರೆಗೆ ಒಟ್ಟು 5 ಟೆಸ್ಟ್, 4 ಏಕದಿನ ಮತ್ತು 4 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಮಾತ್ರ ಆಡಲಾಗಿದೆ.
2011 ರ ಟೆಸ್ಟ್ನಲ್ಲಿ ಆಡಿದ ಆಟಗಾರರಲ್ಲಿ ಪ್ರಸ್ತುತ, ಕೊಹ್ಲಿಯನ್ನು ಹೊರತುಪಡಿಸಿ ಕೇವಲ ಒಬ್ಬ ಆಟಗಾರ ಮಾತ್ರ ಮುಂಬರುವ ಈ ಸರಣಿಯಲ್ಲಿ ಭಾರತೀಯ ತಂಡದ ಭಾಗವಾಗಿದ್ದಾರೆ. ಅವರೆಂದರೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್. ಇನ್‌ಸ್ಟಾಗ್ರಾಮ್‌ನಲ್ಲಿ ದ್ರಾವಿಡ್ ಅವರೊಂದಿಗಿನ ಫೋಟೋವನ್ನು ಕೊಹ್ಲಿ ಹಂಚಿಕೊಂಡಿದ್ದಾರೆ, ವಿಭಿನ್ನ ಪಾತ್ರಗಳಲ್ಲಿ ಅವರನ್ನು ಡೊಮಿನಿಕಾಕ್ಕೆ ಮರಳಿ ಕರೆತಂದಿದ್ದಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ.
2011ರಲ್ಲಿ ವಿರಾಟ್ ಟೆಸ್ಟ್ಗೆ ಪಾದಾರ್ಪಣೆ ಮಾಡಿದ್ದರು. ಈ ಸರಣಿಯಲ್ಲಿ ಭಾರಯ ವೆಸ್ಟ್ ಇಂಡೀಸ್ನಲ್ಲಿ 3 ಟೆಸ್ಟ್ ಪಂದ್ಯಗಳನ್ನು ಆಡಿತ್ತು. ವಿರಾಟ್ಗೆ ಇದು ಟೆಸ್ಟ್‌ನ ಮೊದಲ ಪ್ರವಾಸವಾಗಿತ್ತು. 2011ರ ಸರಣಿಯ ಮೂರನೇ ಟೆಸ್ಟ್ ಪಂದ್ಯ ಡೊಮಿನಿಕಾದಲ್ಲಿ ನಡೆದಿತ್ತು. ರಾಹುಲ್ ದ್ರಾವಿಡ್ಗೆ ಇದು ಕೊನೆ ವೆಸ್ಟ್ ಇಂಡೀಸ್ ಪ್ರವಾಸವಾಗಿದೆ. ಆ ಸರಣಿಯನ್ನು ಭಾರತ 1-0 ಯಿಂದ ಗೆದ್ದುಕೊಂಡಿತ್ತು.