ಕರ್ನಾಟಕ

karnataka

ETV Bharat / sports

ಬ್ಯಾಟಿಂಗ್​ ಕೋಚ್​ ಆಗಿ ವಿಕ್ರಂ ರಾಥೋರ್​, ಪಾರಸ್​ ಮಾಂಬ್ರೆ ಬೌಲಿಂಗ್ ಕೋಚ್​?

ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಕೋಚ್​ಗಳ ಸ್ಥಾನಕ್ಕಾಗಿ ಟೀಂ ಇಂಡಿಯಾ ಇಂದು ಸಂದರ್ಶನ ನಡೆಸಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ ವಿಕ್ರಂ ರಾಥೋರ್ (Vikram Rathour ) ಹಾಗೂ ಪಾರಸ್ ಮಾಂಬ್ರೆಗೆ ಬಿಸಿಸಿಐ ಮಣೆ ಹಾಕಿದೆ ಎನ್ನಲಾಗಿದೆ.

Vikram Rathour
Vikram Rathour

By

Published : Nov 11, 2021, 10:09 PM IST

ನವದೆಹಲಿ: ಟೀಂ ಇಂಡಿಯಾದ ನೂತನ ಕೋಚ್​ ಆಗಿ ಈಗಾಗಲೇ ಕನ್ನಡಿಗ ರಾಹುಲ್​ ದ್ರಾವಿಡ್ ಆಯ್ಕೆಯಾಗಿದ್ದು, ಇದರ ಬೆನ್ನಲ್ಲೇ ಬ್ಯಾಟಿಂಗ್​, ಬೌಲಿಂಗ್​ ಹಾಗೂ ಫೀಲ್ಡಿಂಗ್ (Batting and Bowling Coach)​ ವಿಭಾಗಕ್ಕೂ ಕೋಚ್​ಗಳ ಆಯ್ಕೆ ಮಾಡಲು ಭಾರತೀಯ ಕ್ರಿಕೆಟ್ ಮಂಡಳಿ ಮುಂದಾಗಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ, ಈಗಾಗಲೇ ಬ್ಯಾಟಿಂಗ್​​ ಕೋಚ್​ ಆಗಿ ಕಾರ್ಯನಿರ್ವಹಿಸಿರುವ ವಿಕ್ರಂ ರಾಥೋರ್​ಗೆ ಮತ್ತೊಮ್ಮೆ ಮಣೆ ಹಾಕಲು ಬಿಸಿಸಿಐ (BCCI) ನಿರ್ಧರಿಸಿದ್ದು, ಉಳಿದಂತೆ ಬೌಲಿಂಗ್​ ಕೋಚ್​ ಸ್ಥಾನಕ್ಕೆ ಪರಾಸ್​​ ಮಾಂಬ್ರೆ ಹಾಗೂ ಫೀಲ್ಡಿಂಗ್​ ಕೋಚ್​ ಆಗಿ ಟಿ. ದಿಲೀಪ್​​ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ:ರಿಜ್ವಾನ್​-ಫಖರ್ ಅರ್ಧಶತಕ: ಆಸ್ಟ್ರೇಲಿಯಾ ಗೆಲುವಿಗೆ 177ರನ್​ ಟಾರ್ಗೆಟ್ ನೀಡಿದ ಪಾಕ್​

ನವೆಂಬರ್​ 17ರಿಂದ ಟೀಂ ಇಂಡಿಯಾ-ನ್ಯೂಜಿಲ್ಯಾಂಡ್ ವಿರುದ್ಧ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಲಿದ್ದು, ಅದಕ್ಕೂ ಮೊದಲೇ ವಿವಿಧ ವಿಭಾಗಗಳಿಗೆ ಕೋಚ್​ಗಳ ಆಯ್ಕೆ ಮಾಡಬೇಕಾಗಿದೆ.

ಟೀಂ ಇಂಡಿಯಾ ವಿಶ್ವಕಪ್​​ನೊಂದಿಗೆ ರವಿಶಾಸ್ತ್ರಿ ಸೇರಿದಂತೆ ಭರತ್ ಅರುಣ್​​ ಅಧಿಕಾರವಧಿ ಮುಕ್ತಾಯಗೊಂಡಿರುವ ಕಾರಣ ಈಗಾಗಲೇ ಮುಖ್ಯ ಕೋಚ್​ ಆಗಿ ರಾಹುಲ್​ ದ್ರಾವಿಡ್​ ಆಯ್ಕೆಯಾಗಿದ್ದಾರೆ. ಆದರೆ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಕೋಚ್​ಗಳ ನೇಮಕ ಮುಂದಿನ ಎರಡು ದಿನದಲ್ಲಿ ಫೈನಲ್ ಆಗುವ ಸಾಧ್ಯತೆ ದಟ್ಟವಾಗಿದೆ.

ಪಾರಸ್​ ಮಾಂಬ್ರೆ ಟೀಂ ಇಂಡಿಯಾ ಪರ ಐದು ಪಂದ್ಯಗಳನ್ನಾಡಿದ್ದಾರೆ. ಆದರೆ ವಿವಿಧ ದೇಶಿಯ ತಂಡಗಳ ಸಹಾಯಕ ಕೋಚ್​ ಆಗಿ, ಜೊತೆಗೆ ಮುಂಬೈ ಇಂಡಿಯನ್ಸ್​ ತಂಡದ ಜೊತೆಗೂ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಂಡದ್ದ ವೇಳೆ ಪಾರಸ್ ತಂಡದ ಬೌಲಿಂಗ್ ಕೋಚ್​ ಆಗಿದ್ದರು. ಈ ವೇಳೆ ಫೀಲ್ಡಿಂಗ್ ಕೋಚ್​ ಆಗಿ ಟಿ. ದಿಲೀಪ್​ ಕೂಡ ತಂಡದೊಂದಿಗೆ ಪ್ರವಾಸ ಕೈಗೊಂಡಿದ್ದರು.

ABOUT THE AUTHOR

...view details