ದುಬೈ: ಈ ಬಾರಿಯ ಐಪಿಎಲ್ ಎಲ್ಲಾ ಆವೃತ್ತಿಗಿಂತ ಭಿನ್ನವಾಗಿದೆ. ಯಾಕೆಂದರೆ, ಮೊದಲಾರ್ಧ ಭಾರತದಲ್ಲಿ ದ್ವಿತೀಯಾರ್ಧ ಯುಎಇಯಲ್ಲಿ ನಡೆಯುತ್ತಿದೆ. ಆದರೆ, ಮೊದಲಾರ್ಧದ ವೇಳೆ ಕೆಲವು ಆಟಗಾರರು ಮತ್ತು ಸಿಬ್ಬಂದಿಗೆ ಕೋವಿಡ್ ಕಾಣಿಸಿದ ಹಿನ್ನೆಲೆ ಅರ್ಧದಲ್ಲೇ ಟೂರ್ನಿಯನ್ನು ಸ್ಥಗಿತಗೊಳಿಸಲಾಗಿತ್ತು.
ಮೇ 2ನೇ ದಿನಾಂಕದಂದು ಕೆಕೆಆರ್ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ಗಾಯದ ಸಮಸ್ಯೆಯಿಂದ ಸ್ಕ್ಯಾನಿಂಗ್ಗೆ ತೆರಳಿದ್ದ ವೇಳೆ ಕೋವಿಡ್ ಸೋಂಕು ಹರಡಿತ್ತು. ನಂತರ ಕೆಕೆಆರ್ ಮತ್ತು ಹೈದರಾಬಾದ್ ತಂಡದ ಕೆಲವು ಆಟಗಾರರಿಗೆ ಸೋಂಕು ದೃಢಪಡುತ್ತಿದ್ದಂತೆ ಐಪಿಎಲ್ ಅನ್ನು ಅನಿರ್ಧಾಷ್ಠವಧಿಗೆ ಮುಂದೂಡಲಾಗಿತ್ತು.
ಐಪಿಎಲ್ನಲ್ಲಿ ತಮ್ಮ ಸ್ಪಿನ್ ಮೋಡಿಯಿಂದ ಕ್ರಿಕೆಟ್ ತಜ್ಞರಿಂದ ಹಾಗೂ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿರುವ ವರುಣ್, ಕೋವಿಡ್ ಪಾಸಿಟಿವ್ ಕಾಣಿಸಿದ ಸಂದರ್ಭದಲ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನಿನಗೆ ಕೋವಿಡ್ ಬರುವ ಬದಲು ಸಾಯಬೇಕಿತ್ತು ಎಂದು ತಮ್ಮನ್ನು ನಿಂದಿಸಿದ್ದರೆಂದು ಕೆಕೆಆರ್ ಹಂಚಿಕೊಂಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಆ ಸಂದರ್ಭದಲ್ಲಿ ಡಾಕ್ಟರ್ ಶ್ರೀಕಾಂತ್ ನನಗೆ ಕರೆ ಮಾಡಿ ಹೇಳಿದ ಮಾತುಗಳು ನನಗೆ ಇನ್ನೂ ನೆನಪಿವೆ. ಅವರು ವರುಣ್ ದುರದೃಷ್ಟವಶಾತ್, ನಿಮಗೆ ಪಾಸಿಟಿವ್ ದೃಢಪಟ್ಟಿದೆ ಎಂದು ಹೇಳಿದರು. ಆ ವೇಳೆ ಆ ಮಾತು ಎಲ್ಲವನ್ನೂ ಛಿದ್ರಗೊಳಿಸಿತು. ಅದು ತುಂಬಾ ದೊಡ್ಡ ಹೊಡೆತವಾಗುತ್ತದೆ ಎಂದು ನನಗೆ ನಿಜವಾಗಿಯೂ ತಿಳಿದಿರಲಿಲ್ಲ.