ಕರ್ನಾಟಕ

karnataka

ETV Bharat / sports

ಯುಪಿ ನಾಯಕಿಯ ಅಮೋಘ 96 ರನ್​ಗಳ ಆಟ: ಆರ್​ಸಿಬಿಗೆ ಸತತ 4ನೇ ಸೋಲು - ಅಲಿಸ್ಸಾ ಹೀಲಿ

ಮಹಿಳಾ ಪ್ರೀಮಿಯರ್ ಲೀಗ್​ ಟೂರ್ನಿಯಲ್ಲಿ ಆರ್​ಸಿಬಿ ತಂಡ ಮತ್ತೊಂದು ಸೋಲು ಕಂಡು ಮುಖಭಂಗ ಅನುಭವಿಸಿದೆ.

up-warriors-won-by-10-wickets-4th-consecutive-loss-for-rcb-womens
ಯುಪಿ ನಾಯಕಿಯ ಅಮೋಘ 96 ರನ್​ಗಳ ಆಟ: ಆರ್​ಸಿಬಿಗೆ ಸತತ 4ನೇ ಸೋಲು

By

Published : Mar 10, 2023, 11:08 PM IST

ಮುಂಬೈ (ಮಹಾರಾಷ್ಟ್ರ): ಮಹಿಳಾ ಪ್ರೀಮಿಯರ್ ಲೀಗ್​ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು​ ತಂಡ ಸತತವಾಗಿ ನಾಲ್ಕನೇ ಸೋಲು ಅನುಭವಿಸಿದೆ. ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಪಡೆ ವಿರುದ್ಧ ​ಯುಪಿ ವಾರಿಯರ್ಸ್​​ 10 ವಿಕೆಟ್​ಗಳ ಜಯ ದಾಖಲಿಸಿದೆ.

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆರ್​ಸಿಬಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತ್ತು. ಆದರೆ, ಆರಂಭದಲ್ಲೇ ನಾಯಕಿ ಸ್ಮೃತಿ ಮಂಧಾನ (4) ವಿಕೆಟ್​ ಕಳೆದುಕೊಂಡು ಆಘಾತ ಅನುಭವಿಸಿತು. ನಂತರದಲ್ಲಿ ಸೋಫಿಯಾ ಡಿವೈನ್ ಮತ್ತು ಎಲ್ಲಿಸ್ ಪೆರಿ ದಿಟ್ಟ ಜೊತೆಯಾಟ ನೀಡಿದರು. ಇದರಿಂದ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸುತ್ತಿದ್ದ ಆರ್‌ಸಿಬಿ ತಂಡ ಬೃಹತ್ ರನ್​ಗಳ ಕಲೆ ಹಾಕುವ ಮುನ್ಸೂಚನೆ ನೀಡಿತು.

ಇದನ್ನೂ ಓದಿ:ಐಪಿಎಲ್​ನಲ್ಲಿ ಧೋನಿ ಪರಂಪರೆ ಅಂತ್ಯ: ಮ್ಯಾಥ್ಯೂ ಹೇಡನ್

ಇದರ ನಡುವೆ 24 ಎಸತೆಗಳಲ್ಲಿ ಒಂದು ಸಿಕ್ಸರ್​ ಮತ್ತು ಐದು ಬೌಂಡರಿಗಳ ಸಮೇತ 36 ರನ್​​ ಗಳಿಸಿದ್ದ ಡಿವೈನ್ ವಿಕೆಟ್​ ಒಪ್ಪಿಸಿದರು. ನಂತರ ಬಂದ ಕಾನಿಕಾ ಅಹುಜಾ (8), ಹೀಥರ್ ನೈಟ್ (2) ಬೇಗನೇ ಪೆವಿಲಿಯನ್​ ಸೇರಿಕೊಂಡರು. ಮತ್ತೊಂದೆಡೆ, ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಎಲ್ಲಿಸ್ ಪೆರಿ ಅರ್ಧಶತಕ ಬಾರಿಸಿದರು. ಆದರೂ, ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. 39 ಬಾಲ್​ಗಳಲ್ಲಿ ಒಂದು ಸಿಕ್ಸರ್​ ಹಾಗೂ ಆರು ಬೌಂಡರಿಗಳ ಸಮೇತ 52 ರನ್​ ಕಲೆ ಹಾಕಿ ಪೆರಿ ಔಟಾದರು.

ಇದಾದ ಬಳಿಕ ಯಾವುದೇ ಬ್ಯಾಟರ್​ಗಳಿಂದ ನಿರೀಕ್ಷಿತ ಆಟ ಮೂಡಿ ಬರಲಿಲ್ಲ. ಶ್ರೇಯಾಂಕಾ ಪಾಟೀಲ್ (15), ಎರಿನ್ ಬರ್ನ್ (12) ಅವರಿಂದ ಅಲ್ಪ ಮೊತ್ತದ ಕಾಣಿಕೆ ಮಾತ್ರ ನೀಡಲು ಮಾತ್ರ ಸಾಧ್ಯವಾಯಿತು. ರಿಚಾ ಘೋಷ್​ (1), ಕೋಮಲ್​ ಜಂಜಾದ್ (5 ಅಜೇಯ), ರೇಣುಕಾ ಠಾಕೂರ್ ಸಿಂಗ್ (3), ಸಹನಾ ಪವಾರ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಅಂತಿಮವಾಗಿ 19.3 ಓವರ್​ಗಳಿಗೆ 138 ರನ್​ಗಳಿಗೆ ಆರ್​ಸಿಬಿ ಸರ್ವಪತನ ಕಂಡಿತು.

139 ರನ್​ಗಳ ಗುರಿ ಬೆನ್ನಟ್ಟಿದ ​ಯುಪಿ ವಾರಿಯರ್ಸ್ ಬ್ಯಾಟರ್​ಗಳು ಅದ್ಭುತ ಆಟ ಪ್ರದರ್ಶಿಸಿದರು. ಆರಂಭಿಕರಾಗಿ ಕಣಕ್ಕೆ ಬಂದ ನಾಯಕಿ ಅಲಿಸ್ಸಾ ಹೀಲಿ ಅಮೋಘ ಆಟವಾಡಿದರು. ಕೇವಲ 47 ಎಸೆತಗಳಲ್ಲಿ 18 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದ ಅಲಿಸ್ಸಾ ಹೀಲಿ ಅಜೇಯ 96 ರನ್​ ಬಾರಿಸಿ ತಂಡವನ್ನು ಗೆಲ್ಲಿಸಿದರು. ತಮ್ಮ ನಾಯಕಿಗೆ ಭರ್ಜರಿ ಸಾಥ್ ನೀಡಿದ ದೇವಿಕಾ ವೈದ್ಯ 31 ಎಸೆತಗಳಲ್ಲಿ ಐದು ಬೌಂಡರಿಗಳ ಸಮೇತ 36 ರನ್​ಗಳನ್ನು ಸಿಡಿಸಿ ಅಜೇಯರಾಗಿಯೇ ಉಳಿದರು. ಅಲಿಸ್ಸಾ ಹೀಲಿ ಮತ್ತು ದೇವಿಕಾ ವೈದ್ಯ ಅವರ ಅಮೋಘ ಜೊತೆಯಾಟದಿಂದ 13 ಓವರ್​ಗಳಲ್ಲೇ 139 ರನ್ ಕಲೆ ಹಾಕಿದ ಯುಪಿ ವಾರಿಯರ್ಸ್ ಜಯಭೇರಿ ಬಾರಿಸಿತು.

ಇದನ್ನೂ ಓದಿ:ಬಾರ್ಡರ್​ ಗವಾಸ್ಕರ್​ ಟ್ರೋಫಿ: ಅತಿ ಹೆಚ್ಚು ವಿಕೆಟ್​ ಪಡೆದ ಅಶ್ವಿನ್​, ಪಂಚ ವಿಕೆಟ್ ದಾಖಲೆ

ABOUT THE AUTHOR

...view details