ಚೆಸ್ಟರ್-ಲೆ-ಸ್ಟ್ರೀಟ್:ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿ ವೇಳೆ ಬಯೋ ಬಬಲ್ ಉಲ್ಲಂಘನೆ ಮಾಡಿರುವ ಲಂಕಾದ ಮೂವರು ಪ್ಲೇಯರ್ಸ್ಗೆ ಇದೀಗ ಮತ್ತಷ್ಟು ಸಂಕಷ್ಟ ಉಂಟಾಗಿದ್ದು, ಭಾರತ ವಿರುದ್ಧದ ಸರಣಿಯಿಂದಲೂ ಅವರನ್ನು ಹೊರಗಿಡಲಾಗಿದೆ ಎಂದು ವರದಿಯಾಗಿದೆ.
ಇಂಗ್ಲೆಂಡ್ ವಿರುದ್ಧದ ಕೊನೆಯ ಟಿ-20 ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಲಂಕಾದ ಉಪನಾಯಕ ಕುಶಾಲ್ ಮೆಂಡಿಸ್, ಆರಂಭಿಕ ಆಟಗಾರ ದನುಷ್ಕಾ ಗುಣ ತಿಲಕ್ ಹಾಗೂ ವಿಕೆಟ್ ಕೀಪರ್ ನಿರೋಶನ್ ಡಿಕ್ವೆಲ್ಲಾ ಬಯೋಬಬಲ್ ಉಲ್ಲಂಘನೆ ಮಾಡಿ ಅಲ್ಲಿನ ಬಿದಿಗಳಲ್ಲಿ ಸುತ್ತಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್ ಆಗಿತ್ತು.