ಟಮ್ಮಿ ಬ್ಯೂಮಾಂಟ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಮೊದಲ ಮಹಿಳಾ ಆ್ಯಶಸ್ ಟೆಸ್ಟ್‌ನಲ್ಲಿ ಬ್ಯೂಮಾಂಟ್ 331 ಬಾಲ್ಗಳನ್ನು ಎದುರಿಸಿ 27 ಬೌಂಡರಿಗಳ ಸಹಾಯದಿಂದ 208 ರನ್ ಗಳಿಸಿದರು. ಬ್ಯೂಮಾಂಟ್ ಅವರ ದ್ವಿಶತಕದ ನೆರವಿನಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 463 ರನ್ ಒಟ್ಟುಗೂಡಿಸಿತು. ಇದರಿಂದ 10 ರನ್‌ಗಳ ಹಿನ್ನಡೆಯಿಂದ ಮೊದಲ ಇನ್ನಿಂಗ್ಸ್ನಲ್ಲಿ ಆಲೌಟಾಗಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಎದುರಾಳಿ ಆಸ್ಟ್ರೇಲಿಯಾ ಅನ್ನಾಬೆಲ್ ಸದರ್‌ಲ್ಯಾಂಡ್ ಅವರ ಅಜೇಯ 137 ಮತ್ತು ಎಲ್ಲಿಸ್ ಪೆರ್ರಿ ಅವರ 99 ರನ್ 124.2 ಓವರ್‌ಗಳಲ್ಲಿ 473 ರನ್ ಗಳಿಸಿ ಸರ್ವಪತನ ಕಂಡಿತ್ತು. 10 ರನ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಮೂರನೇ ದಿನದಾಟದ ಅಂತ್ಯಕ್ಕೆ 19 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 82 ರನ್ ಗಳಿಸಿತು. ಪ್ರಸ್ತುತ ಆಸ್ಟ್ರೇಲಿಯಾ 92 ರನ್‌ಗಳ ಮುನ್ನಡೆ ಹೊಂದಿದೆ.
ಮಹಿಳಾ ಆ್ಯಶಸ್- ಇಂಗ್ಲೆಂಡ್‌ನ ಟಮ್ಮಿ ಬ್ಯೂಮಾಂಟ್ ದಾಖಲೆಯ ದ್ವಿಶತಕದಾಟ ಎರಡನೇ ದಿನ ಚಹಾ ವಿರಾಮಕ್ಕೂ ಮುನ್ನ ಆಸ್ಟ್ರೇಲಿಯಾ ಮಹಿಳಾ ತಂಡ ಆಲೌಟ್ ಆಯಿತು. ಎರಡನೇ ದಿನದ ಅಂತ್ಯಕ್ಕೆ ಇಂಗ್ಲೆಂಡ್ 218 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ಕ್ರೀಸ್‌ನಲ್ಲಿ ಶತಕ ಗಳಿಸಿದ ಟಮ್ಮಿ ಬ್ಯೂಮಾಂಟ್ ಮತ್ತು 44 ರನ್ ಗಳಿಸಿದ ನ್ಯಾಟ್ ಸ್ಕಿವರ್-ಬ್ರಂಟ್ ಇದ್ದರು. ಮೂರನೇ ದಿನದ ಆಟ ಆರಂಭಿಸಿದ ಇಂಗ್ಲೆಂಡ್ ತನ್ನ ಬ್ಯಾಟಿಂಗ್ ಪ್ರಾಬಲ್ಯ ಮುಂದುವರೆಸಿತ್ತು. ಭೋಜನ ವಿರಾಮದ ಹೊತ್ತಿಗೆ 3 ವಿಕೆಟ್ ನಷ್ಟಕ್ಕೆ 308 ರನ್ ಕಲೆಹಾಕಿತ್ತು. 78 ರನ್ ಗಳಿಸಿ ನ್ಯಾಟ್ ಸ್ಕಿವರ್-ಬ್ರಂಟ್ ವಿಕೆಟ್ ಮಾತ್ರ ಬಿದ್ದಿತ್ತು.
35 ರನ್‌ಗೆ 4 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್:ಮೂರನೇ ದಿನದ ಚಹಾ ವಿರಾಮದ ವೇಳೆಗೆ ಇಂಗ್ಲೆಂಡ್ ಪರವಾಗಿ ಬ್ಯೂಮಾಂಟ್ 195 ರನ್ ಗಳಿಸಿ ಏಕಾಂಗಿ ಹೋರಾಟ ಮುಂದುವರೆಸಿದ್ದರು. ಈ ವೇಳೆಗೆ ಆಂಗ್ಲರ ಸ್ಕೋರ್ 428ಕ್ಕೆ ಆರು ವಿಕೆಟ್ ಆಗಿತ್ತು. ಚಹಾ ವಿರಾಮಕ್ಕೂ ಮುನ್ನ ಸತತ ಎರಡು ವಿಕೆಟ್ಗಳು ಬಿದ್ದಿದ್ದವು. ಬ್ರೇಕ್ ನಂತರ ಆಸ್ಟ್ರೇಲಿಯಾದ ಬೌಲರ್ಗಳು ತಮ್ಮ ಪಾರಮ್ಯ ಮೆರೆದರು. ಕೇವಲ 35 ರನ್ ಕಲೆ ಹಾಕುವಷ್ಟರಲ್ಲಿ 4 ವಿಕೆಟ್ ಪಡೆದರು. ಇದರಿಂದ ಇಂಗ್ಲೆಂಡ್ 10 ರನ್ ಹಿನ್ನಡೆಯೊಂದಿಗೆ ಆಲೌಟಾಯಿತು.
ದ್ವಿಶತಕ ಗಳಿಸಿದ 8ನೇ ಮಹಿಳಾ ಬ್ಯಾಟರ್:1935ರಲ್ಲಿ ಇಂಗ್ಲೆಂಡ್‌ನ ಮಹಿಳಾ ಆಟಗಾರ್ತಿ ಬೆಟ್ಟಿ ಸ್ನೋಬಾಲ್ ಅವರು 189 ರನ್ ಗಳಿಸಿದ್ದು ದಾಖಲೆಯಾಗಿತ್ತು. ಟಮ್ಮಿ ಬ್ಯೂಮಾಂಟ್ ಅವರು ಸ್ನೋಬಾಲ್ ಅವರ ದಾಖಲೆ ಮುರಿದಿದ್ದಲ್ಲದೇ ದ್ವಿಶತಕ ಗಳಿಸಿದ ಆಂಗ್ಲರ ತಂಡದ ಮೊದಲ ಮಹಿಳಾ ಕ್ರಿಕೆಟಿಗರಾಗಿದ್ದಾರೆ. ಇದು ಮಹಿಳಾ ಟೆಸ್ಟ್‌ನಲ್ಲಿ ಎಂಟನೇ ದ್ವಿಶತಕವಾಗಿದ್ದು, 2004ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 242 ರನ್ ಗಳಿಸುವ ಮೂಲಕ ಪಾಕಿಸ್ತಾನದ ಕಿರಣ್ ಬಲೂಚ್ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರ್ ವಿವರ :ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 473/10 (ಅನ್ನಾಬೆಲ್ ಸದರ್‌ಲ್ಯಾಂಡ್ 137*, ಎಲಿಸ್ಸೆ ಪೆರ್ರಿ 99; ಸೋಫಿ ಎಕ್ಲೆಸ್ಟೋನ್ 5-129) ಮತ್ತು ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ 82/0 (ಫೋಬೆ ಲಿಚ್‌ಫೀಲ್ಡ್ 41*), ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 463 (ಟಮ್ಮಿ ಬ್ಯೂಮಾಂಟ್ 208, ನ್ಯಾಟ್ ಸ್ಕಿವರ್-ಬ್ರಂಟ್ 78; ಆ್ಯಶ್ ಗ್ಯ್ರಾಂಡ್ನರ್ 4-99, ತಹ್ಲಿಯಾ ಮೆಕ್‌ಗ್ರಾತ್ 3-24)
ಇದನ್ನೂ ಓದಿ:1983 Cricket World cup: ಭಾರತದ 83ರ ವಿಶ್ವಕಪ್ ಗೆಲುವಿಗೆ 40ರ ಸಂಭ್ರಮ: ಐತಿಹಾಸಿಕ ಫೈನಲ್ ಪಂದ್ಯ ಹೇಗಿತ್ತು ಗೊತ್ತೇ?