ಕರ್ನಾಟಕ

karnataka

ETV Bharat / sports

ಟಿ20 ವಿಶ್ವಕಪ್​ ಸೆಮಿಫೈನಲ್​ ಅಖಾಡ ಸಿದ್ಧ: ಭಾರತ vs ಇಂಗ್ಲೆಂಡ್‌, ಪಾಕಿಸ್ತಾನ vs ನ್ಯೂಜಿಲೆಂಡ್‌ - ನ್ಯೂಜಿಲ್ಯಾಂಡ್​ ಇಂಗ್ಲೆಂಡ್​ ಸೆಮೀಸ್​ ತಂಡಗಳು

ಟಿ20 ವಿಶ್ವಕಪ್​ನ ಸೆಮಿಫೈನಲ್​ ಅಖಾಡ ಸಿದ್ಧವಾಗಿದೆ. ಗ್ರೂಪ್​ 1 ರಿಂದ ನ್ಯೂಜಿಲ್ಯಾಂಡ್​, ಇಂಗ್ಲೆಂಡ್​ ಪ್ರವೇಶ ಪಡೆದರೆ, ಗ್ರೂಪ್​ 2 ರಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ವಾಲಿಫೈ ಆಗಿವೆ.

semifinal-teams-fix
ಟಿ20 ವಿಶ್ವಕಪ್​ ಸೆಮಿಫೈನಲ್​ ಅಖಾಡ

By

Published : Nov 6, 2022, 3:12 PM IST

Updated : Nov 6, 2022, 5:05 PM IST

ಮೆಲ್ಬೋರ್ನ್​(ಆಸ್ಟ್ರೇಲಿಯಾ):ಕೊನೆಯ ಪಂದ್ಯದವರೆಗೂ ಕಾಪಿಟ್ಟಿದ್ದ ಸೆಮಿಫೈನಲ್​ ಕೌತುಕ ಮುಗಿದಿದೆ. ಗ್ರೂಪ್ 1 ರಲ್ಲಿ ನ್ಯೂಜಿಲ್ಯಾಂಡ್​ ಮತ್ತು ಇಂಗ್ಲೆಂಡ್​ ಸೆಮೀಸ್​ಗೆ ಟಿಕೆಟ್​ ಪಡೆದಿದ್ದರೆ, ಎರಡನೇ ಗ್ರೂಪಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿವೆ. ನವೆಂಬರ್​ 9 ರಂದು ನ್ಯೂಜಿಲ್ಯಾಂಡ್​​ ಮತ್ತು ಪಾಕಿಸ್ತಾನ ಎದುರಾದರೆ, 10 ರಂದು ಭಾರತ ಮತ್ತು ಇಂಗ್ಲೆಂಡ್​​ ಸೆಣಸಾಡಲಿವೆ.

ಇಂದು ನಡೆದ ಸೂಪರ್​ 12 ಹಂತದ ಕೊನೆಯ ಪಂದ್ಯಗಳು ಅಚ್ಚರಿಯ ಫಲಿತಾಂಶ ತಂದಿವೆ. ಬಲಿಷ್ಠ ಭಾರತವನ್ನು ಸೋಲಿಸಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಶಿಶು ನೆದರ್​ಲ್ಯಾಂಡ್ಸ್​ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತು. ಇದು ಕ್ರಿಕೆಟ್​ ಲೆಕ್ಕಾಚಾರಗಳನ್ನೇ ತಲೆಕೆಳಗೆ ಮಾಡಿದೆ. ಬಳಿಕ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಅರ್ಹ ಜಯ ಸಾಧಿಸಿ ಮುಂದಿನ ಹಂತಕ್ಕೆ ಬಡ್ತಿ ಪಡೆಯಿತು.

ಭಾರತಕ್ಕೆ ನೇರ ಪ್ರವೇಶ:ದಕ್ಷಿಣ ಆಫ್ರಿಕಾ ವಿರುದ್ಧ ನೆದರ್​ಲ್ಯಾಂಡ್ಸ್​ ಗೆಲುವು ಸಾಧಿಸುತ್ತಿದ್ದಂತೆ ಗ್ರೂಪ್​ 2 ಅಗ್ರಸ್ಥಾನಿಯಾಗಿದ್ದ ಭಾರತ ಸೆಮಿಫೈನಲ್​ಗೆ ನೇರಪ್ರವೇಶ ಪಡೆಯಿತು. ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಕೊನೆಯ ಪಂದ್ಯ ಸೋತರೂ ಭಾರತಕ್ಕೆ ಯಾವುದೇ ಆತಂಕವಿಲ್ಲ.

ಅದೃಷ್ಟದಾಟದಲ್ಲಿ ಗೆದ್ದ ಪಾಕಿಸ್ತಾನ:ಪಾಕಿಸ್ತಾನ ತಂಡ ವಿಶ್ವಕಪ್​ನ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಮಂಡಿಯೂರಿತ್ತು. ಬಳಿಕ ಅಚ್ಚರಿ ಎಂಬಂತೆ ಜಿಂಬಾಬ್ವೆ ವಿರುದ್ಧ 1 ರನ್ನಿಂದ ಸೋತು ಭಾರಿ ಟೀಕೆಗೆ ಗುರಿಯಾಗಿತ್ತು. ಸೆಮಿಫೈನಲ್​ಗೆ ತಲುಪುವುದು ಕಷ್ಟ ಎಂದೇ ಎಣಿಸಲಾಗಿದ್ದ ಪಾಕಿಸ್ತಾನ, ಮರು ಹೋರಾಟ ಮಾಡಿ ಕೊನೆಯ ಮೂರು ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ 6 ಅಂಕ ಗಳಿಸಿತು.

ದಕ್ಷಿಣ ಆಫ್ರಿಕಾ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದು, ಅದರ ಸ್ಥಾನಕ್ಕೆ ಪಾಕಿಸ್ತಾನ ಎಂಟ್ರಿ ನೀಡಿತು. ಸೆಮೀಸ್​ ತಲುಪಲು ಅವಕಾಶವಿದ್ದ ಬಾಂಗ್ಲಾದೇಶ ಪಾಕಿಸ್ತಾನ ವಿರುದ್ಧ ಸೋತು ವಿಶ್ವಕಪ್​ ಅಭಿಯಾನ ಮುಗಿಸಿತು.

ಕ್ರಿಕೆಟ್​ ಶಿಶುಗಳಿಂದ ಬಲವಾದ ಹೊಡೆತ!:ಈ ಬಾರಿಯ ಟಿ20 ವಿಶ್ವಕಪ್​ ಹಲವು ಅಚ್ಚರಿಯ ಫಲಿತಾಂಶಕ್ಕೆ ಕಾರಣವಾದವು. ಗುಂಪು ಹಂತದಲ್ಲಿ ಬಲಿಷ್ಠ ತಂಡಗಳಿಗೆ ಚಳ್ಳೆಹಣ್ಣು ತಿನ್ನಿಸಿವೆ. ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲುವ ಮೂಲಕ ನೆದರ್​ಲ್ಯಾಂಡ್ಸ್​ ಆ ತಂಡವನ್ನು ವಿಶ್ವಕಪ್​ ರೇಸ್​ನಿಂದಲೇ ಹೊರಹಾಕಿದರೆ, ಐರ್ಲೆಂಡ್​ ತಂಡ ಇಂಗ್ಲೆಂಡ್​ಗೆ ಸೋಲುಣಿಸಿತ್ತು. ಗ್ರೂಪ್​ 2 ರಲ್ಲಿ ಜಿಂಬಾಬ್ವೆ ತಂಡ ಪಾಕಿಸ್ತಾನ ವಿರುದ್ಧ ಐತಿಹಾಸಿಕ 1 ರನ್ನಿಂದ ಗೆಲುವು ಸಾಧಿಸಿ ಸೆಮೀಸ್​ ಹಾದಿಗೆ ಮುಳ್ಳಾಗಿತ್ತು.

ಸೆಮಿಫೈನಲ್​ ತಂಡಗಳು ಹೀಗಿವೆ:

  • ನ್ಯೂಜಿಲ್ಯಾಂಡ್​
  • ಇಂಗ್ಲೆಂಡ್​
  • ಭಾರತ
  • ಪಾಕಿಸ್ತಾನ

ಇದನ್ನೂ ಓದಿ:T20 World Cup: ನೆದರ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾಗೆ ಸೋಲು... ಸೆಮಿಫೈನಲ್​ಗೆ ಭಾರತ ಎಂಟ್ರಿ

Last Updated : Nov 6, 2022, 5:05 PM IST

ABOUT THE AUTHOR

...view details