ದುಬೈ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲಿನ ಹಿನ್ನೆಲೆಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ತಮ್ಮ ತಂಡದ ಸೋಲಿಗೆ ಕಾರಣವೇನು ಎಂಬುದನ್ನ ಹೇಳಿದ್ದಾರೆ.
ಕೆಕೆಆರ್ ವಿರುದ್ಧ ಸೋಲಿಗೆ ಕಾರಣ ಬಿಚ್ಚಿಟ್ಟ ಆರ್ಆರ್ ತಂಡದ ನಾಯಕ ಸ್ಮಿತ್
ಆರಂಭಿಕ ವಿಕೆಟ್‌ಗಳನ್ನು ಬಹುಬೇಗ ಕಳೆದುಕೊಂಡಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು. ನಾವು ಯೋಜನೆ ಮಾಡಿದ ಹಾಗೆ ಆಡಲು ಸಾಧ್ಯವಾಗಲಿಲ್ಲ. ಇದು ಟಿ-20 ಕ್ರಿಕೆಟ್ನಲ್ಲಿ ನಡೆಯುತ್ತದೆ ಎಂದು ಸ್ಮಿತ್ ಹೇಳಿದ್ದಾರೆ.
ತಮ್ಮ ತಂಡದ ಆಟಗಾರರು ಕ್ರೀಡಾಂಗಣದ ಆಯಾಮಗಳಿಗೆ ಹೊಂದಿಕೊಳ್ಳಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದ ರಾಯಲ್ಸ್ ತಂಡದ ಆಟಗಾರರು, ಈ ಪಂದ್ಯದಲ್ಲಿ ಎಡವಿದರು. ಪಂಜಾಬ್ ವಿರುದ್ಧದ ಪಂದ್ಯವು ಶಾರ್ಜಾದಲ್ಲಿ ನಡೆದಿತ್ತು. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಹೋಲಿಸಿದರೆ ಅದು ಸಣ್ಣ ಕ್ರೀಡಾಂಗಣ. ನಮ್ಮ ತಂಡದ ಕೆಲವು ಆಟಗಾರರು ಇನ್ನೂ ನಾವು ಶಾರ್ಜಾದಲ್ಲಿ ಆಡುತ್ತಿದ್ದೇವೆ ಎಂದು ಭಾವಿಸಿದರು. ಇದು ನಮ್ಮ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.
ಆರಂಭಿಕ ವಿಕೆಟ್‌ಗಳನ್ನು ಬಹುಬೇಗ ಕಳೆದುಕೊಂಡಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು. ನಾವು ಯೋಜನೆ ಮಾಡಿದ ಹಾಗೆ ಆಡಲು ಸಾಧ್ಯವಾಗಲಿಲ್ಲ. ಇದು ಟಿ-20 ಕ್ರಿಕೆಟ್ನಲ್ಲಿ ನಡೆಯುತ್ತದೆ ಎಂದು ಸ್ಮಿತ್ ಹೇಳಿದ್ದಾರೆ.