ಕರ್ನಾಟಕ

karnataka

ETV Bharat / sports

Syed Mushtaq Ali : ಫೈನಲ್ 'ಓವರ್​'ನಲ್ಲಿ ಎಡವಿದ ಕರ್ನಾಟಕ : ತಮಿಳುನಾಡು 3ನೇ ಬಾರಿ ಚಾಂಪಿಯನ್ - ಪ್ರತೀಕ್ ಜೈನ್

ಸತತ ಮೂರನೇ ಬಾರಿ ಫೈನಲ್​ ತಲುಪಿದ್ದ ತಮಿಳುನಾಡು ಸೈಯದ್ ಮುಷ್ತಾಕ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು. ಅಲ್ಲದೆ ಈ ಪ್ರಶಸ್ತಿಯನ್ನು ಗರಿಷ್ಠ (3) ಬಾರಿ ಗೆದ್ದ ತಂಡ ಎಂಬ ಹೆಗ್ಗಳಿಕೆ ಪಾತ್ರವಾಯಿತು. ಕರ್ನಾಟಕ, ಬರೋಡ ಮತ್ತು ಗುಜರಾತ್​ ತಂಡಗಳೂ ತಲಾ 2 ಬಾರಿ ಟ್ರೋಫಿ ಎತ್ತಿ ಹಿಡಿದಿವೆ..

Syed Mushtaq Ali Trophy
ಸೈಯದ್ ಮುಷ್ತಾಕ್ ಅಲಿ ಟಿ20

By

Published : Nov 22, 2021, 4:11 PM IST

ನವದೆಹಲಿ :ಸೈಯದ್​ ಮುಷ್ತಾಕ್ ಅಲಿ ಟ್ರೋಫಿ ಫೈನಲ್​ನ ಕೊನೆಯ ಎಸೆತದಲ್ಲಿ ಶಾರುಖ್ ಖಾನ್(Shahrukh Khan) ಸಿಡಿಸಿದ ಅದ್ಭುತ ಸಿಕ್ಸರ್​ ನೆರವಿನಿಂದ ಕರ್ನಾಟಕ ವಿರುದ್ಧ ತಮಿಳುನಾಡು(Tamil Nadu vs Karnataka) 4 ವಿಕೆಟ್​ಗಳ ರೋಚಕ ಜಯ ಸಾಧಿಸಿ ಸತತ 2ನೇ ಹಾಗೂ ಒಟ್ಟಾರೆ ಮೂರನೇ ಬಾರಿಗೆ ಚಾಂಪಿಯನ್​ ಆಗಿ ಹೊರ ಹೊಮ್ಮಿದೆ.

ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಆರಂಭಿಕರ ವೈಫಲ್ಯದ ಹೊರತಾಗಿಯೂ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 151ರನ್ ​ಗಳಿಸಿತ್ತು.

ಅಭಿನವ್ ಮನೋಹರ್(Abhinav Manohar​) 37 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ 46 ರನ್​ಗಳಿಸಿದರೆ, ಪ್ರವೀಣ್ ದುಬೆ 25 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 33 ರನ್​ಗಳಿಸಿ ಸವಾಲಿನ ಮೊತ್ತವನ್ನು ದಾಖಲಿಸಲು ನೆರವಾದರು.

ತಮಿಳುನಾಡು ಪರ ಸಾಯಿ ಕಿಶೋರ್(Sai Kishore)​ ಕೇವಲ 12 ರನ್​ ನೀಡಿ ಪ್ರಮುಖ 3 ವಿಕೆಟ್ ಪಡೆದು ಕರ್ನಾಟಕ ಬೃಹತ್ ಮೊತ್ತ ದಾಖಲಿಸದಂತೆ ತಡೆದರು. ಇವರಿಗೆ ಸಾಥ್ ನೀಡಿದ ಸಂದೀಪರ್ ವಾರಿಯರ್​ 34ಕ್ಕೆ1, ಟಿ ನಟರಾಜನ್​ 44ಕ್ಕೆ1, ಸಂಜಯ್ ಯಾದವ್​ 32ಕ್ಕೆ1 ವಿಕೆಟ್ ಪಡೆದರು.

152 ರನ್​ಗಳ ಗುರಿ ಪಡೆದ ತಮಿಳುನಾಡು ಕೊನೆಯ ಓವರ್​ನಲ್ಲಿ ಅಗತ್ಯವಿದ್ದ 16 ರನ್​ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆಲುವು ಸಾಧಿಸಿತು. ಹರಿ ನಿಶಾಂತ್​ 12ಕ್ಕೆ 23, ಎನ್​ ಜಗದೀಶನ್​ 46ಕ್ಕೆ 41 ರನ್‌, ಶಾರುಖ್​ ಖಾನ್​ 15 ಎಸೆತಗಳಲ್ಲಿ ಅಜೇಯ 33 ರನ್​ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಕರ್ನಾಟಕ ಪರ ಕೆಸಿ ಕಾರಿಯಪ್ಪ 23ಕ್ಕೆ 2 ವಿಕೆಟ್, ಪ್ರತೀಕ್​ ಜೈನ್​ 34ಕ್ಕೆ1, ವಿದ್ಯಾಧರ್​ ಪಾಟೀಲ್ 21ಕ್ಕೆ1, ಕರುಣ್ ನಾಯರ್ 2ಕ್ಕೆ1 ವಿಕೆಟ್ ಪಡೆದರು. ಸತತ ಮೂರನೇ ಬಾರಿ ಫೈನಲ್​ ತಲುಪಿದ್ದ ತಮಿಳುನಾಡು ಸೈಯದ್ ಮುಷ್ತಾಕ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು.

ಅಲ್ಲದೆ ಈ ಪ್ರಶಸ್ತಿಯನ್ನು ಗರಿಷ್ಠ(3) ಬಾರಿ ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕರ್ನಾಟಕ, ಬರೋಡಾ ಮತ್ತು ಗುಜರಾತ್​ ತಂಡಗಳೂ ತಲಾ 2 ಬಾರಿ ಟ್ರೋಫಿ ಎತ್ತಿ ಹಿಡಿದಿವೆ.

ಇದನ್ನೂ ಓದಿ:ಕಿವೀಸ್​ ಕಠಿಣ ಪರಿಸ್ಥಿತಿಯಲ್ಲಿ ಸರಣಿಯನ್ನಾಡಿದೆ, ಸರಣಿ ಗೆದ್ದರೂ ನಮ್ಮ ಕಾಲು ನೆಲದಲ್ಲಿರಬೇಕು: ದ್ರಾವಿಡ್

ABOUT THE AUTHOR

...view details