ಕರ್ನಾಟಕ

karnataka

ETV Bharat / sports

IPL​​ನಲ್ಲಿ 100 ಕೋಟಿ ರೂ ಕ್ಲಬ್​ ಸೇರಿದ 2ನೇ ವಿದೇಶಿ ಆಟಗಾರ ಸುನೀಲ್ ನರೈನ್​ - ವಿರಾಟ್​ ಕೊಹ್ಲಿ

ನರೈನ್​ 2012ಲ್ಲಿ 3.5 ಕೋಟಿ, 2013ರಲ್ಲಿ 3.7 ಕೋಟಿ, 2014ರಿಂದ 2017ರವರೆಗೆ 9.5 ಕೋಟಿ, 2018ರಿಂದ 2021ರವರೆಗೆ 12.5 ಕೋಟಿ ರೂ ಪಡೆದಿದ್ದರು. ಇದೀಗ 2022ರ ಆವೃತ್ತಿಯಲ್ಲಿ 6 ಕೋಟಿ ರೂ ಪಡೆಯಲಿದ್ದಾರೆ. ಒಟ್ಟಾರೆ 11 ಆವೃತ್ತಿಗಳಲ್ಲಿ ಅವರ ವೇತನ 101 ಕೋಟಿ ರೂ. ಆಗಲಿದೆ.

sunil narine kkr creates ipl history becomes 2nd overseas player to earn rs 100 cr
ಸುನೀಲ್ ನರೈನ್ ಐಪಿಎಲ್ ವೇತನ

By

Published : Dec 15, 2021, 10:14 PM IST

ಮುಂಬೈ:ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದಲ್ಲಿ ಆಡುವ ವೆಸ್ಟ್​ ಇಂಡೀಸ್​ ತಂಡದ ಆಲ್​ರೌಂಡರ್​ ಸುನೀಲ್ ನರೈನ್ ಐಪಿಎಲ್​ನಲ್ಲಿ 100 ಕೋಟಿ ರೂ ವೇತನ ಪಡೆದ 2ನೇ ವಿದೇಶಿ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ನರೈನ್​​ 2012ರ ಆವೃತ್ತಿಯಿಂದಲೂ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾರೆ. ​2022ರ ಮೆಗಾ ಹರಾಜಿಗೂ ಮುನ್ನ ಕೆಕೆಆರ್​ ಸುನೀಲ್​ ನರೈನ್​ರನ್ನು 6 ಕೋಟಿ ರೂ. ಗಳಿಗೆ ರಿಟೈನ್ ಮಾಡಿಕೊಂಡಿತ್ತು. ಇದೀಗ ಒಟ್ಟು 11ನೇ ಆವೃತ್ತಿಯನ್ನ ಒಂದೇ ಫ್ರಾಂಚೈಸಿಯಲ್ಲಿ ಆಡಲಿರುವ ವಿಂಡಿಸ್ ಆಟಗಾರ ಐಪಿಎಲ್ ಇತಿಹಾಸದಲ್ಲಿ 100 ಕೋಟಿ ರೂ ಆದಾಯಗಳಿಸಿದ 2ನೇ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ.

ನರೈನ್​ 2012ಲ್ಲಿ 3.5 ಕೋಟಿ,2013ರಲ್ಲಿ 3.7 ಕೋಟಿ, 2014ರಿಂದ 2017ರವರೆಗೆ 9.5 ಕೋಟಿ, 2018ರಿಂದ 2021ರವರೆಗೆ 12.5 ಕೋಟಿ ರೂ ಪಡೆದಿದ್ದರು. ಇದೀಗ 2022ರ ಆವೃತ್ತಿಯಲ್ಲಿ 6 ಕೋಟಿ ರೂ. ಪಡೆಯಲಿದ್ದಾರೆ. ಒಟ್ಟಾರೆ 11 ಆವೃತ್ತಿಗಳಲ್ಲಿ ಅವರ ವೇತನ 101 ಕೋಟಿ ರೂ. ಆಗಲಿದೆ.

ನರೈನ್​ಗೂ ಮೊದಲು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿಯಲ್ಲಿದ್ದ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ 2021ರ ಆವೃತ್ತಿಯ ವೇಳೆಗೆ 102 ಕೋಟಿ ರೂ ಪೂರ್ಣಗೊಳಿಸಿದ್ದರು.

ಐಪಿಎಲ್​ನಲ್ಲಿ ಗರಿಷ್ಠ ವೇತನ ಪಡೆ ಟಾಪ್ 5 ಕ್ರಿಕೆಟಿಗರು

  • ಮಹೇಂದ್ರ ಸಿಂಗ್ ಧೋನಿ-152.8 ಕೋಟಿ ರೂ
  • ರೋಹಿತ್ ಶರ್ಮಾ-146 ಕೋಟಿ ರೂ
  • ವಿರಾಟ್​ ಕೊಹ್ಲಿ-143.2 ಕೋಟಿ ರೂ
  • ಸುರೇಶ್ ರೈನಾ- 110 ಕೋಟಿ ರೂ
  • ಎಬಿಡಿ ವಿಲಿಯರ್ಸ್-102 ಕೋಟಿ ರೂ

ಇದನ್ನೂ ಓದಿ:ಕೆಕೆಆರ್ ನನ್ನ 2ನೇ ಮನೆ, ನಾನು ಐಪಿಎಲ್​ನಲ್ಲಿ ಆಡಲು ಬಯಸುವ ಏಕೈಕ ತಂಡ: ಸುನೀಲ್ ನರೈನ್

ABOUT THE AUTHOR

...view details