ಕರ್ನಾಟಕ

karnataka

ETV Bharat / sports

ಮುಂದಿನ ವರ್ಷ ನಾನು ಆಡುತ್ತೇನೆಯೇ ಎಂಬುದು ರೀಟೈನ್ ಪಾಲಿಸಿ ಅವಲಂಬಿಸಿದೆ: ಧೋನಿ - ಮುಂದಿನ ವರ್ಷ ಧೋನಿ ಆಡುವುದು ಖಚಿತ

ಟಾಸ್​ ಬಳಿಕ 40 ವರ್ಷದ ಧೋನಿ ಅವರಿಗೆ ಈ ಮಾತು ಕೇಳಲಾಯಿತು.. ನೀವು ಐಪಿಎಲ್​​ ಆರಂಭದಿಂದಲೂ ಆಡಿರುವ ಫ್ರಾಂಚೈಸಿಯಲ್ಲಿ ಉಳಿಯುತ್ತೀರಾ ಎಂಬ ಪ್ರಶ್ನೆಯನ್ನು ಮಾಜಿ ಟೀಂ ಇಂಡಿಯಾ ಕ್ಯಾಪ್ಟನ್​​ಗೆ ಹಾಕಲಾಗಿದೆ. ಅಷ್ಟಕ್ಕೂ ಅವರು ನೀಡಿದ ಉತ್ತರವೇನು ಗೊತ್ತಾ?

MS Dhoni
ಎಂಎಸ್ ಧೋನಿ

By

Published : Oct 7, 2021, 5:02 PM IST

Updated : Oct 7, 2021, 6:04 PM IST

ದುಬೈ: ಐಪಿಎಲ್​​ನಲ್ಲಿ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ 2022ರ ಐಪಿಎಲ್​ನಲ್ಲಿ ಆಡುವುದರ ಬಗ್ಗೆ ಸಂದೇಹವಿಲ್ಲ. ಆದರೆ, ಈ ಸಂದರ್ಭದಲ್ಲಿ ತಾವೂ ಚೆನ್ನೈ ಸೂಪರ್​ ಕಿಂಗ್ಸ್​ ಪರ ಆಡಲಿದ್ದೇನೆಯೇ ಎನ್ನುವುದರ ಬಗ್ಗೆ ಇನ್ನೂ ಖಚಿತವಾಗಿ ತಮಗೆ ತಿಳಿದಿಲ್ಲ ಎಂದು ಧೋನಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ತಿಳಿಸಿದ್ದಾರೆ.

ಗುರುವಾರ ಟಾಸ್​ ಮುಗಿದ ನಂತರ ಮಾತನಾಡಿದ 40 ವರ್ಷದ ಧೋನಿಯನ್ನು, ನೀವು ಐಪಿಎಲ್​​ ಆರಂಭದಿಂದಲೂ ಆಡಿರುವ ಫ್ರಾಂಚೈಸಿಯಲ್ಲಿ ಉಳಿಯುತ್ತೀರಾ ಎಂದು ಕೇಳಲಾಯಿತು.

ಇದಕ್ಕೆ ಉತ್ತರಿಸಿದ ಅವರು" ನೀವು ನನ್ನನ್ನು ಮುಂದಿನ ವರ್ಷವೂ ಐಪಿಎಲ್​ನಲ್ಲಿ ನೋಡಬಹುದು. ಆದರೆ, ನಾನು ಸಿಎಸ್​ಕೆಗಾಗಿ ಆಡುತ್ತೇನೆಯೇ ಎಂಬುದು ಅನಿಶ್ಚಿತತೆಯಿಂದ ಕೂಡಿದೆ. ಇದಕ್ಕೆ ಸರಳ ಕಾರಣ ಎಂದರೆ ಮುಂದಿನ ವರ್ಷ ಎರಡು ಹೊಸ ತಂಡಗಳು ಐಪಿಎಲ್​ಗೆ ಸೇರಿಕೊಳ್ಳುತ್ತವೆ ಎಂದು ಧೋನಿ ಹೇಳಿದ್ದಾರೆ.

ರೀಟೈನ್ ಫಾಲಿಸಿಯ ಬಗ್ಗೆ ನಮಗೆ ಏನು ತಿಳಿದಿಲ್ಲ. ಎಷ್ಟು ಮಂದಿ ವಿದೇಶಿ ಆಟಗಾರರ ಮತ್ತು ಭಾರತೀಯ ಆಟಗಾರರನ್ನ ರೀಟೈನ್​ ಮಾಡಿಕೊಳ್ಳಬಹುದು ಎಂಬುದು ಗೊತ್ತಿಲ್ಲ. ಫ್ರಾಂಚೈಸಿ ಖಾತೆಯಿಂದ ಪ್ರತಿಯೊಬ್ಬ ಆಟಗಾರನಿಗೆ ವ್ಯಹಿಸಬಹುದಾದ ಹಣದ ಬಗ್ಗೆಯೂ ತಿಳಿದಿಲ್ಲ. ಹಾಗಾಗಿ ಮುಂದಿನ ವರ್ಷದ ಬಗ್ಗೆ ಸಾಕಷ್ಟು ಅನಿಶ್ಚಿತತೆಗಳಿವೆ. ಹಾಗಾಗಿ ಏನಾಗುತ್ತದೆಯೋ ಅದಕ್ಕಾಗಿ ನಾವು ಕಾದು ನೋಡಬೇಕಿದೆ, ಎಲ್ಲರಿಗೂ ಒಳ್ಳೆಯದಾಗಲಿದೆ ಎಂದು ಆಶಿಸುತ್ತೇವೆ ಎಂದು ಧೋನಿ ಹೇಳಿದರು.

ಇದನ್ನು ಓದಿ: ಬಾಲಿವುಡ್​​ಗೆ ಬರ್ತಾರಾ ಧೋನಿ? ಅಭಿಮಾನಿಗಳ ಪ್ರಶ್ನೆಗೆ ಕ್ಯಾಪ್ಟನ್ ಕೂಲ್​ ಉತ್ತರ

Last Updated : Oct 7, 2021, 6:04 PM IST

ABOUT THE AUTHOR

...view details