ಕರ್ನಾಟಕ

karnataka

ETV Bharat / sports

ನಾಲ್ಕನೇ ಟೆಸ್ಟ್​ಗೂ ಸ್ಮಿತ್​ ನಾಯಕತ್ವ ಮುಂದುವರಿಕೆ: ಏಕದಿನ ಸರಣಿಗೂ ಕಮಿನ್ಸ್​ ಡೌಟ್​​ - ETV Bharath Kannada news

ಬಾರ್ಡರ್ ಗವಾಸ್ಕರ್ ಟೆಸ್ಟ್‌ ಸರಣಿಯ ನಾಲ್ಕನೇ ಹಾಗೂ ಅಂತಿಮ ಪಂದ್ಯಕ್ಕೆ ಸ್ಮಿತ್​ ನಾಯಕತ್ವ ಮುಂದುವರಿಕೆ - ಆಸ್ಟ್ರೇಲಿಯಾದಿಂದ ಹಿಂದಿರುಗಿದ ಕಮಿನ್ಸ್​ - ಏಕದಿನ ಕ್ರಿಕೆಟ್​ಗೂ ಕಮಿನ್ಸ್​ ಮರಳುವುದು ಅನುಮಾನ

Steve Smith
ಸ್ಮಿತ್​ ನಾಯಕತ್ವ

By

Published : Mar 6, 2023, 5:16 PM IST

ಅಹಮದಾಬಾದ್ (ಗುಜರಾತ್​):ಭಾರತ ವಿರುದ್ಧದ ಅಂತಿಮ ಬಾರ್ಡರ್ ಗವಾಸ್ಕರ್ ಟೆಸ್ಟ್‌ಗೆ ಸ್ಟ್ಯಾಂಡ್ - ಇನ್ ನಾಯಕ ಸ್ಟೀವ್ ಸ್ಮಿತ್ ತಂಡದ ನಾಯಕತ್ವವನ್ನು ಮುಂದುವರೆಸುತ್ತಾರೆ ಎಂದು ಆಸ್ಟ್ರೇಲಿಯಾ ದೃಢಪಡಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇದೇ 9 ರಿಂದ ನಾಲ್ಕನೇ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಆಸ್ಟ್ರೇಲಿಯಾ ತಂಡ ಮೂರನೇ ಟೆಸ್ಟ್​ನಲ್ಲಿ ಗೆದ್ದು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಫೈನಲ್​ಗೆ ಏರಿದೆ. ನಾಲ್ಕನೇ ಪಂದ್ಯದಲ್ಲಿ ಭಾರತ ಗೆದ್ದಲ್ಲಿ ಭಾರತದ ಪ್ರವೇಶವೂ ದೃಢವಾಗಲಿದೆ.

ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ನಂತರ ಪ್ಯಾಟ್ ಕಮಿನ್ಸ್​ ಸ್ವದೇಶಕ್ಕೆ ಹಿಂದಿರುಗಿದ ನಂತರ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾದ ನಾಯಕರಾಗಿ ನಿಯುಕ್ತರಾದರು. ಸ್ತನ ಕ್ಯಾನ್ಸರ್‌ನಿಂದಾಗಿ ಬಳಲುತ್ತಿರುವ ತಾಯಿ ಆರೈಕೆ ಸಂಬಂಧ ನಾಯಕ ಪ್ಯಾಟ್​ ಕಮಿನ್ಸ್​ ಸಿಡ್ನಿಯಲ್ಲಿರುವ ಮನೆಗೆ ತೆರಳಿದ್ದರು. ಮೂರನೆ ಟೆಸ್ಟ್​ ಆರಂಭಕ್ಕೆ 9 ದಿನಗಳ ಅಂತರ ಇದ್ದ ಕಾರಣ ಮರಳಿ ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಸಂಕಷ್ಟದ ಸಮಯದಲ್ಲಿ ಕುಟುಂಬದೊಂದಿಗೆ ಕಳೆಯುವುದಾಗಿ ಹೇಳಿ ಕಮಿನ್ಸ್ ತಂಡ ಸೇರದೇ ಹೊರಗುಳಿದರು. ನಾಲ್ಕನೇ ಪಂದ್ಯಕ್ಕೂ ಭಾರತ್ಕಕೆ ಹಿಂತಿರುಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಇಂದೋರ್​ನ ಹೋಳ್ಕರ್​ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್​ನ ನಾಯಕತ್ವವನ್ನು ಸ್ಮಿತ್​ ವಹಿಸಿದ್ದರು. ಭಾರತ ಪ್ರವಾಸದಲ್ಲಿರುವ ಭಾರತ ಮೂರನೇ ಟೆಸ್ಟ್​ನಲ್ಲಿ 9 ವಿಕೆಟ್​ಗಳ ಜಯ ಸಾಧಿಸಿತ್ತು. ನಾಥನ್​ ಲಿಯಾನ್​ ಎರಡು ಇನ್ನಿಂಗ್ಸ್​ನಿಂದ 10 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು. ಈ ಪಂದ್ಯದ ಗೆಲುವು ಆಸಿಸ್​ ತಂಡಕ್ಕೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆರಿಸಿತು.

ಆಸ್ಟ್ರೇಲಿಯಾವು ಜೂನ್ 7 ರಂದು ಓವಲ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2021-23ಕ್ಕೆ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಫೈನಲ್​ ತಲುಪಲು ಭಾರತ ಮತ್ತು ಶ್ರೀಲಂಕಾ ನಡುವೆ ಸ್ಪರ್ಧೆ ಇದೆ. ನಾಲ್ಕನೇ ಟೆಸ್ಟ್​ನಲ್ಲಿ ಭಾರತ ಗೆಲುವು ಸಾಧಿಸಿದರೆ ಫೈನಲ್​ ಪಕ್ಕಾ ಆಗಲಿದೆ. ಇಲ್ಲದಿದ್ದಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲ್ಯಾಂಡ್​​​ ನಡುವಣ ಎರಡು ಟೆಸ್ಟ್​ ಪಂದ್ಯದ ಫಲಿತಾಂಶಕ್ಕಾಗಿ ಭಾರತ ಕಾಯಬೇಕಿದೆ. ಶ್ರೀಲಂಕಾ ಕಿವೀಸ್​ ಪಡೆಯನ್ನು 2-0 ಯಿಂದ ಕ್ಲೀನ್​ ಸ್ವೀಪ್ ಮಾಡಿದರೆ ಸಿಂಹಳೀಯರು ಅಂತಿಮ ಹಣಾಹಣಿಯಲ್ಲಿ ಆಡಲಿದೆ. ​

ಏಕದಿನ ಸರಣಿಗೂ ಕಮಿನ್ಸ್​ ಆಗಮನ ಡೌಟ್​:ಆಸ್ಟ್ರೇಲಿಯಾದ ಎದುರು ಭಾರತಕ್ಕೆ ಮಾರ್ಚ್ 17, 19 ಮತ್ತು 22ಕ್ಕೆ ಮೂರು ಏಕದಿನ ಪಂದ್ಯದ ಸರಣಿ ಇದ್ದು, ಇದಕ್ಕೆ ಸಹ ಕಮಿನ್ಸ್​ ಬರುವುದು ಅನುಮಾನ ಇದೆ. ಆದರೆ, ಈ ಬಗ್ಗ ಕ್ರಿಕೆಟ್​ ಆಸ್ಟ್ರೇಲಿಯಾ ಯಾವುದೇ ಮಾಹಿತಿ ನೀಡಿಲ್ಲವಾದರೂ ತಾಯಿಯ ಅನಾರೋಗ್ಯದ ಹಿನ್ನೆಲೆ ಅವರು ಉಪಸ್ಥಿತಿ ಕುಟುಂಬದೊಂದಿಗೆ ಹೆಚ್ಚು ಅಗತ್ಯ ಇದೆ. ಆ್ಯರನ್​ ಪಿಂಚ್​ ಅವರು ರಾಜೀನಾಮೆ ನೀಡಿದ ನಂತರ ಏಕದಿನಕ್ಕೆ ಕಮಿನ್ಸ್​ ಅವರಿಗೆ ನಾಯಕತ್ವವನ್ನು ನೀಡಲಾಗಿತ್ತು.

ಏಕದಿನ ತಂಡದಲ್ಲಿ ಆಸಿಸ್​ ಒಂದು ಬದಲಾವಣೆ ಮಾಡಿದ್ದು, ಗಾಯಗೊಂಡಿರುವ ಝೈ ರಿಚರ್ಡ್‌ಸನ್‌ ಬದಲಿಯಾಗಿ ನಾಥನ್ ಎಲ್ಲಿಸ್ ಬಂದಿದ್ದಾರೆ. ರಿಚರ್ಡ್ಸನ್ ಬಿಗ್​ ಬ್ಯಾಷ್​ ಲೀಗ್​ ಕ್ರಿಕೆಟ್ ಆಡುವಾಗ ಎಡ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ಅವರ ಚೇತರಿಕೆಗೆ ಸಮಯ ಬೇಕಾಗಿದ್ದರಿಂದ ಬದಲಿ ಆಟಗಾರನನ್ನು ಘೋಷಿಸಿದ್ದಾರೆ. ರಿಚರ್ಡ್ಸನ್ ಮಂಡಿ ನೋವಿನ ಕಾರಣ ಬಿಗ್​ ಬ್ಯಾಷ್​​ ಲೀಗ್​ನ ಅರ್ಧದಿಂದ ಹೊರಗುಳಿದಿದ್ದರು.

ಭಾರತ ವಿರುದ್ಧದ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್ , ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ.

ಇದನ್ನೂ ಓದಿ:ಶೇಷ ಭಾರತಕ್ಕೆ ಇರಾನಿ ಕಪ್​: ಪದಾರ್ಪಣೆ ಪಂದ್ಯದಲ್ಲೇ "ಜಯ"ಸ್ವಾಲ್​ ಸಾಧನೆ

ABOUT THE AUTHOR

...view details