ಕರ್ನಾಟಕ

karnataka

By

Published : Jul 30, 2021, 10:14 PM IST

ETV Bharat / sports

ಬಯೋಬಬಲ್‌ ಉಲ್ಲಂಘನೆ: ಲಂಕಾದ ಮೂವರು ಕ್ರಿಕೆಟರ್ಸ್​ಗೆ ಎರಡು ವರ್ಷ ನಿಷೇಧ

ಇಂಗ್ಲೆಂಡ್​ ವಿರುದ್ಧದ ಕ್ರಿಕೆಟ್​​ ಸರಣಿ ಸಂದರ್ಭದಲ್ಲಿ ಬಯೋಬಬಲ್ ಉಲ್ಲಂಘನೆ ಮಾಡಿದ್ದಕ್ಕಾಗಿ ಶ್ರೀಲಂಕಾದ ಮೂವರು ಕ್ರಿಕೆಟರ್ಸ್​​ಗೆ ಮೇಲೆ ಇದೀಗ ಎರಡು ವರ್ಷ ಬ್ಯಾನ್​ ಮಾಡಲಾಗಿದೆ.

Sri Lanka Cricket
Sri Lanka Cricket

ಕೊಲಂಬೊ: ಲಂಡನ್​ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಬಯೋಬಬಲ್ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಶ್ರೀಲಂಕಾದ ಮೂವರು ಪ್ಲೇಯರ್ಸ್​ ಎರಡು ವರ್ಷ ನಿಷೇಧಕ್ಕೊಳಗಾಗಿದ್ದಾರೆ. ಆದರೆ ಒಂದು ವರ್ಷ ಅಮಾನತಿನಲ್ಲಿ ಇಡಲಾಗಿದೆ.

ಲಂಡನ್​ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಶ್ರೀಲಂಕಾದ ಉಪ ನಾಯಕ ಕುಶಾಲ್​ ಮೆಂಡಿಸ್​, ಆರಂಭಿಕ ಆಟಗಾರ ದನುಷ್ಕಾ​ ಗುಣತಿಲಕ ಹಾಗೂ ವಿಕೆಟ್ ಕೀಪರ್​ ನಿರೋಷನ್ ಡಿಕ್ವೆಲ್ಲಾ ಕೋವಿಡ್ ನಿಯಮ ಉಲ್ಲಂಘನೆ ಮಾಡಿ, ಲಂಡನ್​​ನ ವಿವಿಧ ಸ್ಥಳಗಳಲ್ಲಿ ಸುತ್ತಾಡಿದ್ದರು. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಶ್ರೀಲಂಕಾ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರ ಜತೆಗೆ ಪ್ಲೇಯರ್ಸ್​ಗಳಿಗೆ $50 000 ಡಾಲರ್​​ ದಂಡ ವಿಧಿಸಿದೆ.

ಇದನ್ನೂ ಓದಿ: ಬಯೋಬಬಲ್​ ಉಲ್ಲಂಘನೆ: ಮೆಂಡಿಸ್​ ಸೇರಿ ಲಂಕಾದ ಮೂವರು ಕ್ರಿಕೆಟರ್ಸ್ ಅಮಾನತು

ಮೂವರು ಪ್ಲೇಯರ್ಸ್​ಗಳನ್ನು ಎರಡು ವರ್ಷ ಬ್ಯಾನ್​ ಮಾಡಿರುವ ಲಂಕಾ ಬೋರ್ಡ್​, ಒಂದು ವರ್ಷಗಳ ಕಾಲ ಅಮಾನತು ಮಾಡಿದೆ. ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗಿಯಾಗಬೇಕಾಗಿದ್ದ ಸಂದರ್ಭದಲ್ಲಿ ಶ್ರೀಲಂಕಾ ತಂಡದ ಉಪನಾಯಕ ಕುಶಾಲ್​​ ಮೆಂಡಿಸ್​, ವಿಕೆಟ್​ ಕೀಪರ್​ ಬ್ಯಾಟ್ಸ್​​​​ಮನ್​​ ನಿರೋಷನ್ ಡಿಕ್ವೆಲ್ಲಾ ಹಾಗೂ ಧನುಷ್ಕಾ ಗುಣತಿಲಕ್​​ ಬಯೋಬಬಲ ಉಲ್ಲಂಘನೆ ಮಾಡಿದ್ದರು.

ABOUT THE AUTHOR

...view details