ನವದೆಹಲಿ:ಬೃಹತ್ ಮೊತ್ತ ಪೇರಿಸಿದ ಹೊರತಾಗಿಯೂ ಭಾರತ ತಂಡ ಬೌಲರ್ಗಳ ಕಳಪೆ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಸೋಲು ಕಂಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ ಅಗ್ರಪಂಕ್ತಿ ಬ್ಯಾಟರ್ಗಳ ಸಹಾಯದಿಂದ 211 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ 19.1 ಓವರ್ನಲ್ಲಿ 212 ಗಳಿಸಿ ವಿಜಯದ ನಗೆ ಬೀರಿತು.
ಕಿಲ್ಲರ್ ಮಿಲ್ಲರ್, ಡ್ಯಾಷಿಂಗ್ ಡಸೆನ್:ಎದುರುಗಡೆ 211 ರನ್ಗಳ ಬೃಹತ್ ಮೊತ್ತವಿದ್ದರೂ ಎದೆಗುಂದದೇ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಆಟಗಾರರು ಸಿಕ್ಸರ್ಗಳ ಸುರಿಮಳೆ ಸುರಿಸಿದರು. ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ 22 ರನ್ ಗಳಿಸಿದರೆ, ನಾಯಕ ತೆಂಬಾ ಬವುಮಾ 10 ರನ್ ಗಳಿಸಿ ಔಟಾದರು. ಆಲ್ರೌಂಡರ್ ಸ್ವೇನ್ ಪ್ರಿಟೋರಿಯಸ್ 4 ಸಿಕ್ಸರ್ ಸಮೇತ 29 ರನ್ಗಳಿಸಿದರು.
ನಂತರ ಬಂದ ರಸ್ಸಿ ವ್ಯಾನ್ಡರ್ ಡಸ್ಸೆನ್ ಮತ್ತು ಐಪಿಎಲ್ನಲ್ಲಿ ಮಿಂಚಿದ್ದ ಡೇವಿಡ್ ಮಿಲ್ಲರ್ ಭಾರತೀಯ ಬೌಲರ್ಗಳನ್ನು ದಂಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಡಸ್ಸೆನ್ 46 ಎಸೆತಗಳಲ್ಲಿ 5 ಸಿಕ್ಸರ್, 7 ಬೌಂಡರಿ ಸಮೇತ 75 ರನ್ ಗಳಿಸಿದರೆ, ಮಿಲ್ಲರ್ 31 ಎಸೆತಗಳಲ್ಲ 64 ರನ್ ಚಚ್ಚಿ ಬೌಲರ್ಗಳ ಬೆವರಿಳಿಸಿದರು. ಇವರ ಇನ್ನಿಂಗ್ಸ್ನಲ್ಲಿ 4 ಬೌಂಡರಿ 5 ಭರ್ಜರಿ ಸಿಕ್ಸರ್ಗಳು ಇದ್ದವು.