ಗ್ಕೆಬರ್ಹಾ(ದಕ್ಷಿಣ ಆಫ್ರಿಕಾ): ಇಲ್ಲಿನ ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ ನಡೆದ ಟಿ20 ಎಡರನೇ ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಐದು ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ರಿಂಕು ಸಿಂಗ್ ಮತ್ತೊಮ್ಮೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ ಸಹ ಪ್ರಯೋಜನವಾಗಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಬೌಲರ್‌ಗಳು ವಿಫಲರಾದರು.
ಪಂದ್ಯಕ್ಕೆ ಮಳೆ ಅಡ್ಡಿ: ಮಂಗಳವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಡಕ್‌ವರ್ತ್ ಲೂಯಿಸ್ ನಿಯಮದಡಿ 5 ವಿಕೆಟ್‌ಗಳ ಸೋಲು ಕಂಡಿದೆ. ರಿಂಕು ಸಿಂಗ್ (68; 39 ಎಸೆತಗಳಲ್ಲಿ 9×4, 2×6) ಮತ್ತು ಸೂರ್ಯಕುಮಾರ್ ಯಾದವ್ (56; 36 ಎಸೆತಗಳಲ್ಲಿ 5×4, 3×6) ಮಿಂಚಿದ್ದರಿಂದ ಭಾರತ 7 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತ್ತು. ಮಳೆಯಿಂದಾಗಿ ಟೀಂ ಇಂಡಿಯಾ ಇನಿಂಗ್ಸ್ 19.3 ಓವರ್‌ಗಳಲ್ಲಿ ಕೊನೆಗೊಂಡಿತು.
ಸೂರ್ಯ, ರಿಂಕು ಭರ್ಜರಿ ಬ್ಯಾಟಿಂಗ್:ಭಾರತದ ಇನ್ನಿಂಗ್ಸ್ ವೇಳೆ ನಾಯಕ ಸೂರ್ಯಕುಮಾರ್ ಮತ್ತು ರಿಂಕು ಸಿಂಗ್ ಹೈಲೈಟ್ ಆಗಿದ್ದರು. ಟೀಂ ಇಂಡಿಯಾ ಬೃಹತ್ ರನ್ ಗಳಿಸಲು ಇವರಿಬ್ಬರೇ ಕಾರಣ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಶೂನ್ಯಕ್ಕೆ ಆರಂಭಿಕ ಆಟಗಾರರಿಬ್ಬರು ವಿಕೆಟ್ ಒಪ್ಪಿಸಿದ ನಂತರ ರಿಂಕು ಸಿಂಗ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ ಅಬ್ಬರ ಇನ್ನಿಂಗ್ಸ್ ಬಲದಿಂದ ಟೀಮ್ ಇಂಡಿಯಾ ಮಳೆ ಆರಂಭಕ್ಕೂ ಮುನ್ನ 19.3 ಓವರ್ಗೆ 7 ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಿತ್ತು. ಟಾಸ್ಗೂ ಮುನ್ನ ಮಳೆಯ ಮುನ್ಸೂಚನೆ ಇತ್ತಾದರೂ ನಂತರ ವರುಣ ಆಟಕ್ಕೆ ಅವಕಾಶ ಮಾಡಿಕೊಟ್ಟದ್ದ. ಆದರೆ, 19.3ನೇ ಓವರ್ ವೇಳೆಗೆ ದಿಢೀರನೇ ಮಳೆ ಬಂದ ಕಾರಣ ಪಂದ್ಯವನ್ನು ನಿಲ್ಲಿಸಲಾಗಿತ್ತು.
ಭಾರತದ ಪರ ಯಶಸ್ವಿ ಜೈಸ್ವಾಲ್ 0 ರನ್, ಶುಭಮನ್ ಗಿಲ್ 0 ರನ್, ತಿಲಕ್ ವರ್ಮಾ 29 ರನ್, ಸೂರ್ಯಕುಮಾರ್ ಯಾದವ್ 56 ರನ್, ಜಿತೇಶ್ ಶರ್ಮಾ 1 ರನ್, ರವೀಂದ್ರ ಜಡೇಜಾ 19 ರನ್, ಅರ್ಷ್ ದೀಪ್ ಸಿಂಗ್ 0 ರನ್, ಔಟಾಗದೇ ರಿಂಕು ಸಿಂಗ್ 68 ರನ್ ಮತ್ತು ಮೊಹಮ್ಮದ್ ಸಿರಾಜ್ 0 ರನ್ ಗಳಿಸಿದರು. ಇನ್ನು ದಕ್ಷಿಣಾ ಆಫ್ರಿಕಾ ವಿರುದ್ಧ ಜೆರಾಲ್ಡ್ ಕೋಟ್ಜಿ ಮೂರು ವಿಕೆಟ್ ಪಡೆದು ಮಿಂಚಿದ್ರೆ, ಐಡೆನ್ ಮಾರ್ಕ್ರಾಮ್, ತಬ್ರೈಜ್ ಶಮ್ಸಿ, ಮಾರ್ಕೊ ಜಾನ್ಸೆನ್ ಮತ್ತು ಲಿಜಾಡ್ ವಿಲಿಯಮ್ಸ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.