ನವದೆಹಲಿ:ಟೀಂ ಇಂಡಿಯಾ ಕ್ರಿಕೆಟ್ನ ಆರಂಭಿಕ ಆಟಗಾರ ಆಯೇಷಾ ಮುಖರ್ಜಿ ತಮ್ಮ ಪತಿ ಶಿಖರ್ ಧವನ್ಗೆ ವಿಚ್ಛೇದನ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಯೇಷಾ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ವಿಚ್ಛೇದನಕ್ಕೆ ಸಂಬಂಧಿಸಿದಂತೆ ಆಯೇಷಾ ಮುಖರ್ಜಿ ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಆದರೆ ಶಿಖರ್ ಧವನ್ ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಕಳೆದ 9 ವರ್ಷಗಳಿಂದ ಶಿಖರ್ ಧವನ್ ಹಾಗೂ ಆಯೇಷಾ ದಾಂಪತ್ಯ ಜೀವನ ನಡೆಸುತ್ತಿದ್ದು, ಇವರಿಗೆ ಒಂದು ಹೆಣ್ಣು ಮಗುವಿದೆ.
ಆಯೇಷಾ ಶಿಖರ್ ಧವನ್ ಅವರಿಗಿಂತ 10 ವರ್ಷ ದೊಡ್ಡವರು. ಧವನ್ಗೂ ಮುನ್ನ ಆಸ್ಟ್ರೇಲಿಯಾದ ಉದ್ಯಮಿಯೊಬ್ಬನನ್ನು ವಿವಾಹವಾಗಿದ್ದ ಆಯೇಷಾ ಅವರಿಂದಲೂ ವಿಚ್ಛೇದನ ಪಡೆದುಕೊಂಡಿದ್ದರು. ಟೀಂ ಇಂಡಿಯಾ ಏಕದಿನ ಕ್ರಿಕೆಟ್ನ ಖಾಯಂ ಸದಸ್ಯರಾಗಿರುವ ಶಿಖರ್ ಧವನ್, ಸದ್ಯ ಮುಂಬರುವ ಐಪಿಎಲ್ ಹಾಗೂ ಟಿ - 20 ವಿಶ್ವಕಪ್ನಲ್ಲಿ ಭಾಗಿಯಾಗಲು ತಯಾರಿ ನಡೆಸಿದ್ದು, ಇದರ ಮಧ್ಯೆ ಈ ಸುದ್ದಿ ಹೊರಬಿದ್ದಿದೆ.