ಕರ್ನಾಟಕ

karnataka

ETV Bharat / sports

ಸೆ.10 ರಿಂದ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್: ಇಂಡಿಯಾ ಲೆಜೆಂಡ್ಸ್​ಗೆ ಸಚಿನ್​ ತೆಂಡೂಲ್ಕರ್​ ಸಾರಥ್ಯ - ನ್ಯೂಜಿಲ್ಯಾಂಡ್​ ಲೆಜೆಂಡ್ಸ್​ ಎಂಟ್ರಿ

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಇದೇ ಸೆಪ್ಟೆಂಬರ್​ 10 ರಿಂದ 22 ದಿನಗಳ ಕಾಲ ನಡೆಯಲಿದೆ. ಅಕ್ಬೋಬರ್​ 1 ರಂದು ರಾಯ್​ಪುರದಲ್ಲಿ ಫೈನಲ್​ ನಡೆಯಲಿದೆ. ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಹಾಲಿ ಚಾಂಪಿಯನ್​ ಇಂಡಿಯಾ ಲೆಜೆಂಡ್ಸ್​ ತಂಡವನ್ನು ಮುನ್ನಡೆಸಲಿದ್ದಾರೆ.

road-safety-world-series
ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್

By

Published : Sep 1, 2022, 3:36 PM IST

ಮುಂಬೈ:ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ನಡೆಸಲಾಗುವ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ (RSWS) ಎರಡನೇ ಆವೃತ್ತಿ ಇದೇ ಸೆಪ್ಟೆಂಬರ್​ 10 ರಿಂದ ಆರಂಭವಾಗಲಿದೆ. ಹಾಲಿ ಚಾಂಪಿಯನ್​ ಇಂಡಿಯಾ ಲೆಜೆಂಡ್ಸ್​ ತಂಡವನ್ನು ಈ ಬಾರಿಯೂ ಲಿಟ್ಲ್​ ಚಾಂಪಿಯನ್​, ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಮುನ್ನಡೆಸಲಿದ್ದಾರೆ.

22 ದಿನಗಳ ಪಂದ್ಯಾವಳಿಯನ್ನು ಕಾನ್ಪುರ, ರಾಯ್​ಪುರ, ಇಂದೋರ್​, ಡೆಹ್ರಾಡೂನ್​ನಲ್ಲಿ ನಡೆಸಲಾಗುತ್ತದೆ. ಆರಂಭಿಕ ಪಂದ್ಯಗಳು ಕಾನ್ಪುರದಲ್ಲಿ ನಡೆಯಲಿದ್ದು, ರಾಯ್‌ಪುರದಲ್ಲಿ ಎರಡು ಸೆಮಿಫೈನಲ್‌ ಮತ್ತು ಅಕ್ಟೋಬರ್​ 1 ರಂದು ಫೈನಲ್‌ ನಡೆಯಲಿದೆ ಎಂದು ಆಯೋಜಕರು ಗುರುವಾರ ಪ್ರಕಟಿಸಿದ್ದಾರೆ.

ನ್ಯೂಜಿಲ್ಯಾಂಡ್​ ಲೆಜೆಂಡ್ಸ್​ ಎಂಟ್ರಿ: ಈ ಬಾರಿಯ ​ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್​ ಲೆಜೆಂಡ್ಸ್​ ಹೊಸದಾಗಿ ಸೇರ್ಪಡೆಯಾಗಲಿದ್ದಾರೆ. ಇವರೊಂದಿಗೆ ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಇಂಗ್ಲೆಂಡ್‌ನ ಕ್ರಿಕೆಟ್​ ದಂತಕಥೆ ಆಟಗಾರರು ಇರಲಿದ್ದಾರೆ.

ದೇಶ ಮತ್ತು ಜಗತ್ತಿನಾದ್ಯಂತ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಈ ಟೂರ್ನಿಯನ್ನು ಆಡಿಸಲಾಗುತ್ತಿದೆ. ಈ ಟೂರ್ನಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ, ಮಾಹಿತಿ ಮತ್ತು ತಂತ್ರಜ್ಞಾನ, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಬೆಂಬಲಿಸಲಿದೆ.

ಟೂರ್ನಿಯಿಂದ ಸಾಮಾಜಿಕ ಬದಲಾವಣೆ:ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಾತನಾಡಿ, "ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಈ ಟೂರ್ನಿಯು ಸಾಮಾಜಿಕ ಬದಲಾವಣೆಗೂ ಚಾಲನೆ ನೀಡಲಿದೆ. ಇದು ರಸ್ತೆ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಆದರ್ಶ ವೇದಿಕೆಯಾಗಿ ಕೆಲಸ ಮಾಡಲಿದೆ ಎಂಬ ಖಾತ್ರಿ ನನಗಿದೆ" ಎಂದರು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಮಾತನಾಡಿ, "ಕ್ರಿಕೆಟ್ ಮೂಲಕ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ನಡೆಸಲಾಗುತ್ತಿರುವ ಟೂರ್ನಿ ನಿಜಕ್ಕೂ ಅದ್ಭುತ. ಇದು ಜನರ ಮನಸ್ಸನ್ನು ಬದಲಿಸಲಿದೆ ಎಂಬುದು ನನ್ನ ನಂಬಿಕೆ" ಎಂದು ಹೇಳಿದ್ದಾರೆ.

ಓದಿ:ಪಂದ್ಯದ ಬಳಿಕ ಗೆಳತಿಗೆ ಪ್ರಪೋಸ್ ಮಾಡಿದ ಹಾಂಗ್​​ ಕಾಂಗ್ ಕ್ರಿಕೆಟಿಗ: ವಿಡಿಯೋ ನೋಡಿ

ABOUT THE AUTHOR

...view details