ಮುಂಬೈ: ಭಾರತ ತಂಡದ ಸೀಮತ ಓವರ್ಗಳ ನಾಯಕ ರೋಹಿತ್ ಶರ್ಮಾ 2021ರಲ್ಲಿ ಟಿ-20 ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಅಧಿಕ ರನ್ ಗಳಿಸಿದ ಭಾರತದ ಬ್ಯಾಟರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಇನ್ನು ಏಕದಿನ ಪಂದ್ಯಗಳಲ್ಲಿ ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಹೆಚ್ಚು ರನ್ಗಳಿಸಿದ್ದಾರೆ.
2021ರಲ್ಲಿ ರೋಹಿತ್ ಶರ್ಮಾ 11 ಪಂದ್ಯಗಳಲ್ಲಿ 906 ರನ್ಗಳಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚು ರನ್ಗಳಿಸಿದ ಭಾರತದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇವರ ನಂತರ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ 12 ಪಂದ್ಯಗಳಿಂದ 748, ಚೇತೇಶ್ವರ್ ಪೂಜಾರ 14 ಪಂದ್ಯಗಳಿಂದ 702, ವಿರಾಟ್ ಕೊಹ್ಲಿ 11 ಪಂದ್ಯಗಳಿಂದ 536 ರನ್ ಮತ್ತು ಅಜಿಂಕ್ಯ ರಹಾನೆ 13 ಪಂದ್ಯಗಳಿಂದ 478 ರನ್ಗಳಿಸಿದ್ದಾರೆ.
ಕನ್ನಡಿಗ ಕೆಎಲ್ ರಾಹುಲ್ ಕೇವಲ 5 ಪಂದ್ಯಗಳಿಂದ 461 ರನ್ಗಳಿಸಿ 7ನೇ ಸ್ಥಾನ ಪಡೆದುಕೊಂಡಿದ್ದಾರೆ. ಜೊತೆಗೆ ರೋಹಿತ್ ಶರ್ಮಾ(2) ಜೊತೆಗೆ ಹೆಚ್ಚು ಶತಕ ಸಿಡಿಸದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಟಿ-20 ಕ್ರಿಕೆಟ್ನಲ್ಲೂ ರೋಹಿತ್ ಶರ್ಮಾ ಗರಿಷ್ಠ ಸ್ಕೋರರ್