ಕರ್ನಾಟಕ

karnataka

ETV Bharat / sports

ರಾಕ್​ಸ್ಟಾರ್ ಜಡೇಜಾ ಆಲ್​ರೌಂಡರ್ ಆಟ: ಎರಡನೇ ದಿನವೂ ಪ್ರಾಬಲ್ಯ ಮೆರೆದ ಭಾರತ - ಶ್ರೀಲಂಕಾ ವಿರುದ್ಧ ಜಡೇಜಾ ದಾಖಲೆ

ಶುಕ್ರವಾರ ಆರಂಭದ ದಿನ 6 ವಿಕೆಟ್ ಕಳೆದುಕೊಂಡು 357 ರನ್​ಗಳಿಸಿದ್ದ ರೋಹಿತ್ ಪಡೆ, 2ನೇ ದಿನ 574 ರನ್​ಗಳಿಸಿ ಡಿಕ್ಲೇರ್​ ಘೋಷಿಸಿತು. ನಿನ್ನೆ ಅಜೇಯ 45 ರನ್​ಗಳಸಿದ್ದ ಆಲ್​ರೌಂಡರ್ ರವೀಂದ್ರ ಜಡೇಜಾ ಇಂದು 228 ಎಸೆಗಳಲ್ಲಿ 17 ಬೌಂಡರಿ ಮತ್ತು 3 ಸಿಕ್ಸರ್​ಗಳ ನೆರವಿನಿಂದ ಅಜೇಯ 175 ರನ್​ಗಳಿಸಿದರು.

Sri Lanka -India test
ಭಾರತ ಶ್ರೀಲಂಕಾ ಟೆಸ್ಟ್​

By

Published : Mar 5, 2022, 5:55 PM IST

ಮೊಹಾಲಿ: ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್​ನಲ್ಲಿ ರವೀಂದ್ರ ಜಡೇಜಾ ಶತಕದ ನೆರವಿನಿಂದ ಟೀಮ್ ಇಂಡಿಯಾ ಬೃಹತ್​ ಮೊತ್ತ ದಾಖಲಿಸಿದ್ದಲ್ಲದೆ, ಮೊದಲ ಇನ್ನಿಂಗ್ಸ್​ನಲ್ಲಿ ಲಂಕಾದ 4 ವಿಕೆಟ್​ ಉಡಾಯಿಸಿ ಎರಡನೇ ದಿನವೂ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ.

ಶುಕ್ರವಾರ ಆರಂಭದ ದಿನ 6 ವಿಕೆಟ್ ಕಳೆದುಕೊಂಡು 357 ರನ್​ಗಳಿಸಿದ್ದ ರೋಹಿತ್ ಪಡೆ, 2ನೇ ದಿನ 574 ರನ್​ಗಳಿಸಿ ಡಿಕ್ಲೇರ್​ ಘೋಷಿಸಿತು. ನಿನ್ನೆ ಅಜೇಯ 45 ರನ್​ಗಳಸಿದ್ದ ಆಲ್​ರೌಂಡರ್ ರವೀಂದ್ರ ಜಡೇಜಾ ಇಂದು 228 ಎಸೆಗಳಲ್ಲಿ 17 ಬೌಂಡರಿ ಮತ್ತು 3 ಸಿಕ್ಸರ್​ಗಳ ನೆರವಿನಿಂದ ಅಜೇಯ 175 ರನ್​ಗಳಿಸಿದರು. ಇವರಿಗೆ ಸಾಥ್​ ನೀಡಿದ ಅಶ್ವಿನ್​ 61 ರನ್​ಗಳಿಸಿದರು.

ಶುಕ್ರವಾರ ಮಯಾಂಕ್ ಅಗರ್ವಾಲ್ 33, ರೋಹಿತ್ ಶರ್ಮಾ 29, ಹನುಮ ವಿಹಾರಿ 58, ವಿರಾಟ್ ಕೊಹ್ಲಿ 45, ರಿಷಭ್ ಪಂತ್ 96, ಶ್ರೇಯಸ್ ಅಯ್ಯರ್​ 27 ರನ್​ಗಳಿಸಿದ್ದರು.

ಲಂಕಾಗೆ ಆರಂಭಿಕ ಆಘಾತ:

ಭಾರತದ 574 ರನ್​ಗಳ ಬೃಹತ್​ ಮೊತ್ತವನ್ನು ಹಿಂಬಾಲಿಸುತ್ತಿರುವ ಶ್ರೀಲಂಕಾ ತಂಡ ಆರಂಭಿಕ ಆಘಾತ ಅನುಭವಿಸಿದೆ. ತಂಡದ ಬ್ಯಾಟಿಂಗ್ ಬಲವಾಗಿದ್ದ ನಾಯಕ ದಿಮುತ್ ಕರುಣರತ್ನೆ (28)ಯನ್ನು ಜಡೇಜಾ ಎಲ್​ಬಿ ಬಲೆಗೆ ಬೀಳಿಸುವ ಮೂಲಕ ಪ್ರವಾಸಿ ತಂಡಕ್ಕೆ ಆಘಾತ ನೀಡಿದ್ದಾರೆ. ಅನುಭವಿ ಅಶ್ವಿನ್​ 17 ರನ್​ಗಳಿಸಿದ್ದ ತಿರಿಮನ್ನೆ ಮತ್ತು 1 ರನ್​ಗಳಿಸಿದ್ದ ಧನಂಜಯ ಡಿಸಿಲ್ವಾ ವಿಕೆಟ್ ಪಡೆದರೆ, ಮ್ಯಾಥ್ಯೂಸ್​ರನ್ನು(22) ಬುಮ್ರಾ ಪೆವಿಲಿಯನ್​ಗಟ್ಟಿದ್ದಾರೆ.

2ನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 4 ವಿಕೆಟ್ ಕಳೆದುಕೊಂಡು 108ರನ್​ಗಳಿಸಿದೆ. ಪಾತುಮ್ ನಿಸ್ಸಾಂಕ 17, ಚರಿತ್ ಅಸಲಂಕಾ 1 ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ.

ಜಡೇಜಾ ದಾಖಲೆ:

ಜಡೇಜಾ ಶನಿವಾರ ಈ ಶತಕದ ಮೂಲಕ ಕಪಿಲ್ ದೇವ್​ ಅವರ ಹೆಸರಿನಲ್ಲಿದ್ದ 35 ವರ್ಷಗಳ ಸುದೀರ್ಘ ದಾಖಲೆಯನ್ನು ಮುರಿದರು. ಕಪಿಲ್​1986ರಲ್ಲಿ ಶ್ರೀಲಂಕಾ ವಿರುದ್ಧವೇ ಕಾನ್ಪುರದಲ್ಲಿ ನಡೆದಿದ್ದ ಟೆಸ್ಟ್​ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು 163 ರನ್​ಗಳಿಸಿದರು.

ಜಡೇಜಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 150ಕ್ಕೂ ಹೆಚ್ಚು ರನ್​ಗಳಿಸಿದ ಭಾರತದ 3ನೇ ಬ್ಯಾಟರ್ ಎನಿಸಿಕೊಂಡರು. ಜಡೇಜಾ, ಕಪಿಲ್ ದೇವ್​ ಅಲ್ಲದೆ, ಭಾರತದ ಯುವ ವಿಕೆಟ್ ಕೀಪರ್ ರಿಷಭ್ ಪಂತ್ 7ನೇ ಕ್ರಮಾಂಕದಲ್ಲಿ 150ರ ಗಡಿ ದಾಟಿದ್ದಾರೆ. ಪಂತ್ 2019 ಸಿಡ್ನಿಯಲ್ಲಿ ಅಜೇಯ 159 ರನ್​ಗಳಿಸಿದ್ದರು.

ಇದನ್ನೂ ಓದಿ:ಮಹಿಳಾ ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಕ್ಕೆ 12 ರನ್​ಗಳ ರೋಚಕ ಜಯ

ABOUT THE AUTHOR

...view details