ಕರ್ನಾಟಕ

karnataka

By

Published : Sep 24, 2021, 12:03 AM IST

ETV Bharat / sports

​​ಸಿಎಸ್​ಕೆ ವಿರುದ್ಧ ಗೆಲುವಿನ ಹಳಿಗೆ ಮರಳುವ ಉತ್ಸಾಹದಲ್ಲಿ ಆರ್​ಸಿಬಿ

ಚೆನ್ನೈ ಸೂಪರ್​ ಕಿಂಗ್ಸ್ ಮತ್ತು ಆರ್​ಸಿಬಿಯ ಹಿಂದಿನ ಮುಖಾಮುಖಿಯಲ್ಲಿ ಜಡೇಜಾ ಆರ್ಭಟಕ್ಕೆ ಸಿಲುಕಿದ ಬೆಂಗಳೂರು 69 ರನ್​ಗಳ ಹೀನಾಯ ಸೋಲು ಕಂಡಿತ್ತು. ಚೆನ್ನೈ ಈಗಾಗಲೇ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಪ್ಲೇ ಆಫ್​ ತಲುಪಲು ಕೊನೆಯ ಮೆಟ್ಟಿಲಲ್ಲಿ ಬಂದು ನಿಂತಿದೆ. ಇದರ ಜೊತೆಗೆ ಕಳೆದ ಪಂದ್ಯದಲ್ಲಿ ಮುಂಬೈನಂತಹ ಬಲಿಷ್ಠ ತಂಡಕ್ಕೆ 20 ರನ್​ಗಳ ಸೋಲುಣಿಸಿರುವ ಧೋನಿ ಪಡೆ ಆರ್​ಸಿಬಿಗೆ ಸುಲಭದ ತುತ್ತಾಗಲಿದೆ ಎನ್ನುವುದನ್ನು ಕನಸಿನ ಮಾತು.

Royal challengers Bangalore vschennai Super kings
ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್

ಶಾರ್ಜಾ: ಐಪಿಎಲ್​ನ ಮೊದಲಾರ್ಧದಲ್ಲಿ ಅಮೋಘ ಪ್ರದರ್ಶನ ತೋರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ದ್ವಿತೀಯಾರ್ಧದ ತನ್ನ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಇದೀಗ ಬದ್ಧ ಎದುರಾಳಿ ಸಿಎಸ್​ಕೆ ವಿರುದ್ಧ ಕಣಕ್ಕಿಳಿಯುತ್ತಿದ್ದು, ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದೆ.

ಚೆನ್ನೈ ಸೂಪರ್​ ಕಿಂಗ್ಸ್ ಮತ್ತು ಆರ್​ಸಿಬಿಯ ಹಿಂದಿನ ಮುಖಾಮುಖಿಯಲ್ಲಿ ಜಡೇಜಾ ಆರ್ಭಟಕ್ಕೆ ಸಿಲುಕಿದ ಬೆಂಗಳೂರು 69 ರನ್​ಗಳ ಹೀನಾಯ ಸೋಲು ಕಂಡಿತ್ತು. ಚೆನ್ನೈ ಈಗಾಗಲೇ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಪ್ಲೇ ಆಫ್​ ತಲುಪಲು ಕೊನೆಯ ಮೆಟ್ಟಿಲಲ್ಲಿ ಬಂದು ನಿಂತಿದೆ. ಇದರ ಜೊತೆಗೆ ಕಳೆದ ಪಂದ್ಯದಲ್ಲಿ ಮುಂಬೈನಂತಹ ಬಲಿಷ್ಠ ತಂಡಕ್ಕೆ 20 ರನ್​ಗಳ ಸೋಲುಣಿಸಿರುವ ಧೋನಿ ಪಡೆ ಆರ್​ಸಿಬಿಗೆ ಸುಲಭದ ತುತ್ತಾಗಲಿದೆ ಎನ್ನುವುದನ್ನು ಕನಸಿನ ಮಾತು.

ಆರ್​ಸಿಬಿಗೆ ಈ ಪಂದ್ಯವನ್ನು ಗೆಲ್ಲಬೇಕಾದರೆ ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ಸಿಎಸ್​ಕೆ ವಿರುದ್ಧ ತಮ್ಮ ಬ್ಯಾಟಿಂಗ್ ಪ್ರದರ್ಶನವನ್ನು ಉತ್ತಮಗೊಳಿಸಿಕೊಳ್ಳಬೇಕಾಗಿದೆ. ಅದರಲ್ಲೂ ಆರಂಭಿಕರಾದ ದೇವದತ್​ ಪಡಿಕ್ಕಲ್​(233) ಮತ್ತು ವಿರಾಟ್​ ಕೊಹ್ಲಿ(203) ಉತ್ತಮ ಆರಂಭ ಒದಗಿಸಿಕೊಡಬೇಕಾಗಿದೆ.

ಇವರಿಬ್ಬರ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿರುವ ಗ್ಲೇನ್​ ಮ್ಯಾಕ್ಸ್​ವೆಲ್(233), ಎಬಿಡಿ ವಿಲಿಯರ್ಸ್(207) ಕೂಡ ಸಿಎಸ್​ಕೆ ದಾಳಿಯನ್ನು ಸಮರ್ಥವಾಗಿ ಎದುರಿಸಬೇಕಾಗಿದೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ಹರ್ಷಲ್​ ಪಟೇಲ್​ ಮತ್ತು ಸಿರಾಜ್​ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆದರೆ ಇವರಿಗೆ ವಿದೇಶಿ ಬೌಲರ್​ಗಳಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ. ಕೈಲ್ ಜೆಮೀಸನ್​ ತಾವೂ ಪಡೆದಿರುವ ಮೊತ್ತಕ್ಕೆ ಸೂಕ್ತ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಹೊಸದಾಗಿ ತಂಡ ಸೇರಿರುವ ವನಿಂದು ಹಸರಂಗ ಅನುಭವಿ ಚಹಾಲ್ ಕೆಕೆಆರ್​ ವಿರುದ್ಧ 10ರ ಎಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟಿದ್ದಾರೆ. ಆದರ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಲಯಕ್ಕೆ ಮರಳುವುದು ತಂಡಕ್ಕೆ ಅನಿವಾರ್ಯವಾಗಿದೆ.

ಇತ್ತ ಚೆನ್ನೈ ಸೂಪರ್​ ಕಿಂಗ್ಸ್​ ಆಡಿರುವ 8 ಪಂದ್ಯಗಳಲ್ಲಿ 6 ಗೆಲುವು ಮತ್ತು 2 ಸೋಲುಗಳೊಂದಿಗೆ 2ನೇ ಸ್ಥಾನದಲ್ಲಿದೆ. ಆಡಿರುವ ಎಲ್ಲಾ ಪಂದ್ಯಗಳಲ್ಲೂ ಅತ್ಯುತ್ತಮ ಪ್ರದರ್ಶನವನ್ನೇ ತೋರಿದೆ. ಸೋತಿರುವ 2 ಪಂದ್ಯಗಳಲ್ಲೂ 188 ಮತ್ತು 216 ರನ್​ಗಳಿಸಿರುವುದು ತಂಡದ ಬಲವನ್ನು ಸೂಚಿಸುತ್ತದೆ. ಹಾಗಾಗಿ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಮುಂಬೈ ವಿರುದ್ಧ ಸಾಧಿಸಿರುವ ಗೆಲುವಿನ ವಿಶ್ವಾಸದಲ್ಲಿ ಮುಂದುವರಿಯುವ ಆಲೋಚನೆಯಲ್ಲಿದೆ.

ಧೋನಿ ನಾಯಕತ್ವ, ಬ್ಯಾಟರ್ಸ್ ಮತ್ತು ಬೌಲರ್​ಗಳ ಸಂಯೋಜನೆ ತಂಡದ ಬಲವಾಗಿದೆ. ಇನ್ನು ಕಳೆದ ಪಂದ್ಯದಲ್ಲಿ ಕ್ವಾರಂಟೈನ್​ನಲ್ಲಿ ಸ್ಯಾಮ್​ ಕರ್ರನ್​ ಆರ್​ಸಿಬಿ ವಿರುದ್ಧ ಕಣಕ್ಕಿಳಿಯಲಿದ್ದು, ಇವರಿಗೆ ಆಸೀಸ್​ ವೇಗಿ ಜೋಶ್ ಹೆಜಲ್​ವುಡ್​ ಜಾಗ ಬಿಡಬೇಕಾಗಿದೆ.

ಮುಖಾಮುಖಿ: ಎರಡು ತಂಡಗಳು ಐಪಿಎಲ್​ನಲ್ಲಿ 27 ಬಾರಿ ಮುಖಾಮುಖಿಯಾಗಿದ್ದು ಚೆನ್ನೈ 18 ಬಾರಿ ಮತ್ತು ಬೆಂಗಳೂರು 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಸಂಭಾವ್ಯ ಆಟಗಾರರು

ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ (ನಾಯಕ),ಫಾಫ್ ಡು ಪ್ಲೆಸಿಸ್, ರುತುರಾಜ್ ಗಾಯಕ್ವಾಡ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್ ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್,

ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ಗ್ಲೇನ್ ಮ್ಯಾಕ್ಸ್ ವೆಲ್, ಎಬಿ ಡಿ ವಿಲಿಯರ್ಸ್, ಕೈಲ್ ಜೇಮೀಸನ್, ವನಿಂದು ಹಸರಂಗ, ಕೆಎಸ್ ಭರತ್(ವಿಕೀ), ಮೊಹಮ್ಮದ್ ಅಜರುದ್ದೀನ್/ಸಚಿನ್ ಬೇಬಿಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಹಲ್

ABOUT THE AUTHOR

...view details