ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯಾ ವನಿತೆಯರಿಗೆ ವಿಶ್ವಕಪ್ ​ಗೆಲ್ಲಿಸಿದ ಖ್ಯಾತಿಯ ಬೆನ್ ಸ್ವಾಯರ್ ಈಗ ಆರ್​ಸಿಬಿ ಮುಖ್ಯ ಕೋಚ್

ಆಸ್ಟ್ರೇಲಿಯಾ ವನಿತೆಯರಿಗೆ ಸಹಾಯಕ ಕೋಚ್​ ಆಗಿದ್ದ ಸ್ವಾಯರ್​ - ಬಿಗ್​ ಬ್ಯಾಷ್​ ಲೀಗ್​ನ ಸಿಡ್ನಿ ಸಿಕ್ಸರ್ಸ್‌ನ ಮುಖ್ಯ ಕೋಚ್ - ಆರ್​ಸಿಬಿಗೆ ಮೆಂಟರ್​ ಆಗಿ ಸಾನಿಯಾ ಆಯ್ಕೆ

Ben Sawyer
ಬೆನ್ ಸ್ವಾಯರ್

By

Published : Feb 15, 2023, 9:24 PM IST

ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್‌ಗೆ (ಡಬ್ಲ್ಯುಪಿಎಲ್) ಮೊದಲು ನ್ಯೂಜಿಲ್ಯಾಂಡ್​ ಮಹಿಳಾ ತಂಡದ ಪ್ರಸ್ತುತ ಕೋಚ್ ಆಸ್ಟ್ರೇಲಿಯಾದ ಬೆನ್ ಸ್ವಾಯರ್​ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಬೆನ್ ಸ್ವಾಯರ್ ಅವರು ದಿ ಹಂಡ್ರೆಡ್‌ನಲ್ಲಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್‌ನ ಕೋಚ್​ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆಸ್ಟ್ರೇಲಿಯಾ ಮಹಿಳೆಯರ ಸಹಾಯಕ ತರಬೇತುದಾರರಾಗಿರುವುದರ ಜೊತೆಗೆ ಮಹಿಳಾ ಬಿಗ್ ಬ್ಯಾಷ್ ಲೀಗ್ (WBBL) ನಲ್ಲಿ ಸಿಡ್ನಿ ಸಿಕ್ಸರ್ಸ್‌ನ ಮುಖ್ಯ ಕೋಚ್​ ಆಗಿ ಸೇವೆ ಸಲ್ಲಿಸಿದ್ದರು. ಆರ್‌ಸಿಬಿಯ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ಅವರು ತಂಡದ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಈ ಬಗ್ಗೆ ಪ್ರಕಟಿಸಿದ್ದಾರೆ. ಸ್ವಾಯರ್ ಆಸ್ಟ್ರೇಲಿಯಾ ಮಹಿಳೆಯರ ಸಹಾಯಕ ಕೋಚ್​ ಆಗಿ ಮೂರು ವಿಶ್ವಕಪ್​ ಗೆಲ್ಲಿಸಿದ್ದಾರೆ. ಮಹಿಳೆಯರ ಬಿಗ್​ಬ್ಯಾಷ್​ ಲೀಗ್​ನಲ್ಲಿ ಸಿಡ್ನಿ ಸಿಕ್ಸರ್ಸ್‌ ಒಮ್ಮೆ ಪ್ರಶಸ್ತಿ ಗೆದ್ದುಕೊಂಡಿದೆ.

ಹರಾಜಿಗೂ ಮುನ್ನ ತಂಡದ ಕೋಚ್​ ಮತ್ತಿತರ ಸಿಬ್ಬಂದಿಗಳನ್ನು ಆರ್​ಸಿಬಿ ಘೋಷಿಸಿರಲಿಲ್ಲ. ಈಗ ಟ್ವಿಟರ್​ ಹ್ಯಾಡಲ್​ನಲ್ಲಿ ಎಲ್ಲ ಸದಸ್ಯರ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಮಲೋರನ್ ರಂಗರಾಜನ್ ಆರ್​ಸಿಬಿಯ ಸಹಾಯಕ ಕೋಚ್ ಮತ್ತು ಸ್ಕೌಟಿಂಗ್ ಮುಖ್ಯಸ್ಥರಾಗಿರಲಿದ್ದಾರೆ. ವಿಆರ್ ವನಿತಾ ಸ್ಕೌಟ್ ಮತ್ತು ಫೀಲ್ಡಿಂಗ್ ಕೋಚ್ ಮತ್ತು ಆರ್ ಎಕ್ಸ್ ಮುರಳಿ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಾರೆ.

ಟೂರ್ನಿಯ ತಂಡದ ಮ್ಯಾನೇಜರ್ ಡಾ ಹರಿಣಿ ಆಗಿದ್ದು, ನವನಿತಾ ಗೌತಮ್ ಮುಖ್ಯ ಅಥ್ಲೆಟಿಕ್ ಥೆರಪಿಸ್ಟ್, ಹುಝೆಫಾ ತಾಲಿಬ್ ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್, ಸಬ್ಯಸಾಚಿ ಸಾಹೂ ಚೀಫ್ ಫಿಸಿಯೊ ಮತ್ತು ಸೌಮ್ಯದೀಪ್ ಪೇನ್ ಕಾರ್ಯನಿರ್ವಹಣೆಯ ಮುಖ್ಯಸ್ಥರಾಗಿರಲಿದ್ದಾರೆ ಎಂದು ಆರ್​ಸಿಬಿ ತಿಳಿಸಿದೆ. ಆರ್​ಸಿಬಿಯ ಮೆಂಟರ್ ಆಗಿ ಟೆನಿಸ್​ ತಾರೆ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಅವರನ್ನು ನೇಮಿಸಿರುವುದಾಗಿ ಇದಕ್ಕೂ ಮುನ್ನ ಘೋಷಿಸಿತ್ತು.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು(ಆರ್​ಸಿಬಿ): ಸ್ಮೃತಿ ಮಂಧಾನ, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ರಿಚಾ ಘೋಷ್, ಎರಿನ್ ಬರ್ನ್ಸ್, ದಿಶಾ ಕಸತ್, ಇಂದ್ರಾಣಿ ರಾಯ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಭನಾ, ಹೀದರ್ ನೈಟ್, ಡೆನ್ ವ್ಯಾನ್ ನಿಕೆರ್ಕ್, ಪ್ರೀತಿ ಕೆ ಬೊಹ್ಸೆಮ್, ಕೋಮಲ್ ಜಂಜಾದ್, ಮೇಗನ್ ಶುಟ್, ಸಹನಾ ಪವಾರ್​ ಸೇರಿ 18 ಹೆಸರಾಂತ ಆಟಗಾರ್ತಿಯರಿದ್ದಾರೆ.

ನಿನ್ನೆ ಮಹಿಳಾ ಐಪಿಎಲ್​ನ ವೇಳಾ ಪಟ್ಟಿ ಬಿಡುಗಡೆಯಾಗಿದೆ. ಮುಂದಿನ ತಿಂಗಳು (ಮಾರ್ಚ್​) 4 ರಿಂದ 26ರ ವರೆಗೆ ಪಂದ್ಯಗಳು ನಡೆಯಲಿದೆ. ಎಲ್ಲಾ ಪಂದ್ಯಗಳು ಮಹಾರಾಷ್ಟ್ರದ ಡಿವೈ ಪಾಟೀಲ್​ ಮತ್ತು ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ. 4 ರಂದು ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ. 5ರಂದು ಆರ್​ಸಿನಿಗೆ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಎದುರಾಗಲಿದೆ. ಪ್ರತೀ ತಂಡ ಎರಡು ಬಾರಿ ಮುಖಾಮುಖಿಯಾಗಲಿದೆ. 26 ರಂದು ಬ್ರಬೋರ್ನ್ ಕ್ರೀಡಾಂಗಣದಲ್ಲಿ ಫೈನಲ್​ ಫೈಟ್​ ನಡೆಯಲಿದೆ.

ಇದನ್ನೂ ಓದಿ:ಮಹಿಳಾ ಪ್ರೀಮಿಯರ್ ಲೀಗ್ 2023: ಆರ್​ಸಿಬಿ ಮೆಂಟರ್​ ಆಗಿ ಮೂಗುತಿ ಸುಂದರಿ ಸಾನಿಯಾ ಆಯ್ಕೆ

ABOUT THE AUTHOR

...view details