ಕರ್ನಾಟಕ

karnataka

ETV Bharat / sports

ಬ್ಲ್ಯಾಕ್ ಲೈವ್ ಮ್ಯಾಟರ್ ವಿವಾದ​: ಅಭಿಮಾನಿಗಳು, ಸಹ ಆಟಗಾರರಿಗೆ ಕ್ಷಮೆಯಾಚಿಸಿದ ಡಿಕಾಕ್​ - ಐಸಿಸಿ ಟಿ20 ವಿಶ್ವಕಪ್​

ನಾನು ಜನಾಂಗೀಯವಾದಿ ಅಲ್ಲ. ನನ್ನ ಹೃದಯದಲ್ಲಿ, ನನಗೆ ಅದು ತಿಳಿದಿದೆ. ಮತ್ತು ನನ್ನ ಬಗ್ಗೆ ತಿಳಿದಿರುವವರಿಗೂ ಅದು ಗೊತ್ತಿದೆ ಎಂದು ನಾನು ಭಾವಿಸುತ್ತೇನೆ. ಆದರೆ, ನನ್ನಿಂದ ನೋವಾಗಿದ್ದವರಿಗೆ ಕ್ಷಮಿಸಿ ಎಂದು ವಿವರಿಸಲು ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ" ಎಂದು ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ತಮ್ಮ ಸಾಮಾಜಿಕ ಖಾತೆಯಲ್ಲಿ ಸುದೀರ್ಘ ಪೋಸ್ಟ್​ ಮಾಡಿದ್ದಾರೆ

ಕ್ವಿಂಟನ್ ಡಿ ಕಾಕ್​ ಕ್ಷಮೆಯಾಚನೆ
ಕ್ವಿಂಟನ್ ಡಿ ಕಾಕ್​ ಕ್ಷಮೆಯಾಚನೆ

By

Published : Oct 28, 2021, 3:28 PM IST

ಜೋಹನ್ಸ್​ಬರ್ಗ್​: ದಕ್ಷಿಣ ಆಫ್ರಿಕಾದ ವಿಕೆಟ್​ ಕೀಪರ್ ಬ್ಯಾಟರ್​ ಕ್ವಿಂಟನ್​ ಡಿಕಾಕ್ ವೆಸ್ಟ್​ ಇಂಡೀಸ್​ ವಿರುದ್ಧದ ಪಂದ್ಯಕ್ಕೂ ಮುನ್ನ ಏಕೆ ಮಂಡಿಯೂರಿ ಕುಳಿತು ಬ್ಲ್ಯಾಕ್​ ಲೈವ್ ಮ್ಯಾಟರ್​ಗೆ ಬೆಂಬಲ ಸೂಚಿಸಲಿಲ್ಲ ಎನ್ನುವುದನ್ನು ವಿವರಿಸಿದ್ದು, ಆ ಪಂದ್ಯವನ್ನಾಡದಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ.

ಕ್ಷಮೆ ಕೇಳುವ ಮೊದಲು ನನ್ನ ಮಾತನ್ನೊಮ್ಮೆ ಕೇಳಿ

"ನನ್ನ ಸಹ ಆಟಗಾರರಿಗೆ ಮತ್ತು ಅಭಿಮಾನಿಗಳಿಗೆ ಕ್ಷಮೆ ಹೇಳುವ ಮೂಲಕ ನನ್ನ ವಿವರಣೆ ಪ್ರಾರಂಭಿಸಲು ನಾನು ಬಯಸುತ್ತೇನೆ. ನಾನು ಇದನ್ನು ಎಂದಿಗೂ ಸಮಸ್ಯೆಯನ್ನಾಗಿ ಮಾಡಲು ಬಯಸಲಿಲ್ಲ. ವರ್ಣಭೇದ ನೀತಿಯ ವಿರುದ್ಧ ನಿಲ್ಲುವ ಮಹತ್ವವನ್ನು ಮತ್ತು ಆಟಗಾರರಾಗಿ ನಮ್ಮ ಜವಾಬ್ದಾರಿಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಾವು ಮೊಣಕಾಲು ಊರುವುದರಿಂದ ವರ್ಣಬೇಧ ನೀತಿ ವಿರುದ್ಧ ಜನರಿಗೆ ಅರಿವು ಮೂಡಲಿ ನೆರವಾಗುತ್ತದೆ ಮತ್ತು ಇತರರ ಜೀವನವನ್ನು ಉತ್ತಮಗೊಳ್ಳುತ್ತದೆ ಎನ್ನುವುದಾದರೆ, ಅದನ್ನು ಮಾಡಲು ನನಗೆ ಹೆಚ್ಚು ಸಂತೋಷವಾಗುತ್ತದೆ" ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ಡಿ ಕಾಕ್ ಹೇಳಿದ್ದಾರೆ.

" ನಾನು ವೆಸ್ಟ್ ಇಂಡೀಸ್ ವಿರುದ್ಧ ಆಡದಿರುವ ನಿರ್ಧಾರ ತೆಗೆದುಕೊಂಡಿದ್ದು, ಯಾರನ್ನೂ ಅಗೌರವಗೊಳಿಸುವ ಉದ್ದೇಶದಿಂದಲ್ಲ. ಬಹುಶಃ ಕೆಲವು ಜನರಿಗೆ ಆಗನ್ನಿಸಿರಬಹುದು. ಆದರೆ, ನನ್ನ ನಿರ್ಧಾರ ಯಾರಿಗಾದರೂ ಗೊಂದಲ, ನೋವು ಮತ್ತು ಕೋಪಗೊಳ್ಳುವಂತೆ ಮಾಡಿದ್ದರೆ, ಅದಕ್ಕೆ ನಾನು ತೀವ್ರವಾಗಿ ವಿಷಾದಿಸುತ್ತೇನೆ " ಎಂದು ಡಿಕಾಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಲ್ಲ ಜನರ ಹಕ್ಕುಗಳು ಮತ್ತು ಸಮಾನತೆ ಒಬ್ಬ ವ್ಯಕ್ತಿಗಿಂತ ಮುಖ್ಯ

ನಾನು ಮಿಶ್ರ ವರ್ಣದ( ಕಪ್ಪು-ಬಿಳಿ) ಕುಟುಂಬದಿಂದ ಬಂದಿದ್ದೇನೆ. ನನ್ನ ಮಲತಾಯಿ ಮತ್ತು ಮಲ-ಸಹೋದರಿಯರು ಕಪ್ಪು ಜನಾಂಗಕ್ಕೆ ಸೇರಿದವರು. ಬ್ಲ್ಯಾಕ್​ ಲೈವ್​ ಮ್ಯಾಟರ್​ ಅಂತಾರಾಷ್ಟ್ರೀಯ ಆಂದೋಲವಾಗಿದೆ, ಆದರೆ ನನ್ನ ಪ್ರಕಾರ ಇದು ನಾನು ಹುಟ್ಟಿದಾಗಿನಿಂದ ಇದೆ.

ಎಲ್ಲ ಜನರ ಹಕ್ಕುಗಳು ಮತ್ತು ಸಮಾನತೆ ಒಬ್ಬ ವ್ಯಕ್ತಿಗಿಂತ ಮುಖ್ಯವಾಗುತ್ತದೆ. ನಮಗೆಲ್ಲರಿಗೂ ಹಕ್ಕುಗಳಿವೆ. ಆದರೆ, ನನಗೆ ಅವರು ಮಂಡಿಯೂರಲು ಆದೇಶ ಮಾಡಿದ ರೀತಿ ನನಗೆ ನನ್ನ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದೆನಿಸಿತು ಎಂದು ವಿಂಡೀಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಏಕೆ ಮಂಡಿಯೂರಲು ನಿರಾಕರಿಸಿದರೆಂದು ತಮ್ಮ ಸುದೀರ್ಘ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ನಾನು ಜನಾಂಗೀಯವಾದಿ ಅಲ್ಲ

" ನಾನು ನನ್ನ ಕುಟುಂಬ ಮತ್ತು ನನ್ನ ದೇಶಕ್ಕಾಗಿ ಆಡುವ ಹೆಮ್ಮೆಯ ಬಗ್ಗೆ ಯೋಚಿಸಿದೆ. ನಾನು ಎಲ್ಲ ವರ್ಗದ ಜನರ ಜೊತೆ ಬದುಕುತ್ತಿರುವಾಗ ಮತ್ತು ಕಲಿಯುವಾಗ ಮತ್ತು ಪ್ರೀತಿಸುತ್ತಿರುವಾಗ ಅದನ್ನು ಕೇವಲ ಸನ್ನೆಯಿಂದ ಏಕೆ ಸಾಬೀತುಪಡಿಸಬೇಕು ಎಂದು ನನಗೆ ಅರ್ಥವಾಗಲಿಲ್ಲ. ಅಲ್ಲದೇ ಯಾವುದೇ ಚರ್ಚೆಯಿಲ್ಲದೇ ಪ್ರತಿ ಪಂದ್ಯಕ್ಕೂ ಮುನ್ನ ಅದನ್ನು(BLM) ಮಾಡಬೇಕೆಂದು ಹೇಳಿದರು. ಇದು ನನಗೆ ಆಂದೋಲನದ ಅರ್ಥವನ್ನು ಕಳೆದುಕೊಳ್ಳುತ್ತದೆ ಎಂದೆನಿಸಿತು. ನಾನು ಜಾತಿವಾದಿಯಾಗಿದ್ದರೆ, ನಾನು ಸುಲಭವಾಗಿ ಮಂಡಿಯೂರಿ ಸುಳ್ಳು ಹೇಳಬಹುದಿತ್ತು, ಆದರೆ ನನಗೆ ಆ ರೀತಿಯ ಉದ್ದೇಶವಿರಲಿಲ್ಲ ಎಂದು ಡಿಕಾಕ್​ ಹೇಳಿಕೊಂಡಿದ್ದಾರೆ.

" ನಾನು ಜನಾಂಗೀಯವಾದಿ ಅಲ್ಲ. ನನ್ನ ಹೃದಯದಲ್ಲಿ, ನನಗೆ ಅದು ತಿಳಿದಿದೆ. ಮತ್ತು ನನ್ನ ಬಗ್ಗೆ ತಿಳಿದಿರುವವರಿಗೂ ಅದು ಗೊತ್ತಿದೆ ಎಂದು ನಾನು ಭಾವಿಸುತ್ತೇನೆ. ಆದರೆ ನನ್ನಿಂದ ನೋವಾಗಿದ್ದವರಿಗೆ ಕ್ಷಮಿಸಿ ಎಂದು ವಿವರಿಸಲು ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ" ಎಂದು ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ತಮ್ಮ ಸಾಮಾಜಿಕ ಖಾತೆಯಲ್ಲಿ ಸುದೀರ್ಘ ಪೋಸ್ಟ್​ ಮಾಡಿದ್ದಾರೆ.

ಇದನ್ನು ಓದಿ:T-20 ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ಗೆದ್ದ ನಮೀಬಿಯಾ... ಸ್ಕಾಟ್ಲೆಂಡ್​ಗೆ ಶಾಕ್​

ABOUT THE AUTHOR

...view details