ಮಹಾರಾಷ್ಟ್ರ/ಬೆಂಗಳೂರು:ಇಂದಿನಿಂದ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಅದಕ್ಕಾಗಿ ಎಲ್ಲ ಫ್ರಾಂಚೈಸಿಗಳು ಈಗಾಗಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀಡು ಬಿಟ್ಟಿವೆ. ಈ ಸಲದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 10 ಫ್ರಾಂಚೈಸಿಗಳು ಭಾಗಿಯಾಗ್ತಿದ್ದು, ಒಟ್ಟು 227 ಪ್ಲೇಯರ್ಸ್ ಖರೀದಿ ಮಾಡಲಿದ್ದಾರೆ.
ಮೆಗಾ ಹರಾಜು ಪ್ರಕ್ರಿಯಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಕೂಡ ಭಾಗಿಯಾಗಲಿದೆ. ಆದರೆ, ತಂಡದ ಒಡತಿ ಪ್ರೀತಿ ಜಿಂಟಾ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಟ್ವೀಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿ ಅವಳಿ ಮಕ್ಕಳ ತಾಯಿಯಾಗಿರುವ ಪ್ರೀತಿ ಜಂಟಾ ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾಗಿರುವ ಕಾರಣ ಈ ಸಲದ ಹರಾಜು ಪ್ರಕ್ರಿಯೆಯಿಂದ ಹೊರ ಉಳಿಯಲು ನಿರ್ಧರಿಸಿದ್ದಾರೆ.
ಆದರೆ, ತಂಡಕ್ಕಾಗಿ ಯಾವೆಲ್ಲ ಆಟಗಾರರ ಖರೀದಿ ಮಾಡಬೇಕು ಎಂಬುದರ ಬಗ್ಗೆ ಈಗಾಗಲೇ ಮಾತುಕತೆ ನಡೆಸಿದ್ದಾಗಿ ಪ್ರೀತಿ ತಿಳಿಸಿದ್ದಾರೆ. ಜೊತೆಗೆ ತಂಡಕ್ಕಾಗಿ ಯಾವೆಲ್ಲ ಆಟಗಾರರನ್ನ ಖರೀದಿ ಮಾಡಬೇಕು ಎಂಬುದರ ಬಗ್ಗೆ ನನಗೆ ಸಲಹೆ ನೀಡಿ ಎಂದು ಬಾಲಿವುಡ್ ನಟಿ ತಿಳಿಸಿದ್ದಾರೆ. ಈ ವರ್ಷದ ಐಪಿಎಲ್ ಹರಾಜು ಪ್ರಕ್ರಿಯೆಯಿಂದ ಹೊರಗುಳಿಯಲು ನಿರ್ಧರಿಸಿದ್ದೇನೆ. ಚಿಕ್ಕ ಮಕ್ಕಳನ್ನ ಬಿಟ್ಟು ಪ್ರಯಾಣ ಮಾಡಲು ಸಾಧ್ಯವಿಲ್ಲ. ಕಳೆದೆರಡು ದಿನಗಳಿಂದ ನಮ್ಮ ತಂಡದೊಂದಿಗೆ ಹರಾಜು ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿರಿ:ಮೊಣಕೈ ಗಾಯದಿಂದ ಕಂಗೆಟ್ಟ ಕೇನ್ ವಿಲಿಯಮ್ಸನ್ : 2022ರ ಐಪಿಎಲ್ಗೆ ಅನುಮಾನ?
ಈ ಸಲದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿರುವ ಪಂಜಾಬ್ ಕಿಂಗ್ಸ್ ಬಳಿ 72 ಕೋಟಿ ರೂ. ಬಾಕಿ ಉಳಿದಿದ್ದು, 21 ಆಟಗಾರರ ಖರೀದಿ ಮಾಡಲಿದೆ. ಈ ಸಲದ ರಿಟೈನ್ ವೇಳೆ 14 ಕೋಟಿ ರೂ. ನೀಡಿ ಕನ್ನಡಿಗ ಮಯಾಂಕ್ ಅಗರವಾಲ್ ಹಾಗೂ 4 ಕೋಟಿ ರೂ. ನೀಡಿ ಹರ್ಷದೀಪ್ ಸಿಂಗ್ಗೆ ತಂಡದಲ್ಲಿ ಉಳಿಸಿಕೊಂಡಿದೆ.