ಕರ್ನಾಟಕ

karnataka

By

Published : Nov 1, 2021, 7:39 PM IST

ETV Bharat / sports

ಕ್ರೀಡೆಯಲ್ಲಿ ಸೋಲಿಲ್ಲದವರ್ಯಾರು ಇಲ್ಲ: ಕೊಹ್ಲಿ ಪಡೆಯ ಬೆನ್ನಿಗೆ ನಿಲ್ಲುವಂತೆ ಭಾರತೀಯರಿಗೆ ಪೀಟರ್ಸನ್​ ಮನವಿ

ಟಿ20 ವಿಶ್ವಕಪ್​ನಲ್ಲಿ ನೆಚ್ಚಿನ ತಂಡವಾಗಿದ್ದ ಭಾರತ ಅನಿರೀಕ್ಷಿತ ವೈಫಲ್ಯ ಅನುಭವಿಸಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 10 ವಿಕೆಟ್​ಗಳ ಸೋಲು ಕಂಡರೆ, ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 8 ವಿಕೆಟ್​ಗಳ ಸೋಲು ಕಂಡು ಸೆಮಿಫೈನಲ್ಸ್ ರೇಸ್​ನಿಂದ ಹೊರ ಬಿದ್ದಿದೆ..

Pietersen backs Indian team
ಕೆವಿನ್​ ಪೀಟರ್ಸನ್​

ನವದೆಹಲಿ :ಯುಎಇಯಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ ನೀರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿ ಟೀಕೆಗೆ ಗುರಿಯಾಗಿರುವ ಭಾರತ ತಂಡದ ಪರ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್​ ಬ್ಯಾಟಿಂಗ್ ಮಾಡಿದ್ದಾರೆ.

ಆಟಗಾರರು ರೋಬೋಟ್​ಗಳಲ್ಲ, ಅಭಿಮಾನಿಗಳು ಇಂತಹ ಸಂದರ್ಭದಲ್ಲಷ್ಟೇ ಅಲ್ಲ, ಎಲ್ಲಾ ಸಂದರ್ಭದಲ್ಲೂ ತಂಡವನ್ನು ಬೆಂಬಲಿಸಬೇಕು ಎಂದು ಅಭಿಪ್ರಾಯವ್ಯಕ್ತಪಡಿಸದ್ದಾರೆ.

"ಕ್ರೀಡೆ ಅಂದಮೇಲೆ ಒಬ್ಬರಿಗೆ ಜಯ ಮತ್ತು ಮತ್ತೊಬ್ಬರಿಗೆ ಸೋಲು ಸಾಮಾನ್ಯವಾಗಿರುತ್ತದೆ. ಅದೆಂತಹ ಆಟಗಾರನೇ ಆದರೂ ಸೋಲಿಲ್ಲದೆ ಮೈದಾನದಿಂದ ಹೊರ ಹೋಗಲು ಸಾಧ್ಯವಿಲ್ಲ. ನಿಮ್ಮ ದೇಶವನ್ನು ಪ್ರತಿನಿಧಿಸುವುದು ದೊಡ್ಡ ಗೌರವ.

ಕ್ರೀಡಾಪಟುಗಳು ರೋಬೋಟ್​ಗಳಲ್ಲ ಎನ್ನುವುದನ್ನು ನೀವು ಅರ್ಥಮಾಡಿಕೊಳ್ಳಿ ಮತ್ತು ಅವರಿಗೆ ಎಲ್ಲಾ ಸಂದರ್ಭದಲ್ಲೂ ನಿಮ್ಮ ಪ್ರೋತ್ಸಾಹ ಅಗತ್ಯವಿದೆ" ಎಂದು ಪೀಟರ್ಸನ್​ ಹಿಂದಿ ಭಾಷೆಯಲ್ಲಿ ಟ್ವೀಟ್​ ಮಾಡಿದ್ದಾರೆ.

ಇದನ್ನು ಓದಿ:T20 ವಿಶ್ವಕಪ್: 2ನೇ ಪಂದ್ಯದಲ್ಲಿ ಕಳಪೆ ಪ್ರದರ್ಶನಕ್ಕೆ ಸೆಹ್ವಾಗ್ ಬೇಸರ.. ಟೀಕಿಸಬೇಡಿ ಎಂದ ಟರ್ಬನೇಟರ್​

ಟಿ20 ವಿಶ್ವಕಪ್​ನಲ್ಲಿ ನೆಚ್ಚಿನ ತಂಡವಾಗಿದ್ದ ಭಾರತ ಅನಿರೀಕ್ಷಿತ ವೈಫಲ್ಯ ಅನುಭವಿಸಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 10 ವಿಕೆಟ್​ಗಳ ಸೋಲು ಕಂಡರೆ, ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 8 ವಿಕೆಟ್​ಗಳ ಸೋಲು ಕಂಡು ಸೆಮಿಫೈನಲ್ಸ್ ರೇಸ್​ನಿಂದ ಹೊರ ಬಿದ್ದಿದೆ. ಭಾರತ ಪ್ರಸ್ತುತ ಅಂಕಪಟ್ಟಿಯಲ್ಲಿ ಖಾತೆ ತೆರೆಯದೇ 5ನೇ ಸ್ಥಾನದಲ್ಲಿದ್ದು, ಸೆಮಿಫೈನಲ್ಸ್ ಪ್ರವೇಶಿಸಲು ಬೇರೆ ತಂಡಗಳು ಫಲಿತಾಂಶವನ್ನು ಅವಲಂಭಿಸಬೇಕಾಗಿದೆ.

ಭಾರತ ತಂಡದ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್ ಕೂಡ ಟೀಂ ಇಂಡಿಯಾ ಪರ ನಿಂತಿದ್ದು, ಭಾರತೀಯ ತಂಡವನ್ನ ಅಷ್ಟೊಂದು ಕಟುವಾಗಿ ಟೀಕಿಸಬೇಡಿ ಎಂದು ಕ್ರಿಕೆಟ್ ಪ್ರೇಮಿಗಳಲ್ಲಿ ಮನವಿ ಮಾಡಿದ್ದಾರೆ. ನಮ್ಮದು ಉತ್ತಮ ಕ್ರಿಕೆಟ್​ ತಂಡ ಎಂದು ನಾವು ತಿಳಿದಿದ್ದೇವೆ. ಇದು ಹಲವು ಬಾರಿ ಸಾಬೀತಾಗಿದೆ.

ಈ ರೀತಿಯ ಫಲಿತಾಂಶದಿಂದಾಗಿ ಆಟಗಾರರಿಗೆ ಅತೀವ ನೋವಾಗಿರುತ್ತದೆ. ಆದರೆ, ನ್ಯೂಜಿಲೆಂಡ್ ತಂಡ ಉತ್ತಮ ಆಟ ಪ್ರದರ್ಶಿಸಿದೆ. ಅವರು ಎಲ್ಲಾ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ:ಹ್ಲಿಯ ಹೇಳಿಕೆಗಳು ದುರ್ಬಲ, ಧೋನಿ-ಶಾಸ್ತ್ರಿ ಆಟಗಾರರ ನೈತಿಕ ಸ್ಥೈರ್ಯ ಹೆಚ್ಚಿಸಬೇಕು : ಕಪಿಲ್ ದೇವ್​

ABOUT THE AUTHOR

...view details