ಕರ್ನಾಟಕ

karnataka

ETV Bharat / sports

ಡೆವೊನ್ ಕಾನ್ವೇ ಶತಕದ ಬಳಿಕ ನಾಯಕ ಕೇನ್​ ವಿಲಿಯಮ್ಸನ್ ಹೀಗಾದ್ರಂತೆ! - ಲಾರ್ಡ್ಸ್

ಪದಾರ್ಪಣೆ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಲಾರ್ಡ್ಸ್ ಅಂಗಳದಲ್ಲಿ ಶತಕ ಬಾರಿಸಿರುವ ನ್ಯೂಜಿಲ್ಯಾಂಡ್​​ನ ಆರಂಭಿಕ ಆಟಗಾರ ಡೆವೊನ್ ಕಾನ್ವೇ ನಾಯಕ ಕೇನ್​ ವಿಲಿಯಮ್ಸನ್ ಜೊತೆ ಮಾತನಾಡಿರುವ ಸ್ವಾರಸ್ಯಕರ ವಿಷಯವನ್ನು ಹಂಚಿಕೊಂಡಿದ್ದಾರೆ.

now-you-know-what-its-like-bro-williamson-to-conway-after-debutants-ton-at-lords
ಡೆವೊನ್ ಕಾನ್ವೇ ಶತಕದ ಬಳಿಕ ನಾಯಕ ಕೇನ್​ ವಿಲಿಯಮ್ಸನ್ ಹೀಗಾದ್ರಂತೆ!

By

Published : Jun 3, 2021, 5:43 PM IST

ಲಂಡನ್: ನ್ಯೂಜಿಲ್ಯಾಂಡ್​​ನ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಚೊಚ್ಚಲ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಭರ್ಜರಿ ಶತಕ ಬಾರಿಸಿದ್ದಾರೆ. ನಾನು ಉತ್ತಮವಾಗಿ ಆಡಬೇಕು ಎಂದುಕೊಂಡಿದ್ದೆ ಅಷ್ಟೇ, ಶತಕ ಬಾರಿಸುತ್ತೇನೆ ಎಂಬ ಆಲೋಚನೆ ಇರಲಿಲ್ಲ ಎಂದು ಡೆವೊನ್ ಕಾನ್ವೇ ಹೇಳಿದ್ದಾರೆ.

"ಕ್ರಿಕೆಟ್ ವೆಲ್ಲಿಂಗ್ಟನ್ ಮತ್ತು ಬ್ಲ್ಯಾಕ್ ಕ್ಯಾಪ್ಸ್​ ನನಗೆ ಆಡೋದಕ್ಕೆ ಅವಕಾಶ ನೀಡಿದ್ದು, ತುಂಬಾ ಸಂತೋಷ ತಂದಿದೆ. ನಾನು ಎಂದಿಗೂ ಕೃತಜ್ಞರಾಗಿರುತ್ತೇನೆ ಎಂದಿದ್ದಾರೆ. ನಾಯಕ ಕೇನ್ ವಿಲಿಯಮ್ಸನ್ ಜೊತೆ ತಾವಾಡಿದ ಮಾತುಗಳನ್ನು ಡೆವೊನ್ ಕಾನ್ವೇ ಹಂಚಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ದಿನದ ಆಟ ಮುಗಿದ ನಂತರ ಡ್ರೆಸ್ಸಿಂಗ್‌ ರೂಮ್​ಗೆ ಹಿಂತಿರುಗಿದಾಗ ನಾಯಕ ಕೇನ್ ವಿಲಿಯಮ್ಸನ್ ಅನೇಕ ವಿಷಯಗಳನ್ನು ಹಂಚಿಕೊಂಡರಂತೆ.

"ನಾವು ಒಂದೆರಡು ದಿನಗಳ ಹಿಂದೆ ಲಾರ್ಡ್ಸ್​ಗೆ ಬಂದಾಗ ಅಲ್ಲಿರುವ ಎಲ್ಲ ಕ್ರಿಕೆಟ್​ ದಂತಕಥೆಗಳ ಫೋಟೋ ಮತ್ತು ಹೆಸರುಗಳನ್ನು ನೋಡುವ ಅವಕಾಶ ಪಡೆದುಕೊಂಡೆವು. ಕೇನ್‌ ಹೆಸರು ಸಹ ಆ ಬೋರ್ಡ್‌ನಲ್ಲಿ ಇದ್ದ ಕಾರಣ (2015 ರಲ್ಲಿ ಲಾರ್ಡ್ಸ್‌ನಲ್ಲಿ ವಿಲಿಯಮ್ಸನ್‌ ಶತಕ) ನಿಮ್ಮ ಹೆಸರನ್ನು ನೋಡಲು ಏನೆನಿಸುತ್ತದೆ ಎಂದು ಕೇಳಿದ್ದೆ. ಆ ಪ್ರಶ್ನೆಗೆ ನಾನು ಶತಕ ಬಾರಿಸಿ ಡ್ರೆಸ್ಸಿಂಗ್‌ ರೂಮ್​ಗೆ ಹಿಂತಿರುಗಿದಾಗ ಉತ್ತರಿಸಿದ ವಿಲಿಯಮ್ಸನ್, ನಿನಗೆ ಈಗ ಏನೂ ಅನಿಸುತ್ತಿದೆಯೋ ನನಗೂ ಹಾಗೇ ಅನಿಸಿತ್ತು. ಆ ಬೋರ್ಡ್​ನಲ್ಲಿ ನನ್ನ ಹೆಸರಿರುವುದು ನನಗೆ ಹೆಮ್ಮೆಯ ವಿಷಯ ಎಂದರಂತೆ.

ಲಾರ್ಡ್ಸ್‌ನಲ್ಲಿ ಚೊಚ್ಚಲ ಪಂದ್ಯದಲ್ಲಿ ಶತಕ ಗಳಿಸಿದ ಮೊದಲ ಆಟಗಾರ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಕಾನ್ವೇ ನಿನ್ನೆ ಬ್ರೇಕ್​ ಮಾಡಿದ್ದರು.

ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ ಭಾರತದ ಪುರುಷ & ಮಹಿಳಾ ಕ್ರಿಕೆಟ್ ತಂಡಗಳು

ABOUT THE AUTHOR

...view details