ನವದೆಹಲಿ: ಭಾರತದ ಬಾಕ್ಸರ್ಗಳಾದ ನಿಖಾತ್ ಜರೀನ್ ಮತ್ತು ನೀತು ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ 73ನೇ ಸ್ಟ್ರಾಂಡ್ಜಾ ಮೆಮೊರಿಯಲ್ ಬಾಕ್ಸಿಂಗ್ ಟೂರ್ನಮೆಂಟ್ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
25 ವರ್ಷದ ಜರೀನ್ ಮಾಜಿ ವಿಶ್ವಚಾಂಪಿಯನ್ ಉಕ್ರೇನ್ನ ಕೆ.ತೆಟಿಯಾನ ವಿರುದ್ಧ 4-1 ಅಂಕಗಳ ಅಂತರದಲ್ಲಿ ಜಯ ಸಾಧಿಸಿದರು. ಅವರು ಸೆಮಿಫೈನಲ್ನಲ್ಲಿ ಟೋಕಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಟರ್ಕಿಯ ಬುಸೆ ನಾಜ್ ಜಾಕಿರೋಗ್ಲು ವಿರುದ್ಧ ಜಯ ಸಾಧಿಸಿ ಫೈನಲ್ ತಲುಪಿದ್ದರು.
ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ನಿಖಾತ್ ಯುರೋಪ್ನ ಅತ್ಯಂತ ಹಳೆಯ ಅಂತಾರಾಷ್ಟ್ರೀಯ ಬಾಕ್ಸಿಂಗ್ ಟೂರ್ನಮೆಂಟ್ನಲ್ಲಿ ಗೆದ್ದ 2ನೇ ಚಿನ್ನದ ಪದಕವಾಗಿದೆ. ಅವರು 2019ರ ಆವೃತ್ತಿಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು.