ರಾಂಚಿ(ಜಾರ್ಖಂಡ್):ಆರೋಗ್ಯದಲ್ಲಿ ಏರುಪೇರಾದರೆ, ಗಾಯದ ಸಮಸ್ಯೆ ಕಂಡುಬಂದರೆ ಸಾವಿರಾರು ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಪಡೆದುಕೊಳ್ಳುವುದು ಸಾಮಾನ್ಯ. ಅದರಲ್ಲೂ ಕ್ರಿಕೆಟ್ ಆಟಗಾರರಂತೂ ವಿದೇಶಗಳಿಗೆ ತೆರಳಿ ಚಿಕಿತ್ಸೆಗೊಳಗಾಗುತ್ತಾರೆ. ಆದರೆ, ಇದಕ್ಕೆ ತದ್ವಿರುದ್ಧ ಎಂಬಂತೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಕೇವಲ 40 ರೂಪಾಯಿ ಚಿಕಿತ್ಸೆ ಪಡೆದುಕೊಳ್ತಿದ್ದಾರೆ.
ಕಳೆದೊಂದು ತಿಂಗಳಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದ ಧೋನಿ ಯಾವುದೇ ದುಬಾರಿ ವೈದ್ಯರು, ಆಸ್ಪತ್ರೆಗಳ ಬಳಿ ಹೋಗದೇ ಕೇವಲ 40 ರೂಪಾಯಿ ಔಷಧಿ ತೆಗೆದುಕೊಳ್ತಿದ್ದಾರೆ. ಅದರ ಫೋಟೋ ಇದೀಗ ವೈರಲ್ ಆಗಿದೆ. ಹಳ್ಳಿಯೊಂದರಲ್ಲಿ ಮರದ ಕೆಳಗೆ ಕುಳಿತು ರೋಗಿಗಳಿಗೆ ಚಿಕಿತ್ಸೆ ನೀಡುವ ಜನರಿಂದ ಕ್ರಿಕೆಟಿಗ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸಾಂಪ್ರದಾಯಿಕವಾಗಿ ಗಿಡಮೂಲಿಕೆಗಳ ಸಹಾಯದಿಂದ ಚಿಕಿತ್ಸೆ ನೀಡುವ ವೈದ್ಯ ಬಂಧನ್ ಸಿಂಗ್, "ಇಲ್ಲಿಗೆ ಬರುವ ಪ್ರತಿಯೊಬ್ಬರಿಗೂ 40 ರೂಪಾಯಿ ಔಷಧಿ ನೀಡಲಾಗುತ್ತದೆ" ಎಂದಿದ್ದಾರೆ.