ನವದೆಹಲಿ: ಸೋಮವಾರ ರೋಚಕತೆಯಿಂದ ಕೂಡಿದ್ದ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸೈಯದ್ ಮುಷ್ತಾಕ್ ಅಲಿ (Syed Mushtaq Ali Trophy ) ಟಿ20 ಟೂರ್ನಮೆಂಟ್ ಫೈನಲ್ ಪಂದ್ಯವನ್ನು ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (M.S.Dhoni) ವೀಕ್ಷಿಸಿದ್ದಾರೆ.
ಶೀಘ್ರದಲ್ಲೇ ಐಪಿಎಲ್ ಐಪಿಎಲ್ ಮೆಗಾ ಹರಾಜು ನಡೆಯುವುದರಿಂದ ಧೋನಿ ಯುವ ಆಟಗಾರರ ಪ್ರದರ್ಶನವನ್ನು ವೀಕ್ಷಣೆ ಮಾಡಿದ್ದಾರೆ. ಈ ಪಂದ್ಯದಲ್ಲಿ ತಮಿಳುನಾಡಿನ ಸ್ಫೋಟಕ ಬ್ಯಾಟರ್ ಶಾರುಕ್ ಖಾನ್ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ತಮ್ಮ ತಂಡ 3ನೇ ಬಾರಿ ಟ್ರೋಫಿ ಗೆಲ್ಲಲು ನೆರವಾದರು.
ಈ ಕುರಿತು ಟ್ವೀಟ್ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್," Fini 𝙎𝙚𝙚 ing off in sty7e! ಎಂದು ಟ್ವೀಟ್ ಮಾಡಿದೆ. ತಮ್ಮಂತೆಯೇ ಪಂದ್ಯವನ್ನು ಶಾರುಖ್ ಖಾನ್ ಫಿನಿಶ್ ಮಾಡುವುದನ್ನು ಧೋನಿ ನೋಡುತ್ತಿದ್ದಾರೆ ಎಂಬರ್ಥದಲ್ಲಿ ಸಿಎಸ್ಕೆ ಟ್ವೀಟ್ ಮಾಡಿದೆ.
ತಮಿಳುನಾಡು ತಂಡ 2006ರ ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿತ್ತು. ನಂತರ 2019ರಲ್ಲಿ ಫೈನಲ್ ಪ್ರವೇಶಿಸಿತ್ತಾದರೂ ಕರ್ನಾಟಕದೆದುರೇ ಸೋಲು ಕಂಡು ನಿರಾಸೆ ಅನುಭವಿಸಿತ್ತು. ಆದರೆ 2020ರಲ್ಲಿ ಮತ್ತೆ ಫೈನಲ್ ಪ್ರವೇಶಿಸಿ 2ನೇ ಬಾರಿಗೆ ಚಾಂಪಿಯನ್ ಆಗಿದೆ. ಇದೀಗ ಶಾರುಖ್ ಮನಮೋಹಕ ಬ್ಯಾಟಿಂಗ್ ನೆರವಿನಿಂದ ದಾಖಲೆಯ 3ನೇ ಬಾರಿ ಚಾಂಪಿಯನ್ ಆಗಿದೆ.
ತಮಿಳುನಾಡು ಈ ಪಂದ್ಯವನ್ನು ಗೆಲ್ಲುತ್ತಿದ್ದಂತೆ ಶಾರುಖ್ ಐಪಿಎಲ್ ಪ್ರತಿನಿಧಿಸುವ ಪಂಜಾಬ್ ಕಿಂಗ್ಸ್ ತಂಡ ಕೂಡ ಅಭಿನಂದನೆ ಸಲ್ಲಿಸಿದೆ. ಇದನ್ನು ಗಮನಿಸಿದರೆ ಪಂಜಾಬ್ ಫ್ರಾಂಚೈಸಿ ಶಾರುಖ್ರನ್ನು ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಪಂಜಾಬ್ ಹರಾಜಿಗೆ ಬಿಟ್ಟರೆ ಖಂಡಿತ ಚೆನ್ನೈ ಸೂಪರ್ ಕಿಂಗ್ಸ್ ಶಾರುಖ್ ಮೇಲೆ ಬಿಡ್ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ:ನಮ್ಮಿಬ್ಬರನ್ನು ಡೆಲ್ಲಿ ಕ್ಯಾಪಿಟಲ್ಸ್ ರೀಟೈನ್ ಮಾಡಿಕೊಳ್ಳುವ ಚಾನ್ಸ್ ಕಡಿಮೆ: ಆರ್.ಅಶ್ವಿನ್