ಕೊಲಂಬೊ: ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅಜೇಯ 69 ರನ್ಗಳಿಸಿ ಭಾರತಕ್ಕೆ 3 ವಿಕೆಟ್ಗಳ ರೋಚಕ ಜಯ ತಂದುಕೊಟ್ಟಿದ್ದ ವೇಗಿ ದೀಪಕ್ ಚಹರ್, ತಮ್ಮ ಪ್ರದರ್ಶನದ ಮೇಲೆ ಧೋನಿ ಪ್ರಭಾವ ದೊಡ್ಡ ಪ್ರಮಾಣದಲ್ಲಿದೆ ಎಂದು ಹೇಳಿದ್ದಾರೆ.
116ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ ಆಗಮಿಸಿದ ದೀಪಕ್ ಮೊದಲು ಕೃನಾಲ್ ಪಾಂಡ್ಯ ಜೊತೆಗೆ 33 ರನ್ಗಳ ಜೊತೆಯಾಟ ನಡೆಸಿ ಕುಸಿತವನ್ನು ತಡೆದರು. ನಂತರ ಉಪನಾಯಕ ಭುವನೇಶ್ವರ್ ಕುಮಾರ್ ಜೊತೆಗೂಡಿ ಮುರಿಯದ 8ನೇ ವಿಕೆಟ್ ಜೊತೆಯಾಟದಲ್ಲಿ 84 ರನ್ ಸೇರಿಸಿ 1-1ರಲ್ಲಿ ಸರಣಿ ಸಮಬಲ ಸಾಧಿಸುವ ಕನಸು ಕಾಣುತ್ತಿದ್ದ ಶ್ರೀಲಂಕಾ ಆಸೆಗೆ ತಣ್ಣೀರೆರಚಿದರು.
28 ವರ್ಷದ ಯುವ ಆಟಗಾರ, ತಮ್ಮ ಪ್ರದರ್ಶನದ ಹಿಂದೆ ಭಾರತ ತಂಡದ ಮಾಜಿ ಹಾಗೂ ಸಿಎಸ್ಕೆ ನಾಯಕ ಧೋನಿ ಪಾತ್ರ ಮಹತ್ವವಾಗಿದೆ ಎಂದು ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.