ದುಬೈ:ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಮಹಿಳಾ ತಂಡದ ಕ್ಯಾಪ್ಟನ್ ಮಿಥಾಲಿ ರಾಜ್ ಮತ್ತೊಮ್ಮೆ ಐಸಿಸಿ ಮಹಿಳಾ ಏಕದಿನ ರ್ಯಾಕಿಂಗ್ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಕ್ರಿಕೆಟ್ ಸರಣಿ ಮುಕ್ತಾಯಗೊಳ್ಳುತ್ತಿದ್ದಂತೆ ಐಸಿಸಿ ಹೊಸದಾಗಿ ಶ್ರೇಯಾಂಕ ಬಿಡುಗಡೆ ಮಾಡಿದೆ.
22 ವರ್ಷದ ಕ್ರಿಕೆಟ್ ಕೆರಿಯರ್ನಲ್ಲಿ ಮಿಥಾಲಿ ರಾಜ್ 8ನೇ ಸಲ ಏಕದಿನ ರ್ಯಾಕಿಂಗ್ನಲ್ಲಿ ಮೊದಲ ಸ್ಥಾನದ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಮಿಥಾಲಿ ಪಡೆ 2-1 ಅಂತರದಿಂದ ಸೋಲು ಕಂಡಿತ್ತು. ಆದರೆ ಮಿಥಾಲಿ ಮೂರು ಪಂದ್ಯಗಳಿಂದ 206 ರನ್ಗಳಿಕೆ ಮಾಡಿದ್ದಾರೆ. ಜೊತೆಗೆ ಫೈನಲ್ ಪಂದ್ಯದಲ್ಲಿ ಅಜೇಯ 75 ರನ್ಗಳಿಕೆ ಮಾಡಿ ತಂಡದ ಗೆಲುವಿನ ರೂವಾರಿಯಾಗಿದ್ದರು.