ಕರ್ನಾಟಕ

karnataka

ETV Bharat / sports

ಇನ್ಮುಂದೆ ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್ ಪದದ ಬದಲಿಗೆ 'ಬ್ಯಾಟರ್'​ ಬಳಸಲು MCC ಘೋಷಣೆ: ಕಾರಣವೇನು? - ಮೆರಿಲ್ಬೋನ್​ ಕ್ರಿಕೆಟ್​ ಕ್ಲಬ್

"ಲಿಂಗ-ತಟಸ್ಥ ಪದಜ್ಞಾನದ ಬಳಕೆಯು ಎಲ್ಲರನ್ನೂ ಒಳಗೊಂಡ(ಪುರುಷ ಮತ್ತು ಮಹಿಳೆ) ಆಟವಾಗಿ ಕ್ರಿಕೆಟ್ ಸ್ಥಿತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಎಂಸಿಸಿ ನಂಬುತ್ತದೆ" ಎಂದು MCC ಉಸ್ತುವಾರಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Marylebone Cricket Club
ಮೆರಿಲ್ಬೋನ್​ ಕ್ರಿಕೆಟ್​ ಕ್ಲಬ್

By

Published : Sep 22, 2021, 8:15 PM IST

ಲಂಡನ್: ಕ್ರಿಕೆಟ್ ​ಅನ್ನು ಅಂತರ್ಗತ ಆಟವಾಗಿ ಬಲಪಡಿಸುವ ಪ್ರಯತ್ನವಾಗಿ ಬ್ಯಾಟ್ಸ್​ಮನ್​ ಎಂಬ ಪದದ ಬದಲು ಇನ್ನು ಮುಂದೆ ಲಿಂಗ ತಟಸ್ಥ ಪದ 'ಬ್ಯಾಟರ್'​ ಎಂದು ತಕ್ಷಣಕ್ಕೆ ಜಾರಿಗೆ ಬರುವಂತೆ ಕ್ರಿಕೆಟ್​ ಕಾನೂನುಗಳನ್ನು ರಚಿಸುವ ಮೆರಿಲ್ಬೋನ್​ ಕ್ರಿಕೆಟ್​ ಕ್ಲಬ್ ​(MCC) ಬುಧವಾರ ಘೋಷಣೆ ಮಾಡಿದೆ.

ಕ್ಲಬ್‌ನ ವಿಶೇಷ ಕಾನೂನುಗಳ ಉಪ ಸಮಿತಿಯಲ್ಲಿ ಚರ್ಚೆ ನಡೆಸಿದ ನಂತರ ಎಂಸಿಸಿ ಸಮಿತಿ ಈ ಕಾನೂನುಗಳಿಗೆ ತಿದ್ದುಪಡಿಯನ್ನು ತಂದಿದೆ.

"ಲಿಂಗ-ತಟಸ್ಥ ಪದಜ್ಞಾನದ ಬಳಕೆಯು ಎಲ್ಲರನ್ನೂ ಒಳಗೊಂಡ (ಪುರುಷ ಮತ್ತು ಮಹಿಳೆ) ಆಟವಾಗಿ ಕ್ರಿಕೆಟ್ ಸ್ಥಿತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಎಂಸಿಸಿ ನಂಬುತ್ತದೆ" ಎಂದು MCC ಉಸ್ತುವಾರಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಶ್ವದಾದ್ಯಂತ ಮಹಿಳಾ ಕ್ರಿಕೆಟ್ ಅಭೂತಪೂರ್ವ ಬೆಳವಣಿಗೆಯನ್ನು ಸಾಧಿಸುತ್ತಿದೆ. ಹಾಗಾಗಿ ಕ್ರಿಕೆಟ್​ ಆಟವನ್ನು ಮಹಿಳೆಯರು ಮತ್ತು ಹುಡುಗಿಯರು ಆಡುವುದನ್ನು ಪ್ರೋತ್ಸಾಹಿಸಲು ಹೆಚ್ಚಿನ ಲಿಂಗ ತಟಸ್ಥ ನಿಯಮಗಳನ್ನು ಅಳವಡಿಸಿಕೊಳ್ಳಲು ಸಾಕಷ್ಟು ಕರೆಗಳು ಬಂದಿದ್ದವು. ಅದಕ್ಕಾಗಿ ಬ್ಯಾಟ್ಸ್​ಮನ್​ ಎಂಬ ಪದ ಪುರುಷ ಪ್ರಧಾನವಾಗಿ ಕಂಡುಬರುವುದರಿಂದ ಬ್ಯಾಟರ್​ ಎಂಬ ಪದವನ್ನು ಬಳಸಲು ನಿರ್ಧರಿಸಲಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಭಾರತದ ಮಾಜಿ ನಾಯಕ ಹಾಗೂ ಕನ್ನಡಿಗ ರಾಹುಲ್​ ದ್ರಾವಿಡ್​ ಕೂಡ ಲಿಂಗ ಸಮಾನತೆಗಾಗಿ ಬ್ಯಾಟ್ಸ್​ಮನ್​ ಪದದ ಬದಲಿಗೆ ಬ್ಯಾಟರ್​ ಪದವನ್ನು ಬಳಸಲು ನಾನು ಪ್ರೋತ್ಸಾಹಿಸುತ್ತೇನೆ ಎಂದಿದ್ದರು.

ಪುರುಷ ಮತ್ತು ಮಹಿಳಾ ಕ್ರಿಕೆಟ್​ನಲ್ಲಿ ಚೆಂಡನ್ನು ಎಸೆಯುವವರಿಗೆ ಬೌಲರ್​​, ಕ್ಷೇತ್ರ ರಕ್ಷಣೆ ಮಾಡುವವರಿಗೆ ಫೀಲ್ಡರ್​ ಮತ್ತು ಗೂಟ ರಕ್ಷಕರಿಗೆ ವಿಕೆಟ್​ ಕೀಪರ್​ ಎಂಬ ಸಾಮಾನ್ಯಪದ ಬಳಕೆಯಾಗುತ್ತಿದೆ. ಆದರೆ ದಾಂಡಿಗರಿಗೆ ಮಾತ್ರ ಬ್ಯಾಟ್ಸ್​ಮನ್​ ಎನ್ನಲಾಗುತ್ತಿತ್ತು. ಇದೀಗ ಆ ಪದದ ಬದಲಿಗೆ ಬ್ಯಾಟರ್​ ಎಂಬ ಪದವನ್ನು ಲಿಂಗ ತಟಸ್ಥವಾಗಿ ಬಳಸಲು ಎಂಸಿಸಿ ಕ್ರಿಕೆಟ್​ ಕಾನೂನಿನಲ್ಲಿ ಬದಲಾವಣೆ ತಂದಿದೆ.​

ಇದನ್ನೂ ಓದಿ:ವೆಸ್ಟ್​ ಇಂಡೀಸ್​ಗೆ 2 ವಿಶ್ವಕಪ್ ಗೆಲ್ಲಿಸಿಕೊಟ್ಟ ಕ್ರಿಕೆಟಿಗನ​ ಮೇಲೆ ಭ್ರಷ್ಟಾಚಾರ ಆರೋಪ

ABOUT THE AUTHOR

...view details