ಕರ್ನಾಟಕ

karnataka

ETV Bharat / sports

ಮಹಾರಾಜ ಟ್ರೋಫಿ: ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್‌ಗೆ ಜಯ - Bengaluru Blasters beat Gulbarga Mystics

ಮಹಾರಾಜ ಟ್ರೋಫಿ ಟಿ20 ಚಾಂಪಿಯನ್‌ಷಿಪ್‌ನ ಮೂರನೇ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ 54 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

Etv Bharatmaharaja-trophy-bengaluru-blasters-beat-gulbarga-mystics
Etv Bharatಮಹಾರಾಜ ಟ್ರೋಫಿ: ಗುಲ್ಬರ್ಗ ಮೈಸ್ಟಿಕ್ಸ್‌ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್‌ಗೆ ಜಯ

By

Published : Aug 8, 2022, 9:33 PM IST

ಮೈಸೂರು:ನಾಯಕ ಮಯಾಂಕ್‌ ಅಗರ್​ವಾಲ್​​ (52) ಅವರ ಅದ್ಭುತ ಬ್ಯಾಟಿಂಗ್‌ ಹಾಗೂ ರೋನಿತ್‌ ಮೋರೆ (22ಕ್ಕೆ 4 ವಿಕೆಟ್​) ಅವರ ಮಿಂಚಿನ ಬೌಲಿಂಗ್‌ ನೆರವಿನಿಂದ ಬಲಿಷ್ಠ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಮಹಾರಾಜ ಟ್ರೋಫಿ ಟಿ20 ಚಾಂಪಿಯನ್‌ಷಿಪ್‌ನ ತನ್ನ ಮೊದಲ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ 54 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರಿಕೆಟ್‌ ಅಂಗಳದಲ್ಲಿ ನಡೆಯುತ್ತಿರುವ ಟೂರ್ನಿಯ ಎರಡನೇ ದಿನದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್‌ 8 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿತು. 190 ರನ್‌ ಜಯದ ಗುರಿ ಪಡೆದ ಗುಲ್ಬರ್ಗ ಮಿಸ್ಟಿಕ್ಸ್‌ 19.1 ಓವರ್‌ಗಳಲ್ಲಿ 135 ರನ್‌ ಗಳಿಸಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ಸೋಲೊಪ್ಪಿಕೊಂಡಿದೆ.

190 ರನ್‌ಗಳ ಬೃಹತ್‌ ಮೊತ್ತ ಬೆನ್ನಟ್ಟಿದ ಗುಲ್ಬರ್ಗ ಮಿಸ್ಟಿಕ್ಸ್​​ಗೆ ಮೊದಲ ಓವರ್‌ನಲ್ಲೇ ರೋನಿತ್‌ ಮೋರೆ ಶಾಕ್​ ನೀಡಿದರು. ಮೊದಲ ಎಸೆತದಲ್ಲೇ ಕೋದಂಡ ಅಜಿತ್‌ ಶೂನ್ಯಕ್ಕೆ ಪೆವಿಲಿಯನ್‌ ಸೇರಿದರೆ, 5ನೇ ಏಸೆತದಲ್ಲಿ ನಾಯಕ ಮನೀಶ್‌ ಪಾಂಡೆ 2 ರನ್‌ ಗಳಿಸಿ ಔಟಾದರು. ತಂಡದ ಭರವಸೆಯಾಗಿದ್ದ ದೇವದತ್ತ ಪಡಿಕ್ಕಲ್‌ (18) ಕೂಡ ಹೆಚ್ಚು ಕಾಲ ಕ್ರೀಸ್​​ನಲ್ಲಿ ನಿಲ್ಲಲಿಲ್ಲ. ನಂತರ ಮನೋಜ್‌ ಭಾಂಡಗೆ 35 ರನ್​ ಬಾರಿಸಿದರೂ ತಂಡವು ಗೆಲುವಿನ ಸಮೀಪವೂ ತಲುಪಲಿಲ್ಲ.

ಬೆಂಗಳೂರು ಪರ ರೋನಿತ್‌ ಮೋರೆ 22 ರನ್​ಗೆ 4 ವಿಕೆಟ್‌ ಕಬಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ರಿಶಿ ಬೋಪಣ್ಣ (19ಕ್ಕೆ 2) ಮತ್ತು ಎಲ್‌.ಆರ್‌. ಕುಮಾರ್‌ (12ಕ್ಕೆ 2) ಉತ್ತಮ ಸಾಥ್​​ ನೀಡಿದರು.

ಮಯಾಂಕ್​ ಅಗರ್​ವಾಲ್​ ಬ್ಯಾಟಿಂಗ್​ ವೈಖರಿ

ಬೆಂಗಳೂರು ಬ್ಯಾಟಿಂಗ್​ ಅಬ್ಬರ:ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಗುಲ್ಬರ್ಗ ನಿರ್ಧಾರವನ್ನು ಬೆಂಗಳೂರು ಸಂಪೂರ್ಣ ಸದ್ಬಳಕೆ ಮಾಡಿಕೊಂಡಿತು. ನಾಯಕ ಮಯಾಂಕ್‌ ಅಗರ್​ವಾಲ್‌ ಹಾಗೂ ಎಲ್‌.ಆರ್‌. ಚೇತನ್‌ ಅಬ್ಬರದ ಆರಂಭ ಒದಗಿಸಿದರು. ಈ ಜೋಡಿ ಕೇವಲ 5 ಓವರ್‌ಗಳಲ್ಲಿ 61 ರನ್‌ ಬಾರಿಸಿತು.

ಮಯಾಂಕ್‌ 25 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 52 ರನ್‌ ಗಳಿಸಿ ಈ ಟೂರ್ನಿಯ ವೇಗದ ಅರ್ಧಶತಕ ದಾಖಲಿಸಿದರು. 11ನೇ ಓವರ್‌ ಮುಗಿಯುತ್ತಿದ್ದಂತೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಆಗ ಬೆಂಗಳೂರು ಬ್ಲಾಸ್ಟರ್ಸ್‌, 2 ವಿಕೆಟ್‌ ನಷ್ಟಕ್ಕೆ 113 ರನ್‌ ಗಳಿಸಿತ್ತು. ಬಳಿಕ ಕೆ.ವಿ ಅನೀಶ್‌ 40 ಎಸೆತಗಳಲ್ಲಿ 44 ಹಾಗೂ ಕ್ರಾಂತಿ ಕುಮಾರ್‌ 11 ಎಸೆತಗಳಿಂದ 22 ರನ್‌ ಗಳಿಸುವುದರೊಂದಿಗೆ ಬೆಂಗಳೂರು ಬ್ಲಾಸ್ಟರ್ಸ್‌ 8 ವಿಕೆಟ್‌ ನಷ್ಟಕ್ಕೆ 189 ರನ್‌ ಪೇರಿಸಿತ್ತು.

ಇದನ್ನೂ ಓದಿ:22 ಚಿನ್ನ, 16 ಬೆಳ್ಳಿ, 23 ಕಂಚು ಗೆದ್ದು ಕಾಮನ್​​ವೆಲ್ತ್ ಗೇಮ್ಸ್‌ಗೆ ಭಾರತ ಗುಡ್‌ಬೈ: ಹೀಗಿದೆ ಸಾಧಕರ ಪಟ್ಟಿ..

ABOUT THE AUTHOR

...view details