ಬ್ರಿಸ್ಟೋಲ್ :ಅತಿಥೇಯ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿಸಿ ಡ್ರಾ ಸಾಧಿಸಿದ ಭಾರತ ಮಹಿಳಾ ತಂಡವನ್ನು ವೆಂಕಟೇಶ್ ಪ್ರಸಾದ್, ವಾಸೀಮ್ ಜಾಫರ್, ಮಾಜಿ ಕೋಚ್ ರಾಮನ್ ಮತ್ತು ವಿವಿಎಸ್ ಲಕ್ಷ್ಮಣ್ ಸೇರಿದಂತೆ ಹಲವು ಹಾಲಿ-ಮಾಜಿ ಕ್ರಿಕೆಟಿಗರು ಅಭಿನಂಧನೆ ಸಲ್ಲಿಸಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ 165 ರನ್ಗಳ ಹಿನ್ನಡೆಯೊಂದಿಗೆ ಫಾಲೋ ಆನ್ಗೆ ಒಳಗಾಗಿದ್ದ ಭಾರತ ತಂಡ 2ನೇ ಇನ್ನಿಂಗ್ಸ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿ 334 ರನ್ ಕಲೆಯಾಕಿ ಪಂದ್ಯ ಡ್ರಾ ಗೊಳ್ಳುವುಕ್ಕೆ ಕಾರಣರಾದರು. 9ನೇ ವಿಕೆಟ್ ಜೊತೆಯಾಟದಲ್ಲಿ ಪದಾರ್ಪಣೆ ಬ್ಯಾಟರ್ ಸ್ನೇಹ್ ರಾಣಾ(80) ಮತ್ತು ವಿಕೆಟ್ ಕೀಪರ್ ತಾನಿಯಾ ಭಾಟಿಯಾ(44) ಅಜೇಯ 104 ರನ್ಗಳ ಜೊತೆಯಾಟ ನಡೆಸಿ ಪಂದ್ಯವನ್ನು ಉಳಿಸಿದರು. ಇವರಿಬ್ಬರಲ್ಲದೆ ದೀಪ್ತಿ ಶರ್ಮಾ 54 ರನ್ಗಳಿಸಿದರೆ, ಶೆಫಾಲಿ ವರ್ಮಾ ಎರಡೂ ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ 96 ಮತ್ತು 63 ರನ್ಗಳಿಸಿ ಪದಾರ್ಪಣೆ ಪಂದ್ಯವನ್ನು ಸ್ಮರಣೀಯಗೊಳಿಸಿದ್ದರು.
"ಟೆಸ್ಟ್ ಪಂದ್ಯವನ್ನು ಉಳಿಸಲು ಭಾರತೀಯ ಹುಡುಗಿಯರು ಅದ್ಭುತ ಪ್ರಯತ್ನ ಮಾಡಿದ್ದಾರೆ. ಸ್ನೇಹ್ ರಾಣಾ ಮತ್ತು ಮೊದಲು ದೀಪ್ತಿ ಶರ್ಮಾ ತೋರಿಸಿದ ಆಟವನ್ನು ನಾವು ಮೆಚ್ಚಲೇಬೇಕು. ಖಂಡಿತವಾಗಿಯೂ ಶೆಫಾಲಿ ವರ್ಮಾ ಅವರ ಮುಂದೆ ಉಜ್ವಲ ಭವಿಷ್ಯ ಇದೆ. ಇದು ಭಾರತ ಮಹಿಳಾ ತಂಡದಿಂದ ಅತ್ಯುತ್ತಮ ಮತ್ತು ನೆನಪಿನಲ್ಲಿಡುವ ಒಂದು ಕಠಿಣ ಹೋರಾಟ" ಎಂದು ಭಾರತದ ಮಾಜಿ ಬ್ಯಾಟ್ಸ್ಮನ್ ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.