ಮ್ಯಾಂಚೆಸ್ಟರ್ (ಯುಕೆ):ಇಂಗ್ಲೆಂಡ್ ವಿಕೆಟ್ ಕೀಪರ್-ಬ್ಯಾಟರ್ ಜೋಸ್ ಬಟ್ಲರ್ ಶುಕ್ರವಾರ ಟಿ20 ಮಾದರಿಯಲ್ಲಿ ಹತ್ತು ಸಾವಿರ ರನ್ ಗಡಿ ದಾಟಿ ದಾಖಲೆ ನಿರ್ಮಿಸಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಈ ಮೈಲಿಗಲ್ಲನ್ನು ತಲುಪಿದ ಒಂಬತ್ತನೇ ಬ್ಯಾಟರ್ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.
ಟಿ20 ಬ್ಲಾಸ್ಟ್ 2023 ಲೀಗ್ ಪಂದ್ಯ ನಡೆಯುತ್ತಿದ್ದು, ಇದರಲ್ಲಿ ಲ್ಯಾನ್ಸ್ಶೇರ್ ಪರವಾಗಿ ಆಡುತ್ತಿರುವ ಬ್ಯಾಟರ್ ಜೋಸ್ ಬಟ್ಲರ್ 36 ಬಾಲ್ನಲ್ಲಿ 83 ರನ್ ಗಳಿಸಿದರು. ಇವರ ಅಬ್ಬರದ ಆಟಕ್ಕೆ ಡರ್ಬಿಶೈರ್ ಫಾಲ್ಕನ್ಸ್ 27 ರನ್ ಸೋಲು ಕಂಡಿತು. ಇದರಿಂದ ಲ್ಯಾನ್ಸ್ಶೇರ್ ತಂಡ ಕ್ವಾಲಿಫೈಯರ್ ಆಗುವುದನ್ನು ಖಚಿತ ಪಡಿಸಿಕೊಂಡಿತು.
ಜೋಸ್ ಬಟ್ಲರ್ 17 ರನ್‌ಗಳಿಂದ ಶತಕ ವಂಚಿತರಾದರು. ಆದರೆ ದೊಡ್ಡ ಮೈಲಿಗಲ್ಲೊಂದನ್ನು ಅವರು ಸಾಧಿಸಿದ್ದಾರೆ. ನಿನ್ನೆ ಅವರು ಗಳಿಸಿದ ಸ್ಕೋರ್ನಿಂದಾಗಿ ಟಿ20 ಮಾದರಿಯ ಕ್ರಿಕೆಟ್ನಲ್ಲಿ 10,000 ರನ್ ಗಳಿಸಿದ ದಾಖಲೆ ಮಾಡಿದರು. ಈ ಸಾಧನೆ ಮಾಡಿದ ವಿಶ್ವದ 9ನೇ ಆಟಗಾರಾದರು. 10 ಸಾವಿರ ರನ್ ಗಡಿ ದಾಟಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಯುನಿವರ್ಸ್ಲ್ ಬಾಸ್ ಕ್ರಿಸ್ ಗೇಲ್ ಹೊಂದಿದ್ದಾರೆ.
ಇದನ್ನೂ ಓದಿ:IND vs WI :ತಂಡಕ್ಕೆ ಯುವಕರ ಆಯ್ಕೆಗೆ ಮಾನದಂಡ ಏನು.. ಡಬ್ಲ್ಯೂಟಿಸಿ ಸೋಲಿಗೆ ಪೂಜಾರ ಒಬ್ಬರೇ ಬಲಿಪಶುವೇ?
333 ಜರ್ಸಿ ಸಂಖ್ಯೆಯ ಆಟಗಾರ ಗೇಲ್ ಟಿ 20 ಮಾದರಿಯಲ್ಲಿ 14,562 ರನ್ ಗಳಿಸಿದ್ದಾರೆ. ಅವರ ದಾಖಲೆ ಮುರಿಯುವುದು ಬಹಳ ಕಷ್ಟವಿದೆ. ಎರಡನೇ ಸ್ಥಾನದಲ್ಲಿ ಪಾಕಿಸ್ತಾನದ ಆಟಗಾರ ಶೋಯೆಬ್ ಮಲಿಕ್ ಇದ್ದು, ಅವರು 12,528 ರನ್ ಗಳಿಸಿದ್ದಾರೆ. ವೆಸ್ಟ್ ಇಂಡೀಸ್ನ ಇನ್ನೊಬ್ಬ ದಾಂಡಿಗ ಕೀರಾನ್ ಪೊಲಾರ್ಡ್ 12,175 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ ಇದ್ದಾರೆ. ಕಿಂಗ್ ಕೊಹ್ಲಿ ಟಿ 20 ಮಾದರಿಯಲ್ಲಿ 11,965 ರನ್ ಕಲೆಹಾಕಿದ್ದಾರೆ. ಟಾಪ್ ಐದರೊಳಗೆ ಇರುವ ಭಾರತದ ಏಕೈಕ ಆಟಗಾರ ವಿರಾಟ್ ಆಗಿದ್ದಾರೆ.
ನಂತರದ ಸ್ಥಾನದಲ್ಲಿ ಅರೋನ್ ಪಿಂಚ್ (11392), ಅಲೆಕ್ಸ್ ಹೇಲ್ಸ್ (11214), ರೋಹಿತ್ ಶರ್ಮಾ (11035) ಇದ್ದಾರೆ. ಜೋಸ್ ಬಟ್ಲರ್ ಹತ್ತು ಸಾವಿರ ರನ್ ಗಡಿಗೆ ಕೇವಲ 3 ರನ್ ದೂರದಲ್ಲಿದ್ದರು. ನಿನ್ನೆ ಪಂದ್ಯದಲ್ಲಿ ಅವರು ಮೂರು ರನ್ ಗಳಿಸುತ್ತಿದ್ದಂತೆ ದಾಖಲೆ ನಿರ್ಮಿಸಿದ್ದಾರೆ. ಪ್ರಸ್ತುತ ಬಟ್ಲರ್ 10080 ರನ್ ಗಳೊಂದಿಗೆ 9ನೇ ಸ್ಥಾನವನ್ನು ಅಲಂಕರಿಸಿದ್ದಾರೆ.
ಪಂದ್ಯದ ನಂತರ ಮಾತನಾಡಿದ ಬಟ್ಲರ್ "ನಾನು ಇಂದು ಆಡಿದ ಇನ್ನಿಂಗ್ಸ್ನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಈ ದಾಖಲೆ ನನಗೆ ನಿಜವಾಗಿಯೂ ಆನಂದವನ್ನು ತಂದಿದೆ. ಲಿಯಾಮ್ ಲಿವಿಂಗ್ಸ್ಟೋನ್ ಜೊತೆಗೆ ಆಡುವುದು ಉತ್ತಮವಾಗಿತ್ತು. ಲಿಯಾಮ್ ಲಿವಿಂಗ್ಸ್ಟೋನ್ ಬೌಲರ್‌ಗಳ ಮೇಲೆ ತುಂಬಾ ಒತ್ತಡವನ್ನು ಹಾಕುತ್ತಾರೆ. ಹೀಗಾಗಿ ಯಾವುದೇ ಸಮಯದಲ್ಲಿ ಜೊತೆಯಾಟವನ್ನು ವಿಸ್ತರಿಸಬಹುದು" ಎಂದಿದ್ದಾರೆ.
ಇದನ್ನೂ ಓದಿ:T Natarajan: ನಟರಾಜನ್ ನಿರ್ಮಿಸಿದ ಕ್ರಿಕೆಟ್ ಮೈದಾನ ಲೋಕಾರ್ಪಣೆ ಮಾಡಿದ ದಿನೇಶ್ ಕಾರ್ತಿಕ್