ಮುಂಬೈ (ಮಹಾರಾಷ್ಟ್ರ):ರಾಜಸ್ಥಾನ ರಾಯಲ್ಸ್ ಯುವ ಪ್ರತಿಭೆ ಯಶಸ್ವಿ ಜೈಸ್ವಾಲ್ ಈ ವರ್ಷ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಮುಂಬೈ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ಅವರು ಐಪಿಎಲ್‌ನ ಚೊಚ್ಚಲ ಶತಕ ದಾಖಲಿಸಿದರು. 2023ರ ಆವೃತ್ತಿಯಲ್ಲಿ ಇದು 3ನೇ ಶತಕವಾಗಿದೆ. ಹ್ಯಾರಿ ಬ್ರೂಕ್ ಈ ಆವೃತ್ತಿಯಲ್ಲಿ ಮೊದಲ ಶತಕ ಸಿಡಿಸಿದರೆ, ವೆಂಕಟೇಶ್ ಅಯ್ಯರ್ ಎರಡನೇ ಶತಕದಾಟವಾಡಿದ್ದರು.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 53 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 13 ಬೌಂಡರಿ ಮತ್ತ 8 ಸಿಕ್ಸ್ನಿಂದ 100 ರನ್ ಗಳಿಸಿದರು. ಈ ಮೂಲಕ ರಾಜಸ್ಥಾನ ತಂಡದಲ್ಲಿ ಏಕಾಂಗಿ ಪ್ರದರ್ಶನ ನೀಡಿದರು. ಶತಕದ ನಂತರ ತಮ್ಮ ತಮ್ಮ ಬ್ಯಾಟಿಂಗ್ ವೇಗ ಹೆಚ್ಚಿಸಿದ ಜೈಸ್ವಾಲ್ ಮತ್ತೆ 3 ಬೌಂಡರಿ ಮತ್ತು 2 ಸಿಕ್ಸ್ ಸೇರಿಸಿ 124 ರನ್ ಕಲೆ ಹಾಕಿದರು. 19.4ನೇ ಬಾಲ್ನಲ್ಲಿ ಬೌಂಡರಿ ಗೆರೆಯಲ್ಲಿ ಕ್ಯಾಚಿತ್ತರು.
ಭಾರತದ 19 ವರ್ಷದೊಳಗಿನವರ ವಿಶ್ವಕಪ್ 2020ರಲ್ಲಿ 400 ರನ್ ಗಳಿಸಿದ್ದ ಜೈಸ್ವಾಲ್ 17 ನೇ ವಯಸ್ಸಿನಲ್ಲಿ ಲಿಸ್ಟ್ ಎ ದ್ವಿಶತಕ ಗಳಿಸಿದ ಕಿರಿಯ ಭಾರತೀಯ ಎಂಬ ದಾಖಲೆ ಬರೆದಿದ್ದರು. ಯಶಸ್ವಿ ಜೈಸ್ವಾಲ್ ಅವರನ್ನು ರಾಜಸ್ಥಾನ ರಾಯಲ್ಸ್ ಐಪಿಎಲ್ 2020 ರಲ್ಲಿ 2.40 ಕೋಟಿ ರೂ.ಗೆ ಖರೀದಿಸಿತ್ತು.
ಐಪಿಎಲ್ನಲ್ಲಿ ಶತಕ ಗಳಿಸಿದ 4ನೇ ಕಿರಿಯ ಆಟಗಾರ:ಶತಕ ಗಳಿಸಿದಜೈಸ್ವಾಲ್ ಅವರಿಗೆ21 ವರ್ಷ 123 ದಿನಗಳಾಗಿದೆ. ಇವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಶತಕ ಗಳಿಸಿದ ಅತಿ ಕಿರಿಯ ಆಟಗಾರರಲ್ಲಿ ನಾಲ್ಕನೆಯವರು. 19 ವರ್ಷ 253 ದಿನದಲ್ಲಿ ಮನೀಶ್ ಪಾಂಡೆ, 20 ವರ್ಷ 218 ದಿನಗಳಲ್ಲಿ ರಿಷಬ್ ಪಂತ್ ಮತ್ತು 20 ವರ್ಷ 289 ದಿನಗಳಲ್ಲಿ ದೇವದತ್ ಪಡಿಕ್ಕಲ್ ಈ ಸಾಧನೆ ಮಾಡಿದ್ದಾರೆ.