ನವದೆಹಲಿ: ರಾಷ್ಟ್ರೀಯ ಫೆಡರೇಶನ್ ಅಧ್ಯಕ್ಷ (ಡಬ್ಲ್ಯೂಎಫ್ಐ) ಬಿಜ್ ಭೂಷಣ್ ವಿರುದ್ಧ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ವೇಳೆ ಸ್ಟಾರ್ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ರವಿ ದಹಿಯಾ ಮತ್ತು ದೀಪಕ್ ಪುನಿಯಾ ಅವರು ಕೂಡ ಪ್ರತಿಭಟನೆಗೆ ಸಾಥ್ ನೀಡಿದ್ದು, ಈ ಸಂಬಂಧ ಭಾರತೀಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಪಿಟಿ ಉಷಾ ಅವರಿಗೆ ದೂರು ಸಲ್ಲಿಸಿದ್ದಾರೆ. ಡಬ್ಲ್ಯೂಎಫ್ಐ ಮುಖ್ಯಸ್ಥ ಸೇರಿದಂತೆ ಅನೇಕ ಕೋಚ್ಗಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪಿಟಿ ಉಷಾ ಅವರಿಗೆ ಸಲ್ಲಿರುವ ದೂರಿನ ಪ್ರತಿಯನ್ನು ಒಲಂಪಿಕ್ ವಿಜೇತ ವಿಘ್ನೇಶ್ ಪೋಗಟ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದೇ ಅವರು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡ ಟ್ಯಾಗ್ ಮಾಡಿದ್ದಾರೆ. ದೂರಿನಲ್ಲಿ ಅವರು ಪ್ರಕರಣದ ಗಂಭೀರತೆ ಕುರಿತು ತಿಳಿಸಿದ್ದು, ದೌರ್ಜನ್ಯದ ಕುರಿತು ಹಲವಾರು ಯುವ ಕುಸ್ತಿಪಟುಗಳು ಕೂಡ ತಿಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ಪತ್ರಕ್ಕೆ ಟೊಕಿಯೋ ಒಲಂಪಿಕ್ ಪದಕ ವಿಜೇತರಾದ ರವಿ ದಹಿಹಾ ಮತ್ತು ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಕಂಚಿನ ಪದಕ ವಿಜೇತ ರಿಯೋ ಗಣೇಶ್ ಮತ್ತು ವರ್ಲ್ಡ್ ಚಾಂಪಿಯನ್ಶಿಪ್ ಪದಕ ವಿಜೇತರಾಗಿರುವ ವಿಘ್ನೇಶ್ ಪೋಗಟ್ ಮತ್ತು ದೀಪಕ್ ಪುನಿಯಾ ಸಹಿ ಹಾಕಿದ್ದಾರೆ.
ಪತ್ರದಲ್ಲಿ ಇದೇ ವೇಳೆ ಕುಸ್ತಿಪಟುಗಳ ಫೆಡರೇಶನ್ನಲ್ಲಿ ನಡೆಯುತ್ತಿರುವ ಹಣಕಾಸಿನ ಅವ್ಯವಹಾರದ ಆರೋಪದ ಕುರಿತು ಕೂಡ ತಿಳಿಸಲಾಗಿದೆ. ಟಾಟಾ ಮೋಟರ್ಸ್ನಿಂದ ಕಳೆದ ಕೆಲವು ವರ್ಷಗಳಿಂದ ಹಲವು ಹಿರಿಯ ಕುಸ್ತಿಪಟುಗಳು ಸ್ಪಾನ್ಸರ್ಶಿಪ್ ಅಡಿ ಕಂಟ್ರಾಕ್ಟ್ ಪೇಮೆಂಟ್ಗೆ ಅನುಮತಿ ನೀಡಲಾಗಿದೆ. ಆದರೆ, ಈ ಹಣ ಪಾವತಿಯಲ್ಲಿ ಒಂದಿಷ್ಟು ಭಾಗವನ್ನು ಮಾತ್ರ ಡಬ್ಲ್ಯೂಎಫ್ಐ ಮಾಡುತ್ತಿದೆ ಎಂದು ಕೂಡ ತಿಳಿಸಲಾಗಿದೆ.
ಮಾನಸಿಕ ದೌರ್ಜನ್ಯದ ಆರೋಪ: ಟೋಕಿಯೋದಲ್ಲಿ ಒಲಂಪಿಕ್ ಪದಕ ಕೈ ತಪ್ಪಿದ ಹಿನ್ನಲೆ ಡಬ್ಲ್ಯೂಎಫ್ಐ ಅಧ್ಯಕ್ಷರು ತಮ್ಮನ್ನು ಮಾನಸಿಕವಾಗಿ ದೌರ್ಜನ್ಯ ನಡೆಸಿದರು ಎಂದು ವಿನೇಶ್ ಪೋಗಟ್ ತಿಳಿಸಿದ್ದಾರೆ. ಅವರ ದೌರ್ಜನ್ಯದಿಂದ ಕಡೆಗೆ ಆತ್ಮಹತ್ಯೆ ಯತ್ನವನ್ನು ನಡೆಸಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೋಚ್ಗಳು ಮತ್ತು ಕ್ರೀಡಾ ವಿಜ್ಞಾನ ಸಿಬ್ಬಂದಿಗಳು, ಡಬ್ಲ್ಯೂಎಫ್ಐ ಅಧ್ಯಕ್ಷರು ಮೆರಿಟ್ ಬದಲು ಯೋಗ್ಯವಲ್ಲದವರಿಗೆ ರಾಷ್ಟ್ರೀಯ ಕ್ಯಾಪ್ ನಡೆಸಿದ್ದಾರೆ. ನ್ಯಾಷನಲ್ ಕ್ಯಾಪ್ನಲ್ಲಿ ಕೆಟ್ಟ ಪರಿಸ್ಥಿತಿ ಮಾಡುವ ಪ್ರಯತ್ನ ನಡೆಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಭಾರತೀಯ ಒಲಂಪಿಕ್ ಅಸೋಸಿಯೇಷನ್ ತಕ್ಷಣವೇ ಸಮಿತಿಯನ್ನು ರಚಿಸಿ, ಲೈಂಗಿಕ ದೌರ್ಜನ್ಯದ ದೂರಿನ ಆಧಾರದ ಅನುಸಾರ ತನಿಖೆಗೆ ಮುಂದಾಗಬೇಕು. ಡಬ್ಲ್ಯೂಎಫ್ಐ ಅಧ್ಯಕ್ಷರು ತಕ್ಷಣವೇ ರಾಜೀನಾಮೆ ನೀಡಬೇಕು. ಕುಸ್ತಿಪಟು ಫೆಡರೇಷನ್ ಅನ್ನು ರದ್ದುಗೊಳಿಸಿ, ಕುಸಿಪಟುಗಳ ಜೊತೆಗೆ ಡಬ್ಲ್ಯೂಎಫ್ ಸಮಾಲೋಚನೆಗೆ ಹೊಸ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.