ಜೈಪುರ (ರಾಜಸ್ಥಾನ): ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 112 ರನ್ಗಳ ಬೃಹತ್ ಗೆಲುವು ದಾಖಲಿಸಿ ರನ್ರೇಟ್ ಉತ್ತಮಗೊಳಿಸಿಕೊಂಡಿದೆ. ಬೆಂಗಳೂರು ನೀಡಿದ್ದ 172 ರನ್ ಗುರಿಯನ್ನು ಬೆನ್ನು ಹತ್ತಿದ್ದ ರಾಜಸ್ಥಾನ ತಂಡ 10.3 ಓವರ್ಗೆ 59 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಲಿನ ಪಂದ್ಯದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಲೀಗ್ನಲ್ಲಿ ಈ ವರೆಗೆ ಆಡಿದ ನಾಲ್ಕು ಡೇ ಪಂದ್ಯಗಳಲ್ಲಿ ಗೆಲುವನ್ನು ಕಂಡಿದೆ. ಇಂದು ರಾಜಸ್ಥಾನದ ಮೇಲಿನ ಗೆಲುವು ಆರ್ಸಿಬಿಯ ರನ್ ರೇಟ್ಗೆ ಚೇತರಿಕೆ ಕಂಡಿದೆ. ಋಣಾತ್ಮಕವಾಗಿದ್ದ ಅಂಕಿ ಇಂದು +0.166 ಆಗಿದೆ.
ಪ್ಲೇ ಆಫ್ ಪ್ರವೇಶಕ್ಕೆ ಸ್ಪರ್ಧೆ ಜೋರಿರುವುದರಿಂದ ಆರ್ಸಿಬಿಗೆ ಗೆಲುವಿನ ಜೊತೆಗೆ ರನ್ರೇಟ್ ಹೆಚ್ಚಿಸಿಕೊಳ್ಳುವ ಅಗತ್ಯವೂ ಇತ್ತು. ಹೀಗಾಗಿ ಇಂದಿನ ಪಂದ್ಯ ಬೆಂಗಳೂರು ತಂಡಕ್ಕೆ ಲೀಗ್ನಲ್ಲಿ ಟರ್ನಿಂಗ್ ಪಾಯಿಂಟ್ ಆಗಿದೆ. ಲಕ್ನೋ ನಂತರ ಮತ್ತೆ ಆರ್ಸಿಬಿ ತಮ್ಮ ಬೌಲಿಂಗ್ನ್ನು ಬಲಿಷ್ಠವಾಗಿ ಪ್ರದರ್ಶಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ ವಿರಾಟ್ -ಫಾಫ್ ಮತ್ತು ಮ್ಯಾಕ್ಸ್‌ವೆಲ್ - ಫಾಫ್ ಅವರ ಅರ್ಧಶತಕದ ಜೊತೆಯಾಟದಿಂದ ಹಾಗೂ ಮ್ಯಾಕ್ಸ್‌ವೆಲ್ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಅವರ ಅಮೂಲ್ಯ ಅರ್ಧಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತ್ತು.