ಕರ್ನಾಟಕ

karnataka

ETV Bharat / sports

RR vs RCB: ಮ್ಯಾಕ್ಸ್​ವೆಲ್​ - ಡು ಪ್ಲೆಸಿಸ್​ ಅರ್ಧಶತಕ, ರಾಜಸ್ಥಾನಕ್ಕೆ 172 ರನ್​ನ ಸಾಧಾರಣ ಗುರಿ

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು 20 ಓವರ್​ನಲ್ಲಿ 5 ವಿಕೆಟ್​ ಕಳೆದುಕೊಂಡು 171 ರನ್​ ಗಳಿಸಿದೆ.

Etv Bharat
Etv Bharat

By

Published : May 14, 2023, 3:16 PM IST

Updated : May 14, 2023, 5:31 PM IST

ಜೈಪುರ(ರಾಜಸ್ಥಾನ): ಆರ್​ಸಿಬಿಯನ್ನು ಈ ಬಾರಿ ಮೂವರು ಬ್ಯಾಟರ್​ಗಳು ಒಬ್ಬ ಬೌಲರ್​ ತಂಡ ಎಂದು ಹೇಳಲಾಗುತ್ತಿದೆ. ತಂಡ 12ನೇ ಪಂದ್ಯ ಆಡುತ್ತಿದ್ದರೂ ಕೇವಲ ಮೂವರು ಬ್ಯಾಟರ್​​ಗಳ ಮೇಲೆಯೇ ಆಸರೆಯಾಗಿದೆ. ಆರಂಭಿಕ ವಿರಾಟ್​ ಕೊಹ್ಲಿಯ ವಿಕೆಟ್​ ಪತನದ ನಂತರ ನಾಯಕ ಫಾಫ್​ ಡು ಪ್ಲೆಸಿಸ್​ ಹಾಗೂ ಮ್ಯಾಕ್ಸ್​ವೆಲ್​ ಅವರ ಅರ್ಧಶತಕದ ಆಟದ ನೆರವಿನಿಂದ ತಂಡ ನಿಗದಿತ ಓವರ್​ ಅಂತ್ಯಕ್ಕೆ 5 ವಿಕೆಟ್​ ನಷ್ಟಕ್ಕೆ 171 ರನ್​ ಕಲೆಹಾಕಿದೆ. ರಾಜಸ್ಥಾನ ರಾಯಲ್ಸ್​ ಗೆಲುವಿಗೆ 172 ರನ್​ ಕಲೆಹಾಕಬೇಕಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ತೆಗೆದುಕೊಂಡ ಆರ್​ಸಿಬಿ ನಾಯಕ ಫಾಫ್​ ತನ್ನ ನಿರ್ಧಾರವನ್ನು ತಾವೇ ಬ್ಯಾಟಿಂಗ್​ ಮಾಡಿ ಸಮರ್ತಿಸಿಕೊಂಡರು. ವಿರಾಟ್​ ಮತ್ತು ಫಾಫ್​ ಜೋಡಿ ಆರ್​ಸಿಬಿಗೆ ಮತ್ತೊಂದು 50 ರನ್​ನ ಜೊತೆಯಾಟವನ್ನು ನೀಡಿದರು. ಆದರೆ ಈ ಜೊತೆಯಾಟದಲ್ಲಿ ವಿರಾಟ್​ ಕೊಡುಗೆ ಕಡಿಮೆ ಇತ್ತು. 19 ಬಾಲ್​ ಎದುರಿಸಿದ ವಿರಾಟ್​ ಕೊಹ್ಲಿ ಕೇವಲ ಒಂದು ಬೌಂಡರಿಯಿಂದ 18 ರನ್​ ಗಳಿಸಿ ತಂಡದ ಮೊತ್ತ ಸರಿಯಾಗಿ 50 ಆಗಿದ್ದಾಗ ವಿಕೆಟ್​ ಕೊಟ್ಟರು.

ವಿರಾಟ್​ ವಿಕೆಟ್​ ನಂತರ ಫಾಫ್​ ಜೊತೆ ಗ್ಲೆನ್ ಮ್ಯಾಕ್ಸ್​ ವೆಲ್​ ಜೊತೆಗೂಡಿದರು. ಈ ಜೋಡಿ 3ನೇ ವಿಕೆಟ್​ಗೆ ನಿಧಾನ ಗತಿಯ ಮತ್ತೊಂದು ಅರ್ಧಶತಕ್ಕೂ ಹೆಚ್ಚಿನ ರನ್​ ಜೊತೆಯಾಟ ಮಾಡಿದರು. ಆದರೆ ರನ್​ ವೇಗ ಕಡಿಮೆ ಇದ್ದ ಕಾರಣ ತಂಡ ಉತ್ತಮ ರನ್​ ರೇಟ್​ನಲ್ಲಿ ಸಾಗಲಿಲ್ಲ. 15 ಓವರ್​ಗೆ ಕೇವಲ 120 ರನ್​ ಮಾತ್ರ ಕಲೆಹಾಕಲಾಗಿತ್ತು.

ನಾಯಕ ಫಾಫ್​ ಈ ಆವೃತ್ತಿಯ 7ನೇ ಅರ್ಧಶತಕಗಳಿಸಿ ಔಟ್​ ಆದರು. ಅವರು ಇನ್ನಿಂಗ್ಸ್​ನಲ್ಲಿ 44 ಬಾಲ್​ ಎದುರಿಸಿ ಎರಡು ಸಿಕ್ಸ್​ ಮತ್ತು 3 ಬೌಂಡರಿಯಿಂದ 55 ರನ್​ ಕಲೆಹಾಕಿದರು. ಮ್ಯಾಕ್ಸ್​ವೆಲ್​ ಸಹ ಅರ್ಧಶತಕ ಗಳಿಸಿದ್ದು, ಅವರು 33 ಬಾಲ್​ನಲ್ಲಿ 3 ಸಿಕ್ಸ್​ ಮತ್ತು 5 ಬೌಂಡರಿ ಬಾರಿಸಿದ್ದರು. ಉಳಿದಂತೆ ಮಹಿಪಾಲ್​ 1 ಹಾಗೂ ದಿನೇಶ್​ ಕಾರ್ತಿಕ್​ ಶೂನ್ಯಕ್ಕೆ ಔಟ್​ ಆದರು.

ಕೊನೆಯಲ್ಲಿ ಬ್ರೆಸ್​ವೆಲ್​ ಮತ್ತು ಅನುಜ್​ ತಂಡಕ್ಕೆ ವಿಕೆಟ್​ ನಿಲ್ಲಸಿದರು. ಮೈಕಲ್ ಬ್ರೇಸ್‌ವೆಲ್​ 9 ಬಾಲ್​ನಲ್ಲಿ 9 ರನ್​ ಗಳಿಸಿದರೆ, ಅನುಜ್​ ರಾವತ್​ ಅಬ್ಬರಿಸಿ 11 ಬಾಲ್​ನಲ್ಲಿ 2 ಸಿಕ್ಸ್​ ಮತ್ತು 3 ಬೌಂಡರಿಯಿಂದ 29 ರನ್​ ಕಲೆಹಾಕಿದರು. ರಾಜಸ್ಥಾನ ಪರ ಝಂಪಾ ಮತ್ತು ಆಸಿಫ್​ ತಲಾ ಎರಡು ಹಾಗೂ ಸಂದೀಪ್​ ಶರ್ಮಾ 1 ವಿಕೆಟ್​ ಪಡೆದರು

ತಂಡಗಳು ಇಂತಿವೆ..: ರಾಯಲ್​ ಚಾಲೆಂಜರ್ಸ್​ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್​ ಕೀಪರ್​), ಮೈಕಲ್ ಬ್ರೇಸ್‌ವೆಲ್, ವೇಯ್ನ್ ಪಾರ್ನೆಲ್, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್

ರಾಜಸ್ಥಾನ ರಾಯಲ್ಸ್​​: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ, ವಿಕೆಟ್ ಕೀಪರ್​), ಜೋ ರೂಟ್, ಧ್ರುವ್ ಜುರೆಲ್, ಶಿಮ್ರೋನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಆಡಮ್ ಝಂಪಾ, ಸಂದೀಪ್ ಶರ್ಮಾ, ಕೆಎಂ ಆಸಿಫ್, ಯುಜ್ವೇಂದ್ರ ಚಹಾಲ್

ಇದನ್ನೂ ಓದಿ:ಪ್ಲೇ-ಆಫ್​ ರೇಸ್​ನಿಂದ ಡೆಲ್ಲಿ ಔಟ್​: ಪಂಜಾಬ್​ ಗೆಲ್ಲಿಸಿದ ಪ್ರಭ್​ಸಿಮ್ರಾನ್​ ಶತಕ- ಪಂದ್ಯದ ಕ್ಷಣಗಳು..

Last Updated : May 14, 2023, 5:31 PM IST

ABOUT THE AUTHOR

...view details