ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಪಡೆ 15ರನ್ಗಳ ರೋಚಕ ಗೆಲುವು ದಾಖಲು ಮಾಡಿದೆ.ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಮರಳಿ ಲಗ್ಗೆ ಹಾಕಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ ತಂಡ 20 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ದಾಖಲೆಯ 222ರನ್ಗಳಿಕೆ ಮಾಡಿತು.
ರಾಜಸ್ಥಾನ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಜೋಸ್ ಬಟ್ಲರ್(116) ಹಾಗೂ ದೇವದತ್ ಪಡಿಕ್ಕಲ್(54) ಎದುರಾಳಿ ಬೌಲರ್ಗಳನ್ನು ಸುಲಭವಾಗಿ ಎದುರಿಸಿ, ಉತ್ತಮ ಜೊತೆಯಾಟವಾಡಿದರು. ಆರಂಭದಲ್ಲಿ ಪವರ್ ಪ್ಲೇನಲ್ಲಿ ಎಚ್ಚರಿಕೆಯ ಆಟವಾಡಿದ ಈ ಜೋಡಿ ತದನಂತರ ಅಬ್ಬರಿಸಿತು. ಇದರ ಜೊತೆಗೆ 11ನೇ ಓವರ್ನಲ್ಲಿ ತಂಡದ ಮೊತ್ತ 100ರ ಗಡಿ ದಾಟಿಸಿದರು.
35 ಎಸೆತಗಳಲ್ಲಿ 54ರನ್ಗಳಿಕೆ ಮಾಡಿದ್ದ ಪಡಿಕ್ಕಲ್ ಖಲೀಲ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಬಂದ ಮೈದಾನಕ್ಕೆ ಬಂದ ಕ್ಯಾಪ್ಟನ್ ಸ್ಯಾಮನ್ಸ್ ಕೂಡ ಅಬ್ಬರದ ಬ್ಯಾಟಿಂಗ್ ನಡೆಸಿದರು. ಆದರೆ, ಅದ್ಭುತ ಫಾರ್ಮ್ನಲ್ಲಿರುವ ಬಟ್ಲರ್ ತಾವು ಎದುರಿಸಿದ 65 ಎಸೆತಗಳಲ್ಲಿ 9 ಸಿಕ್ಸರ್, 9 ಬೌಂಡರಿ ಸಮೇತ 116ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು.
ನಾಯಕನ ಆಟ ಪ್ರದರ್ಶಿಸಿದ ಸಂಜು ಸ್ಯಾಮ್ಸನ್ ಕೇವಲ 19 ಎಸೆತಗಳಲ್ಲಿ 3 ಸಿಕ್ಸರ್, 5 ಬೌಂಡರಿ ಸಮೇತ ಅಜೇಯ 46ರನ್ಗಳಿಕೆ ಮಾಡಿದರು. ಡೆಲ್ಲಿ ತಂಡದ ಪರ ಖಲೀಲ್ ಅಹ್ಮದ್ ಹಾಗೂ ಮುಸ್ತುಫಿಜುರ್ ತಲಾ 1 ವಿಕೆಟ್ ಪಡೆದುಕೊಳ್ಳುವಲ್ಲಿ ಮಾತ್ರ ಯಶಸ್ವಿಯಾಗಿದ್ದು, ಉಳಿದಂತೆ ಯಾವೊಬ್ಬ ಪ್ಲೇಯರ್ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ.