ಕರ್ನಾಟಕ

karnataka

ETV Bharat / sports

ಪಾಟಿದಾರ್​ ಅರ್ಧಶತಕ: ರಾಜಸ್ಥಾನ ಗೆಲುವಿಗೆ 158ರನ್​​ ಟಾರ್ಗೆಟ್​ ನೀಡಿದ ಆರ್​ಸಿಬಿ - ರಾಯಲ್ ಚಾಲೆಂಜರ್ಸ್ ಬೆಂಗಳೂರು

2022ರ ಐಪಿಎಲ್​​ನಲ್ಲಿಂದು ಕ್ವಾಲಿಫೈಯರ್​ 2 ಪಂದ್ಯ ನಡೆಯುತ್ತಿದ್ದು, ರಾಜಸ್ಥಾನ ರಾಯಲ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಿವೆ.

Rajasthan Royals vs Royal Challengers Bangalore
Rajasthan Royals vs Royal Challengers Bangalore

By

Published : May 27, 2022, 7:03 PM IST

Updated : May 27, 2022, 9:25 PM IST

ಅಹಮದಾಬಾದ್​: ರಾಜಸ್ಥಾನ ತಂಡದ ಸಂಘಟಿತ ಬೌಲಿಂಗ್ ನೆರವಿನ ಹೊರತಾಗಿ ರಜತ್​ ಪಾಟಿದಾರ್​(58) ಆಕರ್ಷಕ ಅರ್ಧಶತಕದ ನೆರವಿನಿಂದ ಆರ್​ಸಿಬಿ ನಿಗದಿತ 20 ಓವರ್​​ಗಳಲ್ಲಿ 8 ವಿಕೆಟ್​ನಷ್ಟಕ್ಕೆ 157ರನ್​ಗಳಿಕೆ ಮಾಡಿದ್ದು, ಎದುರಾಳಿ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ಆರಂಭದಲ್ಲೇ ಆಘಾತ ಎದುರಿಸಿತು. ವಿರಾಟ್​ ಕೊಹ್ಲಿ(7) ನಿರಾಸೆ ಅನುಭವಿಸಿದರು. ಇದಾದ ಬಳಿಕ ಒಂದಾದ ಡುಪ್ಲೆಸಿಸ್​-ಪಾಟಿದಾರ್ ತಂಡಕ್ಕೆ ಚೇತರಿಕೆ ನೀಡಿದರು.

ವಿಕೆಟ್ ಪಡೆದು ಸಂಭ್ರಮಿಸಿದ ರಾಜಸ್ಥಾನ

25ರನ್​​ಗಳಿಕೆ ಮಾಡಿದ್ದ ಕ್ಯಾಪ್ಟನ್​ ಡುಪ್ಲೆಸಿಸ್​​ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಬಂದ ಮ್ಯಾಕ್ಸವೆಲ್ ತಾವು ಎದುರಿಸಿದ 13 ಎಸೆತಗಳಲ್ಲಿ 24ರನ್​​ಗಳಿಸಿ, ಬೌಲ್ಟ್​ ಓವರ್​ನಲ್ಲಿ ಔಟಾದರು. ಲಖನೌ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದ ಪಾಟಿದಾರ್​ ಇಂದಿನ ಮಹತ್ವದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ತಾವು ಎದುರಿಸಿದ 42 ಎಸೆತಗಳಲ್ಲಿ 3 ಸಿಕ್ಸರ್ ಸಮೇತ 58ರನ್​​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. ಮದ್ಯಮ ಕ್ರಮಾಂಕದಲ್ಲಿ ಮಹಿಪಾಲ್​(8), ಕಾರ್ತಿಕ್​(6) ಅಹ್ಮದ್ ಅಜೇಯ(12), ಹಸರಂಗ(0) ರನ್​ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು.

ರಾಜಸ್ಥಾನ ತಂಡದ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಪ್ರಸಿದ್ಧ ಕೃಷ್ಣ, ಮೆಕಾಯ್ ತಲಾ 3 ವಿಕೆಟ್ ಪಡೆದರೆ, ಅಶ್ವಿನ್ ಹಾಗೂ ಬೌಲ್ಟ್ 1 ವಿಕೆಟ್ ಪಡೆದು ಗಮನ ಸೆಳೆದರು.

ಮೊಟೇರಾದ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿಂದು ಎರಡನೇ ಕ್ವಾಲಿಫೈಯರ್​ ಪಂದ್ಯ ನಡೆಯುತ್ತಿದ್ದು, ರಾಜಸ್ಥಾನ ರಾಯಲ್ಸ್​ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ತಂಡ ಫೈನಲ್​ಗೆ ಪ್ರವೇಶ ಪಡೆದುಕೊಳ್ಳಲಿದ್ದು, ಗುಜರಾತ್​ ಟೈಟನ್ಸ್​ ವಿರುದ್ಧ ಸೆಣಸಾಟ ನಡೆಸಲಿದೆ.

ರಾಜಸ್ಥಾನ ವರ್ಸಸ್ ಬೆಂಗಳೂರು

ಇಂದಿನ ಪಂದ್ಯದಲ್ಲಿ ಟಾಸ್​ ಗೆದ್ದಿರುವ ರಾಜಸ್ಥಾನ ರಾಯಲ್ಸ್​​ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದ್ದು, ಆರ್​ಸಿಬಿ ಬ್ಯಾಟಿಂಗ್ ನಡೆಸಲಿದೆ. ಮಹತ್ವದ ಪಂದ್ಯಕ್ಕಾಗಿ ಉಭಯ ತಂಡದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಲಾಗಿಲ್ಲ. ಈ ಹಿಂದಿನ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಆಡುವ 11ರ ಬಳಗದಲ್ಲಿದೆ.

ರಾಯಲ್​ ಚಾಲೆಂಜರ್ಸ್ ಬೆಂಗಳೂರು:ವಿರಾಟ್​ ಕೊಹ್ಲಿ, ಡುಪ್ಲೆಸಿಸ್​(ಕ್ಯಾಪ್ಟನ್​), ರಜತ್​ ಪಾಟಿದಾರ್, ಗ್ಲೇನ್ ಮ್ಯಾಕ್ಸ್​ವೆಲ್, ಮಹಿಪಾಲ್​, ದಿನೇಶ್ ಕಾರ್ತಿಕ್​(ವಿ.ಕೀ), ಶಹಬಾಜ್​ ಅಹ್ಮದ್,ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್​ವುಡ್, ಮೊಹಮ್ಮದ್ ಸಿರಾಜ್

ರಾಜಸ್ಥಾನ ರಾಯಲ್ಸ್​​:ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್​​(ವಿ.ಕೀ, ಕ್ಯಾಪ್ಟನ್), ದೇವದತ್ ಪಡಿಕ್ಕಲ್​, ಶಿಮ್ರಾನ್ ಹೆಟ್ಮಾಯರ್, ರಿಯಾಗ್ ಪರಾಗ್, ಆರ್​.ಅಶ್ವಿನ್, ಟ್ರೆಂಟ್ ಬೌಲ್ಟ್​, ಪ್ರಸಿದ್ಧ ಕೃಷ್ಣ, ಯಜುವೇಂದ್ರ ಚಹಲ್,ಮೆಕಾಯ್

ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ರಾಜಸ್ಥಾನ ಹಾಗೂ ಎಲಿಮಿನೇಟರ್​ ಪಂದ್ಯದಲ್ಲಿ ರೋಚಕ ಗೆಲುವು ದಾಖಲು ಮಾಡಿರುವ ಆರ್​ಸಿಬಿ ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಮೊಟೇರಾದ ನರೇಂದ್ರ ಮೋದಿ ಮೈದಾನದಲ್ಲಿ ಪಂದ್ಯ ಆಯೋಜನೆಗೊಂಡಿದೆ. ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡಿ, ಫೈನಲ್​ಗೆ ಲಗ್ಗೆ ಹಾಕುವ ಕನಸು ಕಾಣುತ್ತಿರುವ ಬೆಂಗಳೂರು ಚೊಚ್ಚಲ ಪ್ರಶಸ್ತಿಗೆ ಕೇವಲ ಇನ್ನೆರಡು ಹೆಜ್ಜೆ ಬಾಕಿ ಇದೆ. ಸಂಜು ಸ್ಯಾಮ್ಸನ್ ಬಳಗಕ್ಕೂ ಈ ಪಂದ್ಯ ಪ್ರತಿಷ್ಠೆಯಿಂದ ಕೂಡಿದ್ದು, ತೀವ್ರ ಪೈಪೋಟಿ ಕಂಡು ಬರುವ ಸಾಧ್ಯತೆ ದಟ್ಟವಾಗಿದೆ.

ನಾಟಕೀಯ ಬೆಳವಣಿಗೆಯಲ್ಲಿ ಪ್ಲೇ-ಆಫ್ ಪ್ರವೇಶ ಪಡೆದುಕೊಂಡಿದ್ದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ, ಲಖನೌ ಸೂಪರ್ ಜೈಂಟ್ಸ್​ ವಿರುದ್ಧದ ಪಂದ್ಯದಲ್ಲಿ ರಜತ್ ಪಾಟಿದಾರ್ ಸ್ಫೋಟಕ ಶತಕ ಹಾಗೂ ಬೌಲರ್​ಗಳ ಸಾಂಘಿಕ ಹೋರಾಟದ ಬಲದಿಂದ ಕ್ವಾಲಿಫೈಯರ್​ಗೆ ಪ್ರವೇಶ ಪಡೆದಿದೆ. ಆದರೆ, ತಂಡದಲ್ಲಿರುವ ಡುಪ್ಲೆಸಿಸ್, ಮ್ಯಾಕ್ಸ್​ವೆಲ್, ವಿರಾಟ್​ ಕೊಹ್ಲಿ ಹಾಗೂ ಮಹಿಪಾಲ್​ ಇಂದಿನ ಪಂದ್ಯದಲ್ಲಿ ಆರ್ಭಟಿಸಬೇಕಾಗಿದೆ. ಉಳಿದಂತೆ ತಂಡಕ್ಕೆ ಕಾರ್ತಿಕ್​ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಆರ್​ಸಿಬಿ ಬೌಲಿಂಗ್ ಕೂಡ ಉತ್ತಮವಾಗಿದೆ. ಹ್ಯಾಜಲ್​ವುಡ್​, ಹರ್ಷಲ್ ಪಟೇಲ್, ಹಸರಂಗ, ಸಿರಾಜ್​ ಜೊತೆಗೆ ಕೆಲವೊಮ್ಮೆ ಮ್ಯಾಕ್ಸ್​ವೆಲ್ ಕೂಡ ವಿಕೆಟ್ ಪಡೆದುಕೊಳ್ಳುತ್ತಿರುವುದು ತಂಡಕ್ಕೆ ಸಹಕಾರಿಯಾಗಿದೆ. ರಾಜಸ್ಥಾನ ಕೂಡ ಉತ್ತಮ ಬ್ಯಾಟಿಂಗ್ ಪಡೆ ಹೊಂದಿದೆ. ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್​​ ಮತ್ತು ದೇವದತ್​ ಪಡಿಕ್ಕಲ್​​ ಉತ್ತಮ ಲಯದಲ್ಲಿದ್ದಾರೆ. ಆದರೆ, ಗುಜರಾತ್​ ವಿರುದ್ಧ ಮೊದಲ ಕ್ವಾಲಿಫೈಯರ್​ನಲ್ಲಿ ಸೋಲು ಕಂಡಿದ್ದು, ತಂಡ ಇಂದು ಪುಟಿದೇಳುವ ತವಕದಲ್ಲಿದೆ.

Last Updated : May 27, 2022, 9:25 PM IST

ABOUT THE AUTHOR

...view details