ಕರ್ನಾಟಕ

karnataka

ETV Bharat / sports

ಜೋಸ್ ಬಟ್ಲರ್​​ 3ನೇ ಶತಕ: ಡೆಲ್ಲಿ ಕ್ಯಾಪಿಟಲ್ಸ್​ ಗೆಲುವಿಗೆ 223 ರನ್​ ಟಾರ್ಗೆಟ್​! - ರಾಜಸ್ಥಾನ ರಾಯಲ್ಸ್​

15ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಜಾಸ್ ಬಟ್ಲರ್ ಮತ್ತೊಂದು ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಬೃಹತ್ ಟಾರ್ಗೆಟ್​ ನೀಡಿದೆ.

Rajasthan Royals
Rajasthan Royals

By

Published : Apr 22, 2022, 9:37 PM IST

ಮುಂಬೈ:ಅತ್ಯದ್ಭುತ ಫಾರ್ಮ್​​ನಲ್ಲಿರುವ ರಾಜಸ್ಥಾನ ರಾಯಲ್ಸ್​ ತಂಡದ ಆರಂಭಿಕ ದಾಂಡಿಗ ಜಾಸ್ ಬಟ್ಲರ್​​ ಕೇವಲ 57 ಎಸೆತಗಳಲ್ಲಿ ಮತ್ತೊಂದು ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಆರ್​ಆರ್ ತಂಡ 20 ಓವರ್​ಗಳಲ್ಲಿ 2 ವಿಕೆಟ್​​ ನಷ್ಟಕ್ಕೆ 222 ರನ್​ಗಳಿಕೆ ಮಾಡಿದ್ದು, ಎದುರಾಳಿ ತಂಡಕ್ಕೆ ಬೃಹತ್ ಟಾರ್ಗೆಟ್ ನೀಡಿದೆ.

ಇಂಡಿಯನ್​ ಪ್ರೀಮಿಯರ್ ಲೀಗ್​ನ ಇಂದಿನ ಹೈವೋಲ್ಟೆಜ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​​​-ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿವೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಉಭಯ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದು, ರಾಜಸ್ಥಾನ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಜೋಸ್ ಬಟ್ಲರ್​​ ಹಾಗೂ ದೇವದತ್ ಪಡಿಕ್ಕಲ್​​ ಎದುರಾಳಿ ಬೌಲರ್​ಗಳನ್ನು ಸುಲಭವಾಗಿ ಎದುರಿಸಿ, ಉತ್ತಮ ಜೊತೆಯಾಟವಾಡಿದರು. ಆರಂಭದಲ್ಲಿ ಪವರ್​ ಪ್ಲೇನಲ್ಲಿ ಎಚ್ಚರಿಕೆಯ ಆಟವಾಡಿದ ಈ ಜೋಡಿ ತದನಂತರ ಅಬ್ಬರಿಸಿತು. ಇದರ ಜೊತೆಗೆ 11ನೇ ಓವರ್​​ನಲ್ಲಿ ತಂಡದ ಮೊತ್ತ 100ರ ಗಡಿ ದಾಟಿಸಿದರು.

​​

35 ಎಸೆತಗಳಲ್ಲಿ 54ರನ್​ಗಳಿಕೆ ಮಾಡಿದ್ದ ಪಡಿಕ್ಕಲ್​​​ ಖಲೀಲ್ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಬಂದ ಮೈದಾನಕ್ಕೆ ಬಂದ ಕ್ಯಾಪ್ಟನ್ ಸ್ಯಾಮನ್ಸ್ ಕೂಡ ಅಬ್ಬರದ ಬ್ಯಾಟಿಂಗ್ ನಡೆಸಿದರು. ಆದರೆ, ಅದ್ಭುತ ಫಾರ್ಮ್​ನಲ್ಲಿರುವ ಬಟ್ಲರ್​ ತಾವು ಎದುರಿಸಿದ 65 ಎಸೆತಗಳಲ್ಲಿ 9 ಸಿಕ್ಸರ್, 9 ಬೌಂಡರಿ ಸಮೇತ 116ರನ್​ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು.

ನಾಯಕನ ಆಟ ಪ್ರದರ್ಶಿಸಿದ ಸಂಜು ಸ್ಯಾಮ್ಸನ್​ ಕೇವಲ 19 ಎಸೆತಗಳಲ್ಲಿ 3 ಸಿಕ್ಸರ್, 5 ಬೌಂಡರಿ ಸಮೇತ ಅಜೇಯ 46ರನ್​ಗಳಿಕೆ ಮಾಡಿದರು. ಡೆಲ್ಲಿ ತಂಡದ ಪರ ಖಲೀಲ್ ಅಹ್ಮದ್ ಹಾಗೂ ಮುಸ್ತುಫಿಜುರ್​​ ತಲಾ 1 ವಿಕೆಟ್ ಪಡೆದುಕೊಳ್ಳುವಲ್ಲಿ ಮಾತ್ರ ಯಶಸ್ವಿಯಾಗಿದ್ದು, ಉಳಿದಂತೆ ಯಾವೊಬ್ಬ ಪ್ಲೇಯರ್​ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ.

ABOUT THE AUTHOR

...view details