ಕರ್ನಾಟಕ

karnataka

ETV Bharat / sports

ತುಂಬಿ ತುಳುಕುವ ಮೈದಾನದಲ್ಲಿ ಗುಜರಾತ್​-ರಾಜಸ್ಥಾನ ಮಧ್ಯೆ ಬಿಗ್​ ಫೈಟ್​.. ಗೆದ್ದವ್ರು ಫೈನಲ್​ಗೆ ಲಗ್ಗೆ!

ಇಂಡಿಯನ್​ ಪ್ರೀಮಿಯರ್​ ಲೀಗ್​ ಕ್ರಿಕೆಟ್​ ಟೂರ್ನಿಯ 15ನೇ ಆವೃತ್ತಿಯು ಅಂತಿಮ ಘಟಕ್ಕೆ ತಲುಪಿದೆ. ಇಂದಿನಿಂದ ಪ್ಲೇ ಆಫ್​ನತ್ತ ಎಲ್ಲರ ದೃಷ್ಟಿ ನೆಟ್ಟಿದ್ದು, ಇಂದು ಈಡನ್​ ಗಾರ್ಡನ್​ನಲ್ಲಿ ಗುಜರಾತ್​ ಮತ್ತು ರಾಜಸ್ಥಾನ್ ತಂಡದ ಮಧ್ಯೆ ಸೆಣಸಾಟ ನಡೆಯಲಿದೆ..

IPL First Qualifier in Kolkata,  Indian Premier League 2022, Gujarat Titans vs Rajasthan Royals first Qualifier, match in Kolkata Eden Gardens, ಕೋಲ್ಕತ್ತಾದಲ್ಲಿ ಐಪಿಎಲ್​ ಮೊದಲ ಕ್ವಾಲಿಫೈಯರ್, ಇಂಡಿಯನ್ ಪ್ರೀಮಿಯರ್ ಲೀಗ್ 2022, ಮೊದಲ ಕ್ವಾಲಿಫೈಯರ್​ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್, ಕೋಲ್ಕತ್ತಾ ಈಡನ್ ಗಾರ್ಡನ್ಸ್​ನಲ್ಲಿ ಪಂದ್ಯ,
ಕೃಪೆ : Twitter

By

Published : May 24, 2022, 2:07 PM IST

ಕೋಲ್ಕತ್ತಾ :ಮಾರ್ಚ್ ತಿಂಗಳಲ್ಲಿ ಆರಂಭವಾದ 15ನೇ ಆವೃತ್ತಿಯ ಐಪಿಎಲ್​ನ ಲೀಗ್ ಹಂತದ ಪಂದ್ಯಗಳು ಭಾನುವಾರ ಮುಕ್ತಾಯಗೊಂಡಿದ್ದು, ಟೂರ್ನಿಯ ಪ್ಲೇಆಫ್ ಸುತ್ತಿನ ಪಂದ್ಯಗಳು ಇಂದಿನಿಂದ ಆರಂಭವಾಗುತ್ತಿವೆ. ಅಂಕಪಟ್ಟಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಹೊಂದಿರುವ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಇಂದು ಸೆಣಸಾಟ ನಡೆಸಲಿವೆ.

ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಆದರೆ, ಕಳೆದ ಎರಡು ದಿನಗಳಿಂದ ಮಳೆ ಸುರಿದ ಕಾರಣ ಇದು ಸ್ಪಿನ್ನರ್‌ಗಳಿಗೆ ಸಾಕಷ್ಟು ಸಹಾಯವಾಗುವ ಲಕ್ಷಣ ಗೋಚರಿಸುತ್ತಿದೆ.

ಈ ಪಿಚ್ ಆರಂಭದಲ್ಲಿ ಬೌಲರ್‌ಗಳಿಗೆ ಸಹಕಾರಿಯಾಗಿರಲಿದೆ. ನಂತರ ಬ್ಯಾಟರ್‌ಗಳು ತಮ್ಮ ಹೊಡೆತಗಳನ್ನು ಮುಕ್ತವಾಗಿ ಆಡಬಹುದಾಗಿದೆ. ಇಲ್ಲಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ದುಕೊಂಡು ನಂತರ ಚೇಸಿಂಗ್ ಮಾಡುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಓದಿ:IPL​​ ಪ್ಲೇ - ಆಫ್, ಫೈನಲ್​​ಗೆ ಹೊಸ ನಿಯಮ.. ಈ ರೀತಿಯಾದರೆ ಪಂದ್ಯ ಆಡದೇ ಆರ್​ಸಿಬಿ ಹೊರಕ್ಕೆ!

ಈ ಪಂದ್ಯದಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್​ಗೆ ಪ್ರವೇಶ ಪಡೆಯಲಿದೆ. ಸೋತ ತಂಡವು 25ರಂದು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ, ಮೇ 27ರಂದು ಎರಡನೇ ಕ್ವಾಲಿಫೈಯರ್ ಹಣಾಹಣಿಗೆ ಕಣಕ್ಕಿಳಿಯಲಿದೆ. ಮೇ 25ರಂದು ನಡೆಯುವ ಎಲಿಮಿನೇಟರ್ ಹೋರಾಟದಲ್ಲಿ ಅಂಕಪಟ್ಟಿಯಲ್ಲಿ 3 ಹಾಗೂ 4ನೇ ಸ್ಥಾನದಲ್ಲಿರುವ ಲಖನೌ ಸೂಪರ್​ ಜೈಂಟ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಆಡಲಿವೆ.

ಇಲ್ಲಿ ಜಯ ಸಾಧಿಸಿದ ತಂಡ ಮೇ 27ರಂದು ನಡೆಯುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲ ಕ್ವಾಲಿಫೈಯರ್​ನಲ್ಲಿ ಸೋಲುಂಡ ಟೀಂನೊಂದಿಗೆ ಫೈನಲ್​ ಪ್ರವೇಶಕ್ಕಾಗಿ ಹೋರಾಡಲಿದೆ. ಈ ಪಂದ್ಯಗಳಿಗೆ ಮೈದಾನದಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ.

ಸಂಭಾವ್ಯ ತಂಡ :

ಗುಜರಾತ್ ಟೈಟಾನ್ಸ್ :ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಮ್ಯಾಥ್ಯೂ ವೇಡ್ (ವಿ.ಕೀ), ಹಾರ್ದಿಕ್ ಪಾಂಡ್ಯ (ನಾಯಕ),ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಲಾಕಿ ಫರ್ಗುಸನ್, ಯಶ್ ದಯಾಳ್, ಮೊಹಮ್ಮದ್ ಶಮಿ

ರಾಜಸ್ಥಾನ್ ರಾಯಲ್ಸ್ :ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ಕ್ಯಾ./ ವಿ.ಕೀ), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ಓಬೇದ್ ಮೆಕಾಯ್

ABOUT THE AUTHOR

...view details