ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದಾಖಲೆಯ 91ರನ್ಗಳ ಅಂತರದ ಗೆಲುವು ದಾಖಲು ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ಇದೀಗ 11 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಸಾಧಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಪ್ಲೇ-ಆಫ್ ರೇಸ್ನಲ್ಲಿ ಉಳಿದುಕೊಳ್ಳಬೇಕಾದರೆ ಮುಂದಿನ 3 ಪಂದ್ಯಗಳಲ್ಲಿ ಗೆಲುವು ಅನಿವಾರ್ಯವಾಗಿದ್ದು, ಇದರ ಜೊತೆಗೆ ಉಳಿದ ತಂಡಗಳ ಸೋಲು - ಗೆಲುವಿನ ಲೆಕ್ಕಾಚಾರದ ಮೇಲೆ ಸಿಎಸ್ಕೆ ಭವಿಷ್ಯ ನಿಂತಿದೆ.
ನಿನ್ನೆ ಡೆಲ್ಲಿ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿರುವ ಸಿಎಸ್ಕೆ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, 2022ರ ಐಪಿಎಲ್ನಲ್ಲಿ ಪ್ಲೇ-ಆಫ್ ಪ್ರವೇಶ ಪಡೆದುಕೊಂಡಿದ್ದರೆ ಉತ್ತಮ. ಆದರೆ, ಅದು ಸಾಧ್ಯವಾಗದಿದ್ದಲಿ ಪ್ರಪಂಚ ಅಷ್ಟಕ್ಕೇ ಕೊನೆಯಾಗುವುದಿಲ್ಲ ಎಂದು ಹೇಳಿದ್ದಾರೆ. ನಮ್ಮ ತಂಡ ಪ್ಲೇ-ಆಫ್ ಅರ್ಹತೆ ಬಗ್ಗೆ ಚಿಂತಿಸುವುದಿಲ್ಲ. ಈ ಗುರಿಯಲ್ಲಿ ನಾವು ವಿಫಲವಾದ್ರೂ ಅದು ಅದು ಜಗತ್ತಿನ ಅಂತ್ಯ ಅಲ್ಲ ಎಂದಿದ್ದಾರೆ.
ಚೆನ್ನೈ ಪ್ಲೇ-ಆಫ್ ಅಸೆ ಜೀವಂತ: ಡೆಲ್ಲಿ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿರುವ ಸಿಎಸ್ಕೆ ಪ್ಲೇ-ಆಫ್ ಆಸೆ ಈಗಲೂ ಜೀವಂತವಾಗಿದೆ. ಇಲ್ಲಿಯವರೆಗೆ ತಂಡ ಆಡಿರುವ 11 ಪಂದ್ಯಗಳ ಪೈಕಿ 4ರಲ್ಲಿ ಗೆದ್ದು 8 ಪಾಯಿಂಟ್ಗಳಿಕೆ ಮಾಡಿದೆ. ಇನ್ನೂ ಮೂರು ಪಂದ್ಯಗಳು ಬಾಕಿ ಉಳಿದಿವೆ. ಒಂದು ವೇಳೆ ಈ ಎಲ್ಲ ಮ್ಯಾಚ್ಗಳಲ್ಲಿ ಸಿಎಸ್ಕೆ ಗೆಲುವು ದಾಖಲಿಸಿದರೆ 14 ಪಾಯಿಂಟ್ ಆಗಲಿವೆ. ಈ ತಂಡದ ರನ್ರೇಟ್ ಉತ್ತಮವಾಗಿರುವ ಕಾರಣ, ಪ್ಲೇ-ಆಫ್ ಪ್ರವೇಶ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆದರೆ, ರಾಜಸ್ಥಾನ ರಾಯಲ್ಸ್ ಹಾಗೂ ಬೆಂಗಳೂರು ತಂಡ ಮುಂದಿನ ಪಂದ್ಯಗಳಲ್ಲಿ ಸೋಲು ಕೂಡ ಸಿಎಸ್ಕೆ ತಂಡಕ್ಕೆ ಅನಿವಾರ್ಯವಾಗಿದೆ.