ಪುಣೆ:ಇಂದು ವಿಶ್ವ ತಾಯಂದಿರ ದಿನ. ಅತ್ಯಂತ ಮಹತ್ವದ ದಿನವಾದ ಇಂದು ಉಸಿರು ನೀಡಿದ ದೇವತೆಗೆ ಇನ್ನಿಲ್ಲದಂತೆ ಶುಭಾಶಯಗಳ ಮಹಾಪೂರವೇ ಹರಿದ ಬರುತ್ತಿದೆ. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಹೊಸ ಫ್ರಾಂಚೈಸಿ ಲಖನೌ ಸೂಪರ್ ಜೈಂಟ್ಸ್ ಜನ್ಮ ನೀಡಿರುವ ತಾಯಿಗೆ ವಿಶೇಷವಾಗಿ ಗೌರವ ಸಲ್ಲಿಸಿದ್ದು, ಈ ಮೂಲಕ ಮಾತೃ ಪ್ರೇಮ ಮೆರೆದಿದೆ.
'ಮಾತೃ ಪ್ರೇಮ ಮೆರೆದ ಲಖನೌ'... 'ಮದರ್ಸ್ ಡೇ'ಗೆ ಈ ರೀತಿ ಗೌರವ ಸಲ್ಲಿಸಿದ ರಾಹುಲ್ ಪಡೆ!
ಮದರ್ಸ್ ಡೇ ದಿನದಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಟ ನಡೆಸುತ್ತಿರುವ ಕನ್ನಡಿಗ ರಾಹುಲ್ ನಾಯಕತ್ವದ ಲಖನೌ ತಂಡ ಹೆತ್ತಮ್ಮನಿಗೆ ವಿಶೇಷ ಗೌರವ ಸಲ್ಲಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು ಲಖನೌ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಟ ನಡೆಸುತ್ತಿದ್ದು, ಈ ಪಂದ್ಯದಲ್ಲಿ ಕಣಕ್ಕಿಳಿದಿರುವ ತಂಡ ತಾನು ತೊಟ್ಟಿರುವ ಜೆರ್ಸಿ ಮೇಲೆ ತಾಯಂದಿರ ಹೆಸರು ಬರೆಸಿದೆ. ಜೆರ್ಸಿ ತೊಟ್ಟು ಮೈದಾನಕ್ಕಿಳಿದಿರುವ ಪ್ಲೇಯರ್ಸ್ಗಳ ತಾಯಿಯ ಹೆಸರು ಜೆರ್ಸಿ ಮೇಲೆ ಬರೆಸಲಾಗಿದೆ. ಈ ಮೂಲಕ ಹೆತ್ತಮ್ಮನಿಗೆ ಗೌರವ ಸಲ್ಲಿಸುವ ಕೆಲಸ ಮಾಡಿದೆ. ಇದರ ವಿಡಿಯೋ ತುಣುಕೊಂದನ್ನ ತನ್ನ ಟ್ವಿಟರ್ ಅಕೌಂಟ್ನಲ್ಲಿ ಹಾಕಿಕೊಂಡಿದೆ.
ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಲಖನೌ ತಂಡ ತಾನು ಆಡಿರುವ 10 ಪಂದ್ಯಗಳ ಪೈಕಿ 7ರಲ್ಲಿ ಗೆಲುವು ಸಾಧಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 2016ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಪ್ಲೇಯರ್ಸ್ ಕೂಡ ಇದೇ ರೀತಿಯಾಗಿ ತಮ್ಮ ಜೆರ್ಸಿ ಮೇಲೆ ತಾಯಂದಿರ ಹೆಸರು ಬರೆಯಿಸಿದ್ದ ಜೆರ್ಸಿ ತೊಟ್ಟು ಕಣಕ್ಕಿಳಿದಿತ್ತು.