ಕರ್ನಾಟಕ

karnataka

ETV Bharat / sports

ಐಪಿಎಲ್ 2021: ರಾಯಲ್ಸ್​ ಕ್ಯಾಂಪ್​ ಸೇರಿದ ಬಟ್ಲರ್, ಸ್ಟೋಕ್ಸ್, ಲಿವಿಂಗ್​ಸ್ಟೋನ್​ - ಲಿಯಾಮ್ ಲಿವಿಂಗ್ಸ್ಟೋನ್

ಭಾರತ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದ ನಂತರ ಆಟಗಾರರು ತಮ್ಮ ತಮ್ಮ ಪ್ರಾಂಚೈಸಿಗಳತ್ತ ಮುಖ ಮಾಡಿದ್ದಾರೆ. ಭಾರತ ತಂಡ ಭಾನುವಾರ ನಡೆದ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಭಾರತ ತಂಡ 2-1ರಲ್ಲಿ ಸರಣಿ ಜಯಿಸಿತ್ತು.

Jos Buttler, Ben Stokes, Liam Livingstone join Rajasthan Royals camp
ರಾಯಲ್ಸ್​ ಕ್ಯಾಂಪ್​ ಸೇರಿದ ಬಟ್ಲರ್, ಸ್ಟೋಕ್ಸ್, ಲಿವಿಂಗ್ಸ್ಟೋನ್

By

Published : Mar 30, 2021, 9:26 AM IST

ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರಲ್ಲಿ ಆಡಲು ಇಂಗ್ಲೆಂಡ್ ಆಟಗಾರರಾದ ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್ ಮತ್ತು ಲಿಯಾಮ್ ಲಿವಿಂಗ್​​​​ಸ್ಟೋನ್​ ರಾಜಸ್ಥಾನ್ ರಾಯಲ್ಸ್ ತಂಡ ತಂಗಿರುವ ಹೋಟೆಲ್​​ ಸೇರಿಕೊಂಡಿದ್ದಾರೆ.

ಭಾರತ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದ ನಂತರ ಆಟಗಾರರು ತಮ್ಮ ತಮ್ಮ ಪ್ರಾಂಚೈಸಿಗಳತ್ತ ಮುಖ ಮಾಡಿದ್ದಾರೆ. ಭಾರತ ತಂಡ ಭಾನುವಾರ ನಡೆದ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಭಾರತ ತಂಡ 2-1ರಲ್ಲಿ ಸರಣಿ ಜಯಿಸಿತ್ತು.

ಈ ಮೂವರು ಆಟಗಾರರು ಹೋಟೆಲ್​ಗೆ ಬರುವ ವಿಡಿಯೋವನ್ನ ರಾಜಸ್ಥಾನ್ ರಾಯಲ್ಸ್ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದೆ.

ಐಪಿಎಲ್ 2021 ಗಾಗಿ ಬಿಸಿಸಿಐನ ಎಸ್‌ಒಪಿಗಳ ಪ್ರಕಾರ, ಎಲ್ಲ ಆಟಗಾರರು (ಭಾರತ-ಇಂಗ್ಲೆಂಡ್ ಸರಣಿಯ ಆಟಗಾರರನ್ನು ಹೊರತುಪಡಿಸಿ), ಬೆಂಬಲ ಸಿಬ್ಬಂದಿ ತಮ್ಮ ಹೋಟೆಲ್ ಕೋಣೆಗಳಲ್ಲಿ ಏಳು ದಿನಗಳ ಕಾಲ ಕ್ವಾರಂಟೈನ್​​ನಲ್ಲಿರಬೇಕು. ಈ ಅವಧಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನ ಅನೇಕ ಬಾರಿ ಪರೀಕ್ಷಿಸಲಾಗುತ್ತದೆ. ನೆಗೆಟಿವ್​ ವರದಿ ಬಂದ ನಂತರವಷ್ಠೇ ಅವರಿಗೆ ತಮ್ಮ ಕೋಣೆಗಳಿಂದ ಹೊರಬರಲು ಮತ್ತು ಹೊರಾಂಗಣ ತರಬೇತಿ ಮತ್ತು ಅಭ್ಯಾಸದ ಅವಧಿಗಳನ್ನು ಪ್ರಾರಂಭಿಸಲು ಅನುಮತಿಸಲಾಗುತ್ತದೆ.

ಓದಿ : ಮುಂಬೈ ಇಂಡಿಯನ್ಸ್ ತಂಡ ಸೇರಿದ ಪಾಂಡ್ಯ ಬ್ರದರ್ಸ್, ಸೂರ್ಯಕುಮಾರ್

ಏಪ್ರಿಲ್ 9 ರಂದು ಚೆನ್ನೈನಲ್ಲಿ ನಡೆಯಲಿರುವ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನೊಂದಿಗೆ ಸೆಣಸಲಿದೆ. ರಾಜಸ್ಥಾನ್ ರಾಯಲ್ಸ್ ತಮ್ಮ ಮೊದಲ ಪಂದ್ಯವನ್ನು ಏಪ್ರಿಲ್ 12 ರಂದು ಮುಂಬೈನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ.

ABOUT THE AUTHOR

...view details