ಮುಂಬೈ:ಬಲಾಢ್ಯ ಗುಜರಾತ್ ಟೈಟನ್ಸ್ ಹಾಗೂ ಕಳಪೆ ಪ್ರದರ್ಶನದಿಂದ ಈಗಾಗಲೇ ಪ್ರಶಸ್ತಿ ಪೈಪೋಟಿಯಿಂದ ಹೊರಬಿದ್ದ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿವೆ. ಟಾಸ್ ಸೋತ ರೋಹಿತ್ ಬಳಗ ಹಾರ್ದಿಕ್ ಪಾಂಡ್ಯಾ ಬಳಗಕ್ಕೆ 178 ರನ್ಗಳ ಗುರಿ ನೀಡಿದೆ. ಈ ಪಂದ್ಯ ಗೆದ್ದು ಪ್ಲೇ-ಆಫ್ಗೆ ಅಧಿಕೃತವಾಗಿ ಲಗ್ಗೆ ಹಾಕುವ ಕಾತುರದಲ್ಲಿದೆ ಗುಜರಾತ್ ತಂಡವಿದೆ. ಇನ್ನೊಂದೆಡೆ, ಒಟ್ಟಾರೆ ಟೂರ್ನಿಯಲ್ಲಿ 2ನೇ ಗೆಲುವು ಸಾಧಿಸುವ ಉತ್ಸಾಹ ಮುಂಬೈ ಇಂಡಿಯನ್ಸ್ ತಂಡದ್ದಾಗಿದೆ.
ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡದ ಬೌಲರ್ಗಳ ಬೆವರಿಳಿಸಿದರು. ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶಾನ್ ಜೋಡಿ ಭರ್ಜರಿ ಬ್ಯಾಟಿಂಗ್ ಮಾಡಿ, 7 ಓವರ್ಗಳಿಗೆ ವಿಕೆಟ್ ನಷ್ಟವಿಲ್ಲದೇ 74 ರನ್ಗಳನ್ನು ಕಲೆ ಹಾಕಿ ಮುನ್ನುಗುತ್ತಿತ್ತು. ಆದರೆ, 7ನೇ ಓವರ್ನ ಮೂರನೇ ಎಸೆತದಲ್ಲಿ ನಾಯಕ ರೋಹಿತ್ ಶರ್ಮಾ 43 ರನ್ಗಳು ಕಲೆ ಹಾಕಿ ಪೆವಿಲಿಯನ್ ಹಾದಿ ಹಿಡಿದರು.
ಓದಿ:IPLನಲ್ಲಿಂದು ಗುಜರಾತ್ ಸವಾಲು ಎದುರಿಸಲಿದೆ ಮುಂಬೈ: ಅರ್ಜುನ್ ತೆಂಡೂಲ್ಕರ್ಗೆ ಚಾನ್ಸ್?
ಭರ್ಜರಿ ಬ್ಯಾಟಿಂಗ್ ನಡೆಸುತ್ತಿರುವ ಇಶಾನ್ ಕಿಶಾನ್ಗೆ ಸೂರ್ಯಕುಮಾರ್ ಯಾದವ್ ಜೊತೆಯಾದರು. ಆದರೆ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದ ಸೂರ್ಯಕುಮಾರ್ ಯಾದವ್ 13 ರನ್ ಗಳಿಸಿ ಔಟಾದರು. ಬಳಿಕ ಆರಂಭಿಕ ಆಟಗಾರನಾದ ಇಶಾನ್ ಸಹಿತ 45 ರನ್ ಗಳಿಸಿ ಜೋಸೆಫ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.