ಕರ್ನಾಟಕ

karnataka

ETV Bharat / sports

ಐಪಿಎಲ್​ 2022:​​ ಇಂದು ಹೈದರಾಬಾದ್​ ಸನ್​ರೈಸರ್ಸ್​ -  ಲಖನೌ ಸೂಪರ್​ ಜೈಂಟ್ಸ್​ ಮಧ್ಯೆ ಕದನ - ಸನ್​ರೈಸರ್ಸ್​ ಹೈದರಾಬಾದ್​- ಲಖನೌ ಸೂಪರ್​ಜೈಂಟ್​ ಮಧ್ಯೆ ಪಂದ್ಯ

ಮುಂಬೈನ ಡಿ.ವೈ. ಪಾಟೀಲ್​ ಕ್ರೀಡಾಂಗಣದಲ್ಲಿ ಇಂದು ಸಂಜೆ 7.30 ಕ್ಕೆ ಸನ್​ರೈಸರ್ಸ್ ಹೈದರಾಬಾದ್​ ಮತ್ತು ಲಖನೌ ಸೂಪರ್​ ಜೈಂಟ್ಸ್​ ತಂಡಗಳ ಮಧ್ಯೆ ಕದನ ನಡೆಯಲಿದೆ. ಸಿಎಸ್​ಕೆ ವಿರುದ್ಧ ಗೆದ್ದಿರುವ ಲಖನೌ ತಂಡ ಸನ್​ರೈಸರ್ಸ್​ ವಿರುದ್ಧ ಗೆಲ್ಲುವ ಆತ್ಮವಿಶ್ವಾಸ ಹೊಂದಿದೆ. ಮೊದಲ ಪಂದ್ಯ ಸೋತಿರುವ ಸನ್​ರೈಸರ್ಸ್​ ಗೆಲುವಿಗೆ ಹಳಿಗೆ ಬರುವ ತುಡಿತದಲ್ಲಿದೆ.

IPL
ಐಪಿಎಲ್

By

Published : Apr 4, 2022, 5:57 PM IST

ಮುಂಬೈ:ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಲಖನೌ ಸೂಪರ್​ ಜೈಂಟ್ಸ್​ ತಂಡ ಇಂದು ಹೈದರಾಬಾದ್​ ವಿರುದ್ಧ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದೆ.

ಐಪಿಎಲ್​ನ ಚೊಚ್ಚಲ ಪಂದ್ಯದಲ್ಲೇ ಗುಜರಾತ್​ ಟೈಟಾನ್ಸ್​ ವಿರುದ್ಧ 5 ವಿಕೆಟ್​ಗಳಿಂದ ಸೋತಿದ್ದ ಲಖನೌ ಸೂಪರ್​ ಜೈಂಟ್ಸ್​, ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್ ತಂಡವನ್ನು 6 ವಿಕೆಟ್​ಗಳ ಗೆಲುವು ಸಾಧಿಸುವ ಮೂಲಕ ಲಯಕ್ಕೆ ಮರಳಿದೆ. ಬಲಾಢ್ಯ ಬ್ಯಾಟಿಂಗ್​ ವಿಭಾಗ ಹೊಂದಿರುವ ಲಖನೌ ತಂಡ ನಾಯಕ ಕೆ.ಎಲ್​. ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್, ಎವಿನ್​ ಲೇವಿಸ್​, ದೀಪಕ್​ ಹೂಡಾ, ಹೊಸ ಪ್ರತಿಭೆ ಆಯುಷ್​ ಬದೋನಿ ಮೇಲೆ ಅವಲಂಬಿತವಾಗಿದೆ.

ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಜೋಡಿಯಾದ ಕೆ.ಎಲ್​ ರಾಹುಲ್​ ಮತ್ತು ಕ್ವಿಂಟನ್​ ಡಿ ಕಾಕ್​ ಮೊದಲ ವಿಕೆಟ್​ಗೆ 99 ರನ್​ಗಳ ಜೊತೆಯಾಟ ನೀಡಿದ್ದರು. ಇದರಿಂದ ಸಿಎಸ್​ಕೆ ನೀಡಿದ್ದ 211 ರನ್​ಗಳ ಬೃಹತ್​ ಮೊತ್ತವನ್ನು ಭೇದಿಸಿ ಗೆಲುವು ಸಾಧಿಸಿತ್ತು. ಬೌಲಿಂಗ್ ಮುಂಭಾಗದಲ್ಲಿ ಅವೇಶ್ ಖಾನ್, ಶ್ರೀಲಂಕಾದ ದುಷ್ಮಂತ್ ಚಮೀರಾ, ಆಂಡ್ರ್ಯೂ ಟೈ ಮತ್ತು ರವಿ ಬಿಷ್ಣೋಯ್ ವಿಕೆಟ್​ ಟೇಕರ್​ಗಳಾಗಿದ್ದಾರೆ.

ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್​ ತಂಡ ತಾನಾಡಿದ ಮೊದಲ ಪಂದ್ಯದಲ್ಲೇ ರಾಜಸ್ಥಾನ ರಾಯಲ್ಸ್​ ವಿರುದ್ಧ 61 ರನ್‌ಗಳ ಸೋಲಿನ ಕಹಿ ಕಂಡಿದೆ. ನಾಯಕ ಕೇನ್ ವಿಲಿಯಮ್ಸನ್​, ಅಭಿಷೇಕ್​ ಶರ್ಮಾ, ರಾಹುಲ್​ ತ್ರಿಪಾಠಿ, ಆ್ಯಡಂ ಮಾರ್ಕ್ರಮ್​, ನಿಕೋಲಸ್​ ಪೂರನ್​ ಅವರಂತಹ ಬ್ಯಾಟ್ಸಮನ್​ಗಳನ್ನು ಹೊಂದಿದೆ. ಬೌಲಿಂಗ್​ನಲ್ಲಿ ಅನುಭವಿ ಭುವನೇಶ್ವರ್ ಕುಮಾರ್, ರೊಮಾರಿಯೊ ಶೆಫರ್ಡ್, ಉಮ್ರಾನ್ ಮಲಿಕ್, ಟಿ ನಟರಾಜನ್, ಆಲ್​ರೌಂಡರ್​ ವಾಷಿಂಗ್ಟನ್ ಸುಂದರ್ ತಮ್ಮ ಕೈಚಳಕ ತೋರಿಸಬೇಕಿದೆ.

ತಂಡಗಳು ಇಂತಿವೆ: ಲಕ್ನೋ ಸೂಪರ್ ಜೈಂಟ್ಸ್:ಕೆಎಲ್ ರಾಹುಲ್ (ನಾಯಕ), ಮನನ್ ವೋಹ್ರಾ, ಎವಿನ್ ಲೂಯಿಸ್, ಮನೀಶ್ ಪಾಂಡೆ, ಕ್ವಿಂಟನ್ ಡಿ ಕಾಕ್, ರವಿ ಬಿಷ್ಣೋಯ್, ದುಷ್ಮಂತ ಚಮೀರಾ, ಶಹಬಾಜ್ ನದೀಮ್, ಮೊಹ್ಸಿನ್ ಖಾನ್, ಮಯಾಂಕ್ ಯಾದವ್, ಅಂಕಿತ್ ರಾಜ್‌ಪೂತ್, ಅವೇಶ್ ಖಾನ್, ಆಂಡ್ರ್ಯೂ ಟೈ, ಮಾರ್ಕಸ್ ಸ್ಟೋನಿಸ್ ಕೈಲ್ ಮೇಯರ್ಸ್, ಕರಣ್ ಶರ್ಮಾ, ಕೃಷ್ಣಪ್ಪ ಗೌತಮ್, ಆಯುಷ್ ಬಡೋನಿ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್.

ಸನ್‌ರೈಸರ್ಸ್ ಹೈದರಾಬಾದ್:ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಪ್ರಿಯಮ್ ಗಾರ್ಗ್, ವಿಷ್ಣು ವಿನೋದ್, ಗ್ಲೆನ್ ಫಿಲಿಪ್ಸ್, ಆರ್ ಸಮರ್ಥ್, ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ರೊಮಾರಿಯೊ ಶೆಫರ್ಡ್, ಮಾರ್ಕೊ ಜಾನ್ಸೆನ್, ಜೆ ಸುಚಿತ್ , ಶ್ರೇಯಸ್ ಗೋಪಾಲ್, ಭುವನೇಶ್ವರ್ ಕುಮಾರ್, ಸೀನ್ ಅಬಾಟ್, ಕಾರ್ತಿಕ್ ತ್ಯಾಗಿ, ಸೌರಭ್ ತಿವಾರಿ, ಫಜಲ್ಹಕ್ ಫಾರೂಕಿ, ಉಮ್ರಾನ್ ಮಲಿಕ್, ಟಿ ನಟರಾಜನ್.

ಪಂದ್ಯ ಸಂಜೆ 7:30ಕ್ಕೆ ಆರಂಭ.

ಓದಿ:ಕ್ರಿಕೆಟ್​ ಬದುಕಿಗೆ ರಾಸ್​ ಟೇಲರ್ ವಿದಾಯ...ನೆದರ್​ಲ್ಯಾಂಡ್​ ತಂಡದಿಂದ ಗಾರ್ಡ್​ ಆಫ್​ ಆನರ್​ ಗೌರವ

ABOUT THE AUTHOR

...view details